ಪ್ರಾಕೃತಿಕ ಸಂಪತ್ತಿನ ಮಿತ ಬಳಕೆಯಿಂದ ಪರಿಸರ ರಕ್ಷಣೆ
ಹಾಸನ: ಪ್ರಾಕೃತಿಕ ಸಂಪನ್ಮೂಲಗಳ ಮಿತವ್ಯಯದ ಬಳಕೆ ಉತ್ತಮ ರೀತಿಯಲ್ಲಿ ಆಗಬೇಕು ಎಂದು ನಗರದ ಸಿಎಂಎಸ್ಎಸ್ಎಸ್ ಸಂಸ್ಥೆಯ ನಿರ್ದೇಶಕ ಫೆಲಿಕ್ ಥಾಮಸ್ ರೊಜಾರಿಯೊ ಹೇಳಿದ್ದಾರೆ.
ನಗರದ ಬಿ.ಕಾಟೀಹಳ್ಳಿಯಲ್ಲಿರುವ ಸಂಸ್ಥೆಯ ನೇತೃತ್ವದಲ್ಲಿ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಸಮಾಜ ಸೇವ ಕಾರ್ಯಕರ್ತರಿಗೆ ಇತ್ತೀಚೆಗೆ ಏರ್ಪಡಿಸಿದ್ದ ಎರಡು ದಿನದ ಪ್ರಾಕೃತಿಕ ಸಂಪನ್ಮೂಲಗಳ ನಿರ್ವಹಣೆ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂಪನ್ಮೂಲ ಮಿತ ಬಳಕೆ: ನೈಸರ್ಗಿಕ ಸಂಪನ್ಮೂಲಗಳಿಂದ ಮಾನವನು ಇದ್ದಾನೆಯೇ ಹೊರತು ಮಾನವನಿಂದ ಅವು ಅಸ್ತಿತ್ವದಲ್ಲಿ ಇಲ್ಲ ಎಂದು ಅರಿಯಬೇಕಾಗಿದ್ದು, ಇಂದಿನ ಮಾನವ ಜನಾಂಗದಿಂದಲೇ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ ಎಂಬುವುದನ್ನು ಮನವರಿಕೆ ಮಾಡಬೇಕು. ಈ ನಿಟ್ಟನಲ್ಲಿ ಪ್ರಕೃತಿಯ ಅಮೂಲ್ಯ ಸಂಪನ್ಮೂಲಗಳನ್ನು ಹಿತಮಿತವಾಗಿ ಬಳಸುವುದು ಮತ್ತು ಪರಿಸರ ಮಾಲಿನ್ಯವನ್ನು ತಡೆಯುವಲ್ಲಿ ಜಾಗೃತರಾಗಬೇಕಾಗಿದೆ ಎಂದರು.
ಕಾಡು ಬೆಳೆಸಿ, ನಾಡು ಉಳಿಸಿ ಎಂಬ ನಾಣ್ಣುಡಿಗೆ ವಿರುದ್ಧವಾಗಿ ಮಾನವನು ತನ್ನ ಅತಿಯಾದ ಹೊಟ್ಟೆ ಬಾಕತನ, ದುರಾಶೆ ಮತ್ತು ನಿರ್ಲಕ್ಷ್ಯತನದಿಂದ ಪರಿಸರ ಮಾಲಿನ್ಯಗೊಳಿಸಿ ಪ್ರಕೃತಿ ವಿಕೋಪ ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣನಾಗಿದ್ದಾನೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮರಗಿಡಗಳನ್ನು ಬೆಳೆಸಿ ಅಹಾರ, ನೀರು, ಗಾಳಿ, ಬೆಳಕು ನೀಡುವ ಭೂತಾಯಿಯನ್ನು ಹಿಂಸಿಸದೆ ರಕ್ಷಿಸಿದಲ್ಲಿ ನೆಲ ಜಲ ಸಮೃದ್ಧಿಯಾಗಿ ಜನರ ಬದುಕು ನೆಮ್ಮದಿಯಿಂದ ಕೂಡಿರುತ್ತದೆ ಎಂದು ಶಿವಮೊಗ್ಗದಿಂದ ಆಗಮಿಸಿದ ತರಬೇತುದಾರ ಸಾಲ್ವೊದೋರ್ ಹೇಳಿದರು.
ಪರಿಸರ ರಕ್ಷಿಸಿ: ಆಧುನಿಕತೆಯ ಭರಾಟೆಯಲ್ಲಿ ಜನರು ಯಾಂತ್ರೀಕೃತ ಬದುಕನ್ನು ಸಾಗಿಸಿ ಪರಿಸರದ ಮಹತ್ವವನ್ನು ಮರೆತಿರುವುದು ದುರಂತ. ಪ್ರಕೃತಿಯ ಮೂಲಗಳು ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸಿ ಜೀವ ಸಂಕುಲವನ್ನು ಪೋಷಿಸಿ ಮುಂದಿನ ಪೀಳಿಗೆಗೆಯನ್ನು ರಕ್ಷಿಸಬೇಕಾಗಿರುವುದರಿಂದ ಪ್ರತಿಯೊಬ್ಬರೂ ಪರಿಸರ ರಕ್ಷಿಸುವಲ್ಲಿ ಪ್ರಾಮಣಿಕ ಪ್ರಯತ್ನವನ್ನು ಮಾಡಬೇಕು ಎಂದರು. ವಿನ್ನಿ ಡಿಸೋಜ ಸ್ವಾಗತಿಸಿದರು. ರಂಗಲಕ್ಷ್ಮಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

