ಹಳೇ ಬಸ್ ನಿಲ್ದಾಣದ ಬಳಿ ಶೌಚಾಲಯ ನಿರ್ಮಿಸಿ
ಹಾಸನ ನಗರದ ಹಳೇ ಬಸ್ ನಿಲ್ದಾಣ ಬಳಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಶೆಡ್ ನಿರ್ಮಿಸಿ ಪ್ರಯಾಣಿಕರ ತಂಗುದಾಣವನ್ನೇನೋ ನಿರ್ಮಿಸಿದೆ. ಆದರೆ ಶೌಚಾಲಯವಿಲ್ಲದೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ರಾಜ್ಯದ ಮುಂದುವರಿದ ಜಿಲ್ಲೆಗಳಲ್ಲಿ ಹಾಸನವೂ ಒಂದು. ಆದರೆ ಜಿಲ್ಲಾ ಕೇಂದ್ರದಲ್ಲಿ ಜನರಿಗೆ ಕನಿಷ್ಠ ಮೂಲ ಸೌಲಭ್ಯಗಳು ಮರಿಚೀಕೆ ಯಾಗಿರುವುದು ದುರಂತವೇ ಸರಿ. ಕುಡಿಯುವ ನೀರು, ಸ್ವಚ್ಛತೆ ಹಾಗೂ ಶೌಚಾಲಯಗಳು ಅಗತ್ಯವಾಗಿ ಬೇಕಾಗುತ್ತದೆ. ಇದರ ಜವಾಬ್ದಾರಿ ನಗರಸಭೆ ಹಾಗೂ ಜಿಲ್ಲಾಡಳಿತದ್ದು. ಆದರೆ ಹಾಸನ ನಗರದಲ್ಲಿ ಇದಕ್ಕೆ ಕೊರತೆ ಉಂಟಾಗಿರುವುದು ಕಂಡು ಬರುತ್ತಿದೆ. ಈಗಾಗಲೇ ನಗರದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಗೊಂಡು 3-4 ವರ್ಷಗಳೇ ಕಳೆದಿದ್ದು, ದೂರದ ಜಿಲ್ಲೆ ಗಳಿಗೆ, ತಾಲೂಕುಗಳಿಗೆ ಪ್ರಯಾಣಿಕರು ಇಲ್ಲಿಂದ ಪ್ರಯಾಣ ಬೆಳೆಸಿದರೂ ಹಾಸನ ತಾಲ್ಲೂಕು ಸೇರಿ ದಂತೆ ಸುತ್ತಮುತ್ತ ನಗರ ಬಡಾವಣೆ ಗಳಿಗೆ ಜನರು ಪ್ರಯಾಣ ಮಾಡಲು ಸಿಟಿ ಬಸ್ ನಿಲ್ದಾಣವನ್ನು ಅವಲಂಬಿಸಬೇಕಾಗಿದೆ.
ಹಳೇ ಬಸ್ ನಿಲ್ದಾಣ ತೆರವು ಗೊಂಡ ನಂತರ ದಿನಗಳಲ್ಲಿ ಪ್ರಯಾಣಿಕರು ನಗರ ಪ್ರದೇಶಗಳ ಬಡಾವಣೆಗಳಿಗೆ ತೆರಳಲು ಪರದಾಡುತ್ತಿದ್ದುದ್ದನ್ನು ಮನಗಂಡು ಜಿಲ್ಲಾಡಳಿತ ಈಗಾಗಲೇ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ಇಲ್ಲಿಂದ ಜನರು ನಗರ ಪ್ರದೇಶಗಳಿಗೆ ಪ್ರಯಾಣ ಬೆಳೆಸಲು ಅನುಕೂಲ ಮಾಡಿ ಕೊಟ್ಟಿದೆ. ಆದರೆ ಇಲ್ಲಿ ಮೂಲ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟು ಕೊಳ್ಳದೇ ಬಸ್ ನಿಲ್ದಾಣ ನಿರ್ಮಾಣ ಮಾಡಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಬಡಾವಣೆಗಳಿಗೆ ತೆರಳಲು ವ್ಯವಸ್ಥಿತವಾಗಿ ಸಿಟಿ ಬಸ್ಸುಗಳು ಇದ್ದರೂ ಪ್ರಯಾಣಿಕರು ಬಡಾವಣೆಗಳಿಗೆ ತಲುಪಲು ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಕಾಯಲೇ ಬೇಕಾಗುತ್ತದೆ. ಇಂತಹ ಸನ್ನಿವೇಶ ಇರುವಾಗ ಪ್ರಯಾಣಿಕರು ಮೂತ್ರ ವಿಸರ್ಜನೆ ಮಾಡಬೇಕಾದರೆ ಅಲ್ಲಿ ಶೌಚಾಲಯಗಳೇ ಇಲ್ಲ. ಬಾಯಾರಿಕೆ ಯಾದರೆ ಕುಡಿಯುವ ನೀರಿನ ಸೌಲಭ್ಯವೇ ಇಲ್ಲದಂತಾದರೆ ಅಂತಹ ಸಂದರ್ಭ ಊಹಿಸಿಕೊಳ್ಳಲು ಕಷ್ಟ ಸಾಧ್ಯ ಎನ್ನುವಂತಾಗಿದೆ.
ನಗಸಭೆ ಜನರ ಹಣವನ್ನು ಬಳಸಿಕೊಂಡೇ ನಗರದಲ್ಲಿ ಜನತೆಗೆ ತಲೆದೋರಿರುವ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಬೇಕಾಗಿದೆ. ನಗರವೂ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಬಡಾವಣೆಗಳಿಗೊಂದು ಶೌಚಾಲಯ ನಿರ್ಮಾಣ ಮಾಡು ವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ಚಿಂತಿಸಬೇಕಾಗಿದೆ.
-ವೆಂಕಟೇಶ್, ಬ್ಯಾಕರವಳ್ಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

