ಆರೋಗ್ಯ ಏರು ಪೇರು: ಪುಷ್ಪಗಿರಿ ಶ್ರೀ ಆತಂಕ
ಬೇಲೂರು: ಕೃಷಿಯಲ್ಲಿ ಹೇರಳವಾಗಿ ವಿಷಯುಕ್ತ ಔಷಧಗಳ ಬಳಕೆಯಿಂದ ಆಹಾರ ಉತ್ಪನ್ನಗಳು ವಿಷದಿಂದ ಕೂಡಿ, ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಪುಷ್ಪಗಿರಿ ಮಠದ ಶ್ರೀಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ವತಿಯಿಂದ ವಿಶ್ವ ಗುರು ಬಸವಣ್ಣನವರ ಜಯಂತಿ ಹಾಗೂ ಸಿದ್ದಗಂಗಾ ಡಾ. ಶಿವಕುಮಾರಸ್ವಾಮೀಜಿಗಳ 107 ಜನ್ಮ ದಿನದ ಅಂಗವಾಗಿ ಉಚಿತ ರಕ್ತದಾನ ಶಿಬರ ಉದ್ಘಾಟನೆ ನಡೆಸಿದ ನಂತರ ಮಾತನಾಡಿ, ಕೃಷಿ ಪದ್ಧತಿ ಸಾವಯವ ಬೇಸಾಯವನ್ನು ರೈತರು ಗಮನ ನೀಡಬೇಕು. ಇಲ್ಲವಾದರೆ ಮುಂದಿನ ದಿನದೊಳಗೆ ಗಾಳಿ ಕೂಡ ವಿಷವಾಗುವ ಸೂಚನೆ ಇದೆ ಎಂದು ತಿಳಿಸಿದರು.
ಇಂದು ವಿಶ್ವ ಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಉಚಿತ ರಕ್ತದಾನ ಶಿಬರ ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ಮಹತ್ವ ಬಂದಿದೆ ಎಂದ ಅವರು ಅದ್ದೂರಿ ಕಾರ್ಯಕ್ರಮಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ರಕ್ತದಾನ ವಿಶೇಷವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್. ಲಿಂಗೇಶ್ ಮಾತನಾಡಿ, ಈ ಭಾರಿ ಲೋಕಸಭಾ ಚುನಾವಣೆ ದಿಸೆಯಲ್ಲಿ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಅದ್ಧೂರಿಯಿಂದ ಅಚರಣೆ ಮಾಡಲು ಸಾದ್ಯವಾಗಲಿಲ್ಲ, ಅದರೆ ಯುವ ಘಟಕ ವತಿಂದ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಸಭೆಗೆ ಮಹತ್ವ ಬಂದಿದೆ ಎಂದರು.
ಡಾ. ಶಿವಕುಮಾರಸ್ವಾಮೀಜಿಗಳು ಸದ್ಯ 107 ನೇ ಜನ್ಮದಿನ ಅಚರಣೆ ಮಾಡಿದ್ದು, ಮುಂದಿನ ದಿನದಲ್ಲಿ ಇನ್ನು ಉತ್ತಮ ಕಾರ್ಯಕ್ರಮ ಏರ್ಪಡಿಸಿ, ಸಮಾಜಕ್ಕೆ ಸಂದೇಶ ನೀಡಲಾಗುತ್ತದೆ ಹಾಗೂ ತಾಲೂಕಿನ ಸಂಘಟನೆಗೆ ಒತ್ತು ನೀಡಲಾಗುತ್ತದೆ ಎಂದರು.
ತಾಲೂಕು ವೀರಶೈವ ಯುವ ಘಟಕದ ಅಧ್ಯಕ್ಷ ಹೆಬ್ಬಾಳು ಉಮಾಶಂಕರ್ ಮಾತನಾಡಿ, 12 ನೇ ಶತಮಾನದಲ್ಲಿ ವಿಶ್ವ ಗುರು ಬಸವಣ್ಣನವರು ತಮ್ಮ ಕ್ರಾಂತಿಕಾರಿ ವಿಚಾರಧಾರೆಗಳಿಂದ ವಿಶ್ವದ ಗಮನ ಸೆಳೆದಿದ್ದಾರೆ, ಅಂತಯೇ 21 ನೇ ಶತಮಾನದಲ್ಲಿ ಬಸವಣ್ಣನವರ ಅಧರ್ಶ ಹಾಗೂ ಕಾಯಕ ತತ್ವಗಳನ್ನು ಅಳವಡಿಕೊಂಡು ನಮ್ಮಗೆ ಅಧುಕಿನ ಬಸವಣ್ಣ ಸಿದ್ದಗಂಗಾ ಶ್ರೀ ಡಾ. ಶಿವಕುಮಾರಸ್ವಾಮೀಜಿ ಎಂದರು.
ಸಿದ್ದಗಂಗಾ ಶ್ರೀಗಳ ಜೀವನ ನಮಗೆ ದಾರಿದೀಪವಾಗಬೇಕು ಎಂದು ತಿಳಿಸಿದ ಅವರು, ಮುಂದಿನ ಸಿದ್ದಗಂಗಾ ಶ್ರೀಗಳ ಜನ್ಮ ದಿನಕ್ಕೆ 108 ಯುವಕರಿಂದ ರ್ರಕ್ತದಾನ ಶಿಬರವನ್ನು ನಡೆಸಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರೇಣುಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಅಡಗೂರು ಆನಂದ್, ಡಾ. ನರಸೇಗೌಡ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ವೀರಶೈವ ಮುಖಂಡ ವಕೀಲ ಸಿ.ಎಂ. ನಿಂಗರಾಜು, ರಾಜಶೇಖರ್, ಕನ್ನನಾಯಕಹಳ್ಳಿ ಮಹದೇವಪ್ಪ, ವಿಕ್ರಂ ಕೌರಿ, ಪ್ರದೀಪ್, ಡಾ. ಸೌಮ್ಯ, ಯುವ ಘಟಕದ ಸದಸ್ಯರಾದ ಬಳ್ಳೂರು ಪ್ರದೀಪ್ ಕುಮಾರ್, ನಗರಾಧ್ಯಕ್ಷ ಬಿ.ಎಲ್.ರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

