ಶ್ರೀಪದ್ಧತಿ ಬತ್ತ ಬೇಸಾಯ ಕುರಿತು ತರಬೇತಿ
ಕನ್ನಡಪ್ರಭ ವಾರ್ತೆ, ಹಾಸನ, ಜು. 9
ರೈತರು ತಲಾ ತಲಾಂತರಗಳಿಂದ ಬತ್ತದ ಬೇಸಾಯ ಪದ್ಧತಿ ಮಾಡುತ್ತಾ ಬಂದಿದ್ದು, ಆದಾಗ್ಯೂ ಬತ್ತದ ಬೇಸಾಯದಲ್ಲಿ ಬದಲಾವಣೆ ಹಾಗೂ ಅಧಿಕ ಇಳುವರಿ ಬರುವಂತೆ ಮಾಡಿಕೊಂಡಿಲ್ಲವೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಸತೀಶ್ ಹೇಳಿದರು.
ತಾಲೂಕಿನ ಕಟ್ಟಾಯದ ಸಮುದಾಯ ಭವನದಲ್ಲಿ ಹೋಬಳಿ ವ್ಯಾಪ್ತಿಯ ಯೋಜನೆಗೆ ಒಳಪಟ್ಟ ಆಯ್ದ ರೈತರಿಗೆ ಇತ್ತೀಚೆಗೆ ಏರ್ಪಡಿಸಿದ್ದ ಶ್ರೀ ಪದ್ಧತಿ ಬತ್ತದ ಬೇಸಾಯ ತರಬೇತಿ ಕುರಿತು ಮಾತನಾಡಿ, ರೈತರು ಕಡಿಮೆ ನೀರು ಉಪಯೋಗಿಸಿಕೊಂಡು ಶ್ರೀ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವೆಂದು ರೈತರಿಗೆ ತಿಳಿಸಿದರು.
ಸಾಲಸೌಲಭ್ಯ, ತರಬೇತಿ: ತಾಲೂಕು ಯೋಜನಾಧಿಕಾರಿ ಲೀಲಾವತಿ ಮಾತನಾಡಿ, ಯೋಜನೆಯ ಸದಸ್ಯರಿಗೆ ಈ ವರ್ಷದಲ್ಲಿ ತೋಟಗಾರಿಕಾ ಬೆಳೆಗಳಾದ ಮಾವು, ಸಪೋಟ, ಮಲ್ಲಿಗೆ, ಅಂಗಾಂಶ ಬೆಳೆ ಹಾಗೂ ಶೌಚಾಲಯ ನಿರ್ಮಾಣ, ಗೋಬರ್ ಗ್ಯಾಸ್ ಮತ್ತು ಸೋಲಾರ್ ಅಳವಡಿಕೆ ಕುರಿತಂತೆ ಧರ್ಮಸ್ಥಳ ಯೋಜನೆಯಿಂದ ಸಿಗುವ ಸಾಲಸೌಲಭ್ಯ ತರಬೇತಿ ಬಗ್ಗೆ ಮನವರಿಕೆ ಮಾಡಿದರು.
ಇದೇ ಸಂದರ್ಭದಲ್ಲಿ ಭಾಗವಹಿಸಿದ್ದ 60 ರೈತರಿಗೆ ಬತ್ತದ ಬೇಸಾಯಕ್ಕೆ ಬೀಜೋಪಚಾರ ಮಾಡುವುದು ಹಾಗೂ ಬೀಜದ ಆಯ್ಕೆಯ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಲಾಯಿತು.
ಕೃಷಿ ಇಲಾಖೆಯ ನಾಗರಾಜು ಮಾತನಾಡಿದರು. ಮೇಲ್ವಿಚಾರಕ ಪ್ರಕಾಶ್, ಸೇವಾ ಪ್ರತಿನಿಧಿಗಳಾದ ಜ್ಯೋತಿ, ಸವಿತಾ, ರಾಧಾ, ಮಂಜುಳಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

