ಹಾಸನ

ಪ್ರಾಂಶುಪಾಲರು, ಶಿಕ್ಷಕರ ಸೇವೆ ಕಾಯಂಗಾಗಿ 17ರಂದು ಧರಣಿ

Published On :

ಹಾಸನ: ರಾಜ್ಯಮಟ್ಟದ ಎಲ್ಲಾ ವಸತಿ ಶಾಲೆಗಳಲ್ಲಿ ಹೈಕೋರ್ಟ್ ಆದೇಶದಂತೆ ಮುಂದುವರಿಯುತ್ತಿರುವ ಪ್ರಾಂಶುಪಾಲರು ಮತ್ತು ಶಿಕ್ಷಕರ ಸೇವೆಯನ್ನು  ಕಾಯಂಗೊಳಿಸಲು ಆಗ್ರಹಿಸಿ  ಫೆ.17 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ  ಅಮರಣಾಂತ ಉಪವಾಸ ಧರಣಿ  ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲರು ಹಾಗೂ ಶಿಕ್ಷಕರ ಕ್ಷೇಮಾವಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಪ್ರಯೋಜನವಾಗಿಲ್ಲ: ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಪೂರ್ಣಕಾಲಿಕ ಗೌರವಧನ ಶಿಕ್ಷಕರಾಗಿ ಖಾಲಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿ ವರ್ಷ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಬರಲು ಹಗಲಿರುಳು ಶ್ರಮಿಸುತ್ತಿರುವ ಇವರ ಸೇವೆಯನ್ನು ಕಾಯಂ ಮಾಡುವಂತೆ  ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು  ಹೇಳಿದ್ದಾರೆ.
ಮಾನದಂಡ ಯಾವುದು?: ಗೌರವಧನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ 469 ಶಿಕ್ಷಕರು ಹಾಗೂ ಪ್ರಾಂಶುಪಾಲರನ್ನು ನೇರವಾಗಿ ಸಂಘದಲ್ಲಿ ವಿಲೀನಗೊಳಿಸಿಕೊಂಡಿದ್ದಾರೆ.
ಈ ರೀತಿ ವಿಲೀನಗೊಳಿಸಿರುವ ಸಂದರ್ಭದಲ್ಲಿ ಯಾವ ಮಾನದಂಡವನ್ನು ಪಾಲಿಸಲಾಗಿದೆ ಎಂದು  ಪ್ರಶ್ನಿಸಿರುವ ಅವರು ಕೇವಲ 10 ತಿಂಗಳು ಸೇವೆ ಸಲ್ಲಿಸಿದ ನಂತರ ಬಿಡುಗಡೆಗೊಳಿಸಿ ಆನಂತರ ಕರಾರು ಪತ್ರದ ನಿಬಂಧನೆಗೆ ಒಳಪಟ್ಟ ಶಿಕ್ಷಕರನ್ನು ಹತ್ತಾರು ವರ್ಷ ಸೇವೆ  ಸಲ್ಲಿಸಿದ್ದಾರೆ ಎಂದು ನೇರವಾಗಿ ವಿಲೀನಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಉಪವಾಸ ಧರಣಿ: ಸರ್ಕಾರದ ಧೋರಣೆ ವಿರುದ್ಧವಾಗಿ ಫೆ. 17ರಂದು ಉಪವಾಸ ಧರಣಿ  ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯದ ಎಲ್ಲಾ  ವಸತಿ ಶಾಲೆಗಳಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ 800 ಶಿಕ್ಷಕರನ್ನು ನ್ಯಾಯಸಮ್ಮತವಾಗಿ ನೇಮಕ ಮಾಡಿಕೊಂಡು ಮುಂದುವರಿಸಿಕೊಂಡು ಹೋಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.