ಸಹಕಾರಿ ಸಂಘಗಳ ಸಮಾಪನೆ
ಹಾಸನ: ಸಹಕಾರ ಸಂಘಗಳ ಕಾಯ್ದೆ, ಕಲಂ ಮತ್ತು ನಿಯಮಗಳು ಹಾಗೂ ಸಂಘದ ಬೈಲಾ ರೀತಿ ಕಾರ್ಯನಿರ್ವಹಿಸದೆ ಜಿಲ್ಲೆಯ ಸಹಕಾರ ಸಂಘಗಳು ಸ್ಥಗಿತಗೊಂಡಿವೆ.
ಅವುಗಳನ್ನು ಸಮಾಪನೆಗೊಳಿಸಲು ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಪ್ರಸ್ತಾವನೆ ಸಲ್ಲಿಸಬೇಕಾಗಿರುವುದರಿಂದ ಸದರಿ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಷೇರುದಾರರು ಇವುಗಳನ್ನು ಸಮಾಪನೆಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ತಮ್ಮ ಆಕ್ಷೇಪಣೆಗಳೇನಾದರೂ ಇದ್ದರೆ, ಈ ಪ್ರಕಟಣೆ ಪ್ರಕಟಗೊಂಡ ದಿನಾಂಕದಿಂದ ಒಂದು ವಾರದೊಳಗೆ ಕಚೇರಿ ಸಂಪರ್ಕಿಸುವುದು. ಇಲ್ಲದಿದ್ದಲ್ಲಿ ಸದರಿ ಸಂಘಗಳ ಸಮಾಪನೆ ಪ್ರಸ್ತಾವನೆ ಸಲ್ಲಿಸುವ ಕುರಿತು ಯಾವುದೇ ಆಕ್ಷೇಪಣೆಯೂ ಇರುವುದಿಲ್ಲವೆಂದು ಪರಿಗಣಿಸಿ ಸಮಾಪನೆ ಪ್ರಸ್ತಾವನೆ ಸಲ್ಲಿಸಲು ಕ್ರಮವಿಡಲಾಗುವುದು ಎಂದು ಹಾಸನ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಡಿ. ಪರಮೇಶ ತಿಳಿಸಿದ್ದಾರೆ.
ಹಾಸನ ಉಪವಿಭಾಗದ ಹಾಸನ ಜಿಲ್ಲಾ ಪೊಲೀಸ್ ಅಫೀಷಿಯಲ್ ನೌಕರರ ಸಹಕಾರ ಸಂಘ ನಿ., ಹಾಸನ. ಜಿಲ್ಲಾ ಸಹಕಾರ ವ್ಯವಸಾಯ ಉತ್ಪನ್ನ ಮಾರಾಟ ಒಕ್ಕೂಟ ಹಾಸನ. ಹಾಲು ಉತ್ಪಾದಕರ ಸಹಕಾರ ಸಂಘ ನಿ., ಹೊಮ್ಮಗೌಡನಹಳ್ಳಿ ಖಾದಿ ಗ್ರಾಮೋದ್ಯೋಗ ವಿವಿಧೋದ್ದೇಶ ಸಹಕಾರ ಸಂಘ ನಿ., ಬೈಲಹಳ್ಳಿ. ಕೆ.ಆರ್.ಗೃ ಹ ನಿರ್ಮಾಣ ಸಹಕಾರ ಸಂಘ ನಿ. ಹಾಸನ . ನೀರು ಬಳಕೆದಾರರ ಸಹಕಾರ ಸಂಘ ನಿ., ಬೈಲಹಳ್ಳಿ ಶಂಖ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಅರಸೀಕೆರೆ ತಾ. ಸಹಕಾರ ಸಂಘ ನಿ., ಅರಸೀಕೆರೆ . ಗೊಲ್ಲರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಬೆಳಗುಂಬ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಮೂಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಚನ್ನರಾಯಪಟ್ಟಣ ತಾಲೂಕಿನ ಲಕ್ಷ್ಮೀಪುರ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಚನ್ನರಾಯಪಟ್ಟಣ . ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘ ನಿ., . ಸೋಮನಾಥನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ನಿ., . ಭಕ್ತ ಕನಕದಾಸ ಉಣ್ಣೇ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘ ನಿ., ಬಿದರೆ. ಎಸ್ಸಿಎಸ್ಟಿ ತೆಂಗಿನ ನಾರಿನ ಕೈಗಾರಿಕಾ ಸಹಕಾರ ಸಂಘ ನಿ., ಎಂ.ಕೆ.ಹೊಸೂರು. ಎಸ್ಸಿಎಸ್ಟಿ ತೆಂಗಿನ ನಾರಿನ ಕೈಗಾರಿಕಾ ಸಹಕಾರ ಸಂಘ ನಿ., ಚಿನ್ನೇನಹಳ್ಳಿ. ಬಾಹುಬಲಿ ತಾಂತ್ರಿಕ ವಿದ್ಯಾಲಯದ ನೌಕರರ ಸಹಕಾರ ಸಂಘ ನಿ., ಶ್ರವಣಬೆಳಗೊಳ ಮತ್ತು ಹೊಳೆನರಸೀಪುರ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಕಳ್ಳಿಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘ ನಿ., ಸಿಂಗಾಪುರಪಾಳ್ಯ ಗಳನ್ನು ಸಮಾಪನೆಗೊಳಿಸಲು ಕ್ರಮ ವಹಿಸಲಾಗುವುದು ಎಂದು ಹಾಸನ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಂ.ಡಿ. ಪರಮೇಶ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

