ಚಿರಂಜೀವಿಗಳಲ್ಲಿ ವೇದವ್ಯಾಸರು ಮೂರನೆಯವರು
ಹೊಳೆನರಸೀಪುರ: ವೇದವ್ಯಾಸಮನಿಗಳು ಮಹಾಭಾರತ ಮತ್ತು ಬ್ರಹ್ಮ ಸೂತ್ರಗಳನ್ನು ರಚಿಸಿದ್ದು ಅವರು ಏಳು ಮಂದಿ ಚಿರಂಜೀವಿಗಳಲ್ಲಿ ಮೂರನೆಯವರು ಎಂದು ದೊಡ್ಡಕಾಡನೂರಿನ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಸೋಮಣ್ಣ ಹೇಳಿದರು.
ತಾಲೂಕಿನ ದೊಡ್ಡಕಾಡನೂರು ಗ್ರಾಮದ ಜೆಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಗುರುಪೌರ್ಣಿಮೆ ದಿನಾಚರಣೆಯಲ್ಲಿ ಮಾತನಾಡಿ, ಮಹಾಭಾರತದ ಕರ್ತೃ ವೇದವ್ಯಾಸರು. ಇವರು ಯಮುನಾ ನದಿಯ ದ್ವೀಪದಲ್ಲಿ ಜನಿಸಿದ ಕಾರಣ ದ್ವೈಪಾಯನ ಎಂದು ಹಾಗೂ ಅವರ ಶರೀರ ಕಪ್ಪಗಿದ್ದರಿಂದ ಅವರನ್ನು ಕೃಷ್ಣ ಎಂದು ಕರೆಯುತ್ತಿದ್ದರು ಎಂದರು.
ಆಷಾಢ ಪೌರ್ಣಿಮೆ: ಪ್ರೌಢಶಾಲೆಯ ವಿದ್ಯಾರ್ಥಿನಿ ಶಿಲ್ಪ ಮಾತನಾಡಿ, ಆಷಾಢ ಪೌರ್ಣಿಮೆ ದಿನವನ್ನು ಗುರುಪೌರ್ಣಿಮೆ ಎನ್ನುತ್ತೇವೆ. ಪಾಶ್ಚಿಮಾತ್ಯ ನಾಗರಿಕತೆಯ ಪ್ರಭಾವಕ್ಕೂ ಸಾವಿರಾರು ವರ್ಷಗಳ ಮೊದಲೇ ನಮ್ಮಲ್ಲಿ ಗುರು ಪೂಜೆಯನ್ನು ಮತ್ತು ಗುರುಪೌರ್ಣಿಮೆ ಪರಂಪರೆಯನ್ನು ನಮ್ಮ ಋಷಿಮುನಿಗಳು ಹುಟ್ಟು ಹಾಕಿದರು ಎಂದರು.
ಗುರುಕುಲ ವ್ಯವಸ್ಥೆಯಲ್ಲಿ ಆಚಾರ್ಯ ಪ್ರಭಾನ್ನಚಾರ್ಯ, ಅಧ್ಯಕ್ಷ, ಕುಲಪತಿ ಎಂಬುದು ಈಗಿನ ಶಿಕ್ಷಕ, ಮುಖ್ಯಶಿಕ್ಷಕ ಮೊದಲಾದ ಸ್ಥಾನಮಾನಗಳನ್ನು ಗುರುತಿಸುತ್ತಿದ್ದು ಸಾಹಿತ್ಯ, ವಿಜ್ಞಾನ, ಕರಕುಶಲ, ಕೃಷಿ, ಯೋಗ, ವೈದ್ಯ ಎಂಬ ಐದು ಮುಖಗಳಲ್ಲಿ ಪ್ರತ್ಯೇಕವಾಗಿ ನೂರಾರು ಉಪಶಾಖೆಗಳನ್ನು ಕಲಿಸುತ್ತಿದ್ದುದ್ದನ್ನು ನಾವು ತಿಳಿದುಕೊಂಡಿದ್ದೇವೆ ಎಂದು ತಿಳಿಸಿದರು.
ಯಶಸ್ಸು: ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಮಹೇಶ್ ಮಾತನಾಡಿ, ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು. ಯಾರಿಗೆ ಗುರು ಮತ್ತು ಗುರಿ ಎರಡೂ ಇರುತ್ತವೋ, ಅವರಿಗೆ ಯಶಸ್ಸು ಸುಲಭವಾಗಿ ಲಭ್ಯವಾಗಲಿದೆ ಎಂದು ತಿಳಿಸಿದರು. ಗುರುಪೂರ್ಣಿಮೆಯ ಪ್ರಯುಕ್ತ ಗುರುಪರಂಪರೆಯ ಬಗ್ಗೆ ಪ್ರಬಂಧ ಸ್ಪರ್ಧೆ ಚಿತ್ರಕಲಾ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ದೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಿ.ಇಡಿ ವಿಭಾಗದ ಮುಖ್ಯಸ್ಥರಾದ ಎಸ್.ಎನ್. ನಾಗೇಂದ್ರಪ್ರಸಾದ್, ಪ್ರೌಢಶಾಲೆಯ ಮುಖ್ಯಸ್ಥರಾದ ಬಸವಣ್ಣ ಹಾಗೂ ಉಪನ್ಯಾಸಕರು ಇದ್ದರು. ವಿದ್ಯಾರ್ಥಿಗಳಾದ ಸಂಧ್ಯಾ ಮತ್ತು ತಂಡ ಪ್ರಾರ್ಥನೆ ಮಾಡಿದರು. ಭಾನುಪ್ರಕಾಶ್ ನಿರೂಪಿಸಿ, ಪ್ರವೀಣ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

