ಹಾಸನ

ಹಲಸು ಮಾರಾಟ ಬಿರುಸು

Published On :

ಜಾವಗಲ್: ಏಕಾದಶಿ ಹಬ್ಬದ ಪ್ರಯುಕ್ತ  ಸಂತೆಯಲ್ಲಿ ಹಲಸಿನ ಹಣ್ಣಿನ ವ್ಯಾಪಾರ ಬಲು ಜೋರಾಗಿತ್ತು. ಎಲ್ಲರೂ ಫಲಹಾರಕ್ಕಾಗಿ ಬಳಸುವ ಕಾರಣದಿಂದ ಗ್ರಾಹಕರು ಇತ್ತ ಹೆಚ್ಚಿನ ಒಲವು ತೋರಿದ್ದದ್ದು ಕಂಡು ಬಂದಿತು  ಉಳಿದಂತೆ ಜಾವಗಲ್ನಲ್ಲಿ ನಡೆದ ಭಾನುವಾರದ ಸಂತೆಯಲ್ಲಿ ಕೊಬ್ಬರಿ ಬೆಲೆಯಲ್ಲಿ ಸ್ವಲ್ಪ ಪ್ರಮಾಣದ ಏರಿಕೆ ಕಂಡಿತು. ಕ್ವಿಂಟಾಲ್ಗೆ 13,500- 13,700 ಆಗಿತ್ತು. ತೆಂಗಿನಕಾಯಿ 1,000ಕ್ಕೆ 10ಸಾವಿರದಿಂದ16 ಸಾವಿರ ರು.ಗಳಾಗಿತ್ತು.
ಈರುಳ್ಳಿ ಬೆಲೆ  ಕಿಲೋಗೆ ರು. 25- 30 ಆಗಿತ್ತು. ತೆಂಗಿನಕಾಯಿ ಹಾಗೂ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡಿದ್ದು, ಪ್ರತಿನಿತ್ಯ ಬಳಸುವ ಆಹಾರ ಪದಾರ್ಥಗಳಾಗಿವೆ. ಅವುಗಳನ್ನು ಜನಸಾಮಾನ್ಯರು ಉಪಯೋಗಿಸುವುದೇ ದುಸ್ತರವಾಗಿದೆ ಎಂದು ಗ್ರಾಹಕರೊಬ್ಬರು ತಿಳಿಸಿದರು. ಉಳಿದಂತೆ ತರಕಾರಿಗಳ ಬೆಲೆಯಲ್ಲೂ  ಏರಿಕೆ ಕಂಡಿದೆ. ಬೀನ್ಸ್, ಕ್ಯಾರೆಟ್, ಜವಳಿಕಾಯಿ, ಬೆಂಡೆಕಾಯಿ ಕಿಲೋಗೆ ರು. 40, ಆಲೂಗೆಡ್ಡೆ, ಬದನೆಕಾಯಿ, ಹೀರೆಕಾಯಿ ಕಿಲೋಗೆ ರು. 30 ಆಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.