ಪ್ರಾಣಿ ಬೇಟೆಯಾಡುತ್ತಿದ್ದ ತಂಡದ ಬಂಧನ: ಮೌಸ್ ಡೀರ್ ವಶ
ಸಕಲೇಶಪುರ: ಪಶ್ಚಿಮಘಟ್ಟದ ಅರಣ್ಯದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ತಂಡವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ.
ಮೌಸ್ಡೀರ್ ಎಂಬ ಪ್ರಾಣಿಯನ್ನು ಬೇಟೆಯಾಡಿದ್ದ ತಾಲೂಕಿನ ಚಿನ್ನಹಳ್ಳಿ ಗ್ರಾಮದ ಕೃಷ್ಣ ಹಾಗೂ ಕರಡಿಗಾಲ ಗ್ರಾಮದ ಸುಬ್ರಮಣ್ಯ ಎಂಬುವರನ್ನು ಬಂಧಿಸಲಾಗಿದ್ದರೆ. ಹಿರದನಹಳ್ಳಿ ಗ್ರಾಮದ ಗಣೇಶ್, ಹೊಸಳ್ಳಿ ಗ್ರಾಮದ ಶ್ರೀಕಾಂತ್, ಪ್ರಕಾಶ್ ಹಾಗೂ ಸುಬ್ಬಣ್ಣ ಎಂಬುವರು ಪರಾರಿಯಾಗಿದ್ದಾರೆ.
ಬೇಟೆ ಜಾಲ ಭೇದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು
ತಾಲೂಕಿನ ಚಿನ್ನಹಳ್ಳಿ ಗ್ರಾಮದ ಸುಬ್ರಮಣ್ಯ ಎಂಬುವವರ ಮನೆಯಲ್ಲಿ ಕಡವೆ ಬೇಟೆಯಾಡಿ ಅಡುಗೆ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ವಿಶ್ವಪರಿಸರ ದಿನವಾದ ಗುರುವಾರ ಹಠಾತ್ ದಾಳಿ ನಡೆಸಿ ಆರೋಪಿ ಸುಬ್ರಹಣ್ಯ ಎಂಬುವರನ್ನು ಬಂಧಿಸಿ ಕಡವೆ ಮಾಂಸ ಹಾಗೂ ಅಡುಗೆಯನ್ನು ಅಧಿಕಾರಿಗಳು ವಶಪಡಿಸಿಕೊಂಡರು.
ಈ ಸಂದರ್ಭದಲ್ಲಿ ಬಂಧಿತ ಆರೋಪಿಯ ಹೇಳಿಕೆಯಂತೆ ಕೆಂಪುಹೊಳೆ ರಕ್ಷಿತಾರಣ್ಯದಲ್ಲಿ ಬೇಟೆಗೆ ತೆರಳಿದ್ದ ಮತ್ತೊಂದು ತಂಡವನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನ ಮಾಹಿತಿ ಆಧರಿಸಿ ವ್ಯಾಗನರ್ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 48ರ ಶಿರಾಡಿಘಾಟ್ ಸಮೀಪವಿದ್ದಾಗ ಕರಡಿಗಾಲ ಗ್ರಾಮದ ಕೃಷ್ಣನನ್ನು ವಶಕ್ಕೆ ಪಡೆದರು. ಮಿಕ್ಕ ಆರೋಪಿಗಳು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಂಡು ಬೇಟೆಯನ್ನು ಎಸೆದು ಪರಾರಿಯಾಗಿದ್ದಾರೆ.
ಕಾರ್ಯಾಚರಣೆಯ ನೇತೃತ್ವವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ವೇಂಕಟೇಶ್ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಹದೇವ್, ಸಿಬ್ಬಂದಿಗಳಾದ ಪೃಥ್ವಿ, ರಘು, ನಾಗೇಶ್, ಮುಬಾರಕ್ ಮುಂತಾದವರು ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

