ಹಾಸನ

ಅಣತಿ ಕೆರೆಗೆ ಏತ ನೀರಾವರಿಯಿಂದ ನೀರು: ಶಾಸಕ ಬಾಲಕೃಷ್ಣ

Published On :

ನುಗ್ಗೇಹಳ್ಳಿ: ಅಣತಿ ಕೆರೆಗೆ 1.35 ಕೋಟಿ ರು. ಅಂದಾಜು ವೆಚ್ಚದಿಂದ ನವಿಲೆ ಏತ ನೀರಾವರಿಯ ಒಂದು ಮೋಟಾರ್‌ನಿಂದ ಪೈಪ್‌ಲೈನ್ ಮೂಲಕ ಕುಡಿಯುವ ನೀರನ್ನು ಹರಿಸುವುದಾಗಿ ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಅವರು ಇಲ್ಲಿಗೆ ಸಮೀಪದ ಅಣತಿ ಶ್ರೀಚೌಡೇಶ್ವರಿ ಅಮ್ಮನವರ ನೂತನ ದೇವಾಲಯ ಶಿಲಾಮೂರ್ತಿ ಪ್ರತಿಷ್ಠಾಪನೆ ಮತ್ತು ಮೆರೆದೇವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು, 280 ಅಡಿ ಹಾಳದಲ್ಲಿ ತುಮಕೂರಿಗೆ 1500 ಕ್ಯೂಸೆಕಕ್ನೀರು ಹೋಗುತ್ತೆ. ಬಾಗೂರು ಏತ ನೀರಾವರಿಯಿಂದ 52 ಕ್ಯೂಸೆಕ್ ನವಿಲೆ ಏತ ನೀರಾವರಿಯಿಂದ 60 ಕ್ಯೂಸೆಕ್ಸ್ ನೀರು ಮಾತ್ರ ಬಳಕೆಯಾಗುತ್ತಿದೆ. ಈ ಭಾಗದ ಸಂತ್ರಸ್ಥ ರೈತರ ಹಳ್ಳಿಗೆ 300 ಕ್ಯೂಸೆಕ್ಸ್ ನೀರು ಬೇಕಾಗಿದೆ ಎಂದು ಸರ್ಕಾರಕ್ಕೆ ಒತ್ತಾಯ ಮಾಡುವುದಾಗಿ ಹೇಳಿದರು.
ಕಾಂಪೌಂಡ್ ಭರವಸೆ: ಈ ಬಿಸಿಲಿನ ತಾಪಮಾನಕ್ಕೆ ಅಂತರ್ಜಲ 400-500 ಅಡಿ ಹಾಳಲಿದೆ. ಹಿಂದಿನ ಜನಪ್ರತಿನಿಧಿಗಳು ಈ ಯೋಜನೆಯ ಅನುಕೂಲದ ಬಗ್ಗೆ ಯೋಚಿಸಿದ್ದರೆ, ಈ ತೊಂದರೆ ಬರುತ್ತಿರಲಿಲ್ಲ ಎಂದ ಅವರು, ಕೆಂಬಾಳು ಅಣತಿ ಕಾರೆಹಳ್ಳಿ ನವಿಲೆ ರಸ್ತೆ ದೇವಾಲಯಕ್ಕೆ ಕಾಂಪೌಂಡ್ ಮಾಡಿಸುವುದಾಗಿ ಭರವಸೆ ನೀಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಎ.ಇ. ಚಂದ್ರಶೇಖರ್ ಮಾತನಾಡಿ, ಧಾರ್ಮಿಕ ಮನೋಭಾವನೆಯಿಂದ  ಸಮಾಜ ಸೇವೆಗೆ ಮುಂದಾಗಬೇಕು ಎಂದರು. ಕಬ್ಬಳಿ ಆದಿಚುಂಚನಗಿರಿ ಶಾಖಾಮಠದ ಶಿವಪುತ್ರಸ್ವಾಮೀಜಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ದೇವಾರಾಜೇಗೌಡ, ಹೇಮಾವತಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಂಜುನಾಥ್, ಜಿಪಂ ಸದಸ್ಯ ಶಿವಶಂಕರ್ ಕುಂಟೆ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಆರ್. ದೊರೆಸ್ವಾಮಿ, ಎಪಿಎಂಸಿ ನಿರ್ದೇಶಕ ಶಿವಣ್ಣ, ಎಂಜಿನೀಯರ್ ಜಗದೀಶ್, ಮಾರ್ಕಂಡಯ್ಯ, ನಿವೃತ್ತ ಉಪನ್ಯಾಸಕ ಚಿಕ್ಕಣ್ಣ, ರಾಮಕೃಷ್ಣ, ತಿಗಂಬರೇಶ್ವರ ವಿದ್ಯಾ ಸಂಸ್ಥೆ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ನಾಗೇಶ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.