ದೇವಾಲಯಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ): ಹಾಸನ ತಾಲೂಕಿನ ದುದ್ದ ಹೋಬಳಿ ಮುದಿಗೆರೆಯ ಓಂಕಾರೇಶ್ವರ ದೇವಾಲಯಕ್ಕೆ ಬರುವ ಭಕ್ತರ ಅನುಕೂಲಕ್ಕೆ ಬಸ್ ಸೌಕರ್ಯ ಒದಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ದೇವಾಲಯಕ್ಕೆ ಬರಲು ಗಂಡಸಿಹಾಂಡ್ ಪೋಸ್ಟ್‌ನಿಂದ ಹಾಸನದ ರಸ್ತೆಯಲ್ಲಿ 7 ಕಿ.ಮೀ ಹೋಗಿ ಎಡಕ್ಕೆ 3 ಕಿ.ಮೀ ಒಳಗೆ ಹೋಗಬೇಕು ದುದ್ದದಿಂದ 10 ಕಿ.ಮೀ ಅಟ್ಟವರ ಗ್ರಾಮದಿಂದ 2 ಕಿ.ಮೀ ಆಗುತ್ತದೆ. ಈ ದೇವಾಲಯಕ್ಕೆ ಡಾಂಬರ್ ರಸ್ತೆ ಇದೆ. ಬಸ್ ಸೌಕರ್ಯ ಒದಗಿಬೇಕೆಂದು ಭಕ್ತರ ಕೋರಿಕೆಯಾಗಿದೆ.
ಮಹಿಮೆಯಿಂದ ಬರುವ ಭಕ್ತರ ಸರ್ವ ಸಂಕಷ್ಟಗಳನ್ನು ಪರಿಹರಿಸಿ ನಂಬಿದ ಎಲ್ಲಾ ಜನಾಂಗದವರು ನಿತ್ಯ ಬಂದು ಪೂಜೆ ಸಲ್ಲಿಸುತ್ತಿರುವುದು ವಿಶೇಷವಾಗಿದೆ. ಇಲ್ಲಿನ ದೇವರನ್ನು ಪ್ರಾರ್ಥಿಸಿದರೆ ಯಾವುದೇ ಕಷ್ಟದ ಕೆಲಸಗಳು ಸುಗಮವಾಗಿ ಆ ಕೆಲಸಗಳು ಶೀಘ್ರ ಆಗುತ್ತವೆ ಎಂದು ಎಪಿಎಂಸಿ ನಿರ್ದೇಶಕ ವಳಗೆರಹಳ್ಳಿ ಶಿವಸ್ವಾಮಿ, ಶಿವೇಗೌಡ ಹೇಳುತ್ತಾರೆ. ಇದೇ ಕಾರಣದಿಂದ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ.
ಸಪ್ತಮಾತೃಕೆಯರು, ಭ್ರಮಾಣಿ, ಮಾಹೇಶ್ವರಿ, ವೈಷ್ಣವಿ, ವರಾಹಿ, ಇಂದ್ರಾಣಿ, ಕೌಮಾರಿ ಮತ್ತು ಚಾಮುಂಡ ದೇವಾಲಯಗಳು ಒಂಕಾರೇಶ್ವರ ದೇವಾಲಯದ ಹಿಂದಿವೆ ನಿತ್ಯ ಪೂಜೆ ನಡೆಯುತ್ತವೆ. ಆದ್ದರಿಂದ ಬಸ್ ಸೌಕರ್ಯ ಕಲ್ಪಿಸಬೇಕೆಂದು ಓಂಕಾರೇಶ್ವರ ಗುಡಿ ಧರ್ಮದರ್ಶಿ ಮಂಜುನಾಥ ಭಟ್ಟರು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

