ಹಾಸನ

ಕಾಫಿ ಬೀಜ ಉದುರದಂತೆ ಮುಂಜಾಗ್ರತೆ ವಹಿಸಿ

Published On :

ಹಾಸನ: ಕಾಫಿ ಬೆಳೆಯುವ ಕರ್ನಾಟಕ ಮತ್ತು ಕೇರಳ ಪ್ರಾಂತ್ಯಗಳ ಹೆಚ್ಚಿನ ಪ್ರದೇಶಗಳಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೊನೆಗೊಂಡ ಹಿಂಗಾರು ಮಳೆ ಸುಮಾರು 120 ರಿಂದ 150 ದಿನಗಳಷ್ಟು ದೀರ್ಘವಾದ ಒಣ ಹವೆಯ ವಾತಾವರಣವನ್ನು ಸೃಷ್ಟಿ ಮಾಡಿದೆ.
 ಇದರೊಂದಿಗೆ ಈ ವರ್ಷದಲ್ಲಿ 2ರಿಂದ 3 ಕಂತುಗಳಲ್ಲಿ ಬಿದ್ದ ಹೂ ಮಳೆಯಿಂದಾಗಿ, ಅದರಲ್ಲೂ ವಿಶೇಷವಾಗಿ ರೊಬಸ್ಟಾ ಗಿಡಗಳಲ್ಲಿ 2ರಿಂದ 3 ಸಲ ಹೂವು ಅರಳಿದ್ದು, ಬೆಳವಣಿಗೆ ಆಗುತ್ತಿರುವ ಕಾಫಿ ಕಾಯಿಗಳು ಬೇರೆ ಬೇರೆ ಗಾತ್ರಗಳನ್ನು ಹೊಂದಿರುತ್ತವೆ.
 ಕಾಂಡ ಕೊರಕ ಕೀಟ: ಇದರ ನಂತರ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಒಳ್ಳೆಯ  ಬೇಸಿಗೆ ಮಳೆಯಾಗಿತ್ತ್ತು. ಆದರೂ ಹಗಲಿನ ಉಷ್ಣತೆ ಹೆಚ್ಚಳವಾಗಿದ್ದರ ಪರಿಣಾಮವಾಗಿ, ಅರೇಬಿಕಾ ಗಿಡಗಳಲ್ಲಿ ಬಿಳಿ ಕಾಂಡ ಕೊರಕ ಕೀಟ ಮತ್ತು ಎಲೆ ತುಕ್ಕುರೋಗದ ಬಾಧೆ ಕಾಣಿಸಿಕೊಂಡಿದೆ ಎಂದು ಚಿಕ್ಕಮಗಳೂರು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ಸಂಶೋಧನಾ ನಿರ್ದೇಶಕರು ತಿಳಿಸಿದ್ದಾರೆ.
 ಈ ದುರ್ಬಲ ಮುಂಗಾರಿನ ಕಾರಣ ಕರ್ನಾಟಕ ಮತ್ತು ಕೇರಳ ಪ್ರಾಂತ್ಯಗಳ ಬಹುತೇಕ ಎಲ್ಲಾ ಕಾಫಿ ಬೆಳೆಯುವ  ಪ್ರದೇಶಗಳಲ್ಲಿ ಜೂನ್ ಕೊನೆಯ ಹೊತ್ತಿಗೆ ಶೇ.40 ರಿ0ದ 50ರಷ್ಟು ಮಳೆಯ ಕೊರತೆ ಉಟಾಗಿದೆ. ಹಿಂಗಾರು ಮಳೆ ಭಾವಕ್ಕೆ ಒಳಪಡುವ ತಮಿಳುನಾಡಿನಲ್ಲಿ ಇದೇ ಅವಧಿಗೆ ಶೇ.10 ರಿ0ದ 15ರಷ್ಟು ಕೊರತೆ ಕಂಡುಬಂದಿದೆ ಎಂದು ಹೇಳಿದ್ದಾರೆ.
ರೋಗ ಉಲ್ಬಣ ಸಾಧ್ಯತೆ: ದುರ್ಬಲ ಮುಂಗಾರಿನ ಪರಿಸ್ಥಿತಿಯು  ಇನ್ನೂ ಕೆಲವು ವಾರಗಳವರೆಗೆ ಮುಂದುವರಿದದ್ದೇ ಆದಲ್ಲಿ, ರೊಬಸ್ಟಾ ಗಿಡಗಳಲ್ಲಿ ಇನ್ನೂ ಹೆಚ್ಚಿನ ಎಳೆಯ ಕಾಫಿ ಕಾಯಿಗಳು ಉದುರುವ ಸಭವವಿದೆ.
ಇದರೊಂದಿಗೆ ಆಗಾಗ್ಗೆ ಬರುವ ಮಳೆ, ಪ್ರಖರವಾದ ಬಿಸಿಲು, ಮುಂಜಾನೆಯಲ್ಲಿ ಬೀಳುವ ಮಂಜು ಇವುಗಳಿಂದಾಗಿ ಎಲೆ ತುಕ್ಕು ರೋಗವೂ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.  ಆದ್ದರಿಂದ ಮುನ್ನೆಚ್ಚರಿಕೆಯ ಸಲುವಾಗಿ ಬೆಳೆಗಾರರು ಕೆಲವು ಅಗತ್ಯ ಕ್ರಮ ಕೈಗೊಳ್ಳುವುದು ಸೂಕ್ತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.