ಹಾಸನ

ನ್ಯಾಯ ಬೆಲೆ ಅಂಗಡಿಗಳ ಕಾರ್ಯವೈಖರಿಗೆ ಕರವೇ ಆಕ್ರೋಶ

Published On :

ಬೇಲೂರು: ತಾಲೂಕಿನಲ್ಲಿರುವ ನ್ಯಾಯ ಬೆಲೆ ಅಂಗಡಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅನ್ಯಾಯದ ದಾರಿಯಲ್ಲಿ ಇವೆ. ಈ ಬಗ್ಗೆ ಸೂಕ್ತ ಕ್ರಮ ಕೈ ಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಹಾರ ಇಲಾಖೆಯ ಕಚೇರಿಗೆ ಬಂದು ಶಿರಸ್ತೇದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ನ್ಯಾಯ ಬೆಲೆ ಅಂಗಡಿಗಳು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಮತ್ತು ಸಂಜೆ 4 ರಿಂದ ರಾತ್ರಿ 8 ರವರೆಗೆ ಬಾಗಿಲು ತೆರೆಯಬೇಕು ಎಂಬುದು ಸರ್ಕಾರದ ಆದೇಶವಾಗಿದೆ. ಆದರೆ, ತಾಲೂಕಿನಲ್ಲಿರುವ ಬಹುತೇಕ ನ್ಯಾಯಬೆಲೆ ಅಂಗಡಿಗಳು ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ವಾರಕ್ಕೆ 2 ದಿನ ಬಾಗಿಲು ತೆರೆಯುತ್ತಿದ್ದಾರೆ. ಅಲ್ಲದೆ ತಿಂಗಳು ಪೂರ್ತಿ ಬಾಗಿಲು ತೆರೆಯಬೇಕು ಎಂಬ ನಿಯಮವಿದ್ದರೂ ಮನಸಿಗೆ ಬಂದಾಗ ಅಂಗಡಿ ತೆಗೆಯುತ್ತಾರೆ.  ಸೀಮೆ ಎಣ್ಣೆಯನ್ನು ವಾರ ಪೂರ್ತಿ ಕೊಡಬೇಕು, ಆದರೆ, ಸೀಮೆಎಣ್ಣೆ ಬಂದ ದಿನ ಕೊಡುವುದು ಬಿಟ್ಟರೆ ಮತ್ತೆ ಕೊಡುವುದಿಲ್ಲ. ಪಡಿತರವನ್ನ ಕೊಡಲು ಗ್ರಾಹಕರಿಗೆ ಆದಾರ್ ಕಾರ್ಡ್ ತನ್ನಿ, ಮತ ಗುರುತಿನ ಪತ್ರ ತನ್ನಿ ಎಂದು ಅಲೆದಾಡಿಸುತ್ತಿದ್ದು ಕಾನೂನು ನಿಯಮಗಳನ್ನು ಉಲ್ಲಂಘಿಸುತ್ತಿರುವ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಆಹಾರ ಇಲಾಖೆಯ ಶಿರಸ್ತೇದಾರ್ ನಾಗರಾಜ್ ಮಾತನಾಡಿ, ನ್ಯಾಯಬೆಲೆ ಅಂಗಡಿಗಳು ನಿಯಮದಂತೆ ಬೆಳಿಗ್ಗೆ 8 ರಿಂದ 12, 4 ರಿಂದ 8 ರವರೆಗೆ ಮತ್ತು ರಜೆ ಮಾಡದೆ ತಿಂಗಳು ಪೂರ್ತಿ ತೆರೆಯಬೇಕು. ಸೀಮೆಎಣ್ಣೆಯನ್ನು ವಾರಪೂರ್ತಿ ಕೊಡಬೇಕು, ಪಡಿತರವನ್ನು ನೀಡಲು ಗಾಹಕರನ್ನು ಅಲೆದಾಡಿಸಬಾರದು, ಈ ನಿಯಮ ಮೀರಿದಲ್ಲಿ ಇಲಾಖೆಯ ಗಮನಕ್ಕೆ ತಂದರೆ, ಅಂತಹ ಅಂಗಡಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.