ಹಾಸನ

ಬೆಟ್ಟದಪುರದ ವಿರಕ್ತ ಮಠದಲ್ಲಿ ವಿಶೇಷ ಕಾರ್ಯಕ್ರಮಗಳು

Published On :

ರಾಮನಾಥಪುರ: ಜಿಲ್ಲೆಯ ಗಡಿ ಭಾಗದಲ್ಲಿರುವ ಬೆಟ್ಟದಪುರ ಸ್ವತಂತ್ರ ಸಲೀಲಾಖ್ಯ ವಿರಕ್ತ ಮಠದಲ್ಲಿ  ಜೂ.14 ರಂದು ಪೂಜ್ಯದ್ವಯರಿಗೆ ನುಡಿ ನೈವೇದ್ಯ, ಹಿರಿಯ ಹಾಗೂ ಕಿರಿಯ ಸಾಧಕರ ಸಾಧನೆಗೆ ಅಭಿನಂದನೆ, ಎಸ್.ಸಿ.ವಿ.ಡಿ.ಎಸ್.ವಿದ್ಯಾ ಸಂಸ್ಥೆಗಳ 23 ನೇ ವರ್ಷಾಚರಣೆ, ಕನ್ನಡ ಮಠದ 203ನೇ ವರ್ಷಾಚರಣೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ. ಹಾಗೂ ಶಿವಾನುಭವ ಗೋಷ್ಠಿ  ನಡೆಯಲಿವೆ ಎಂದು ರಾಮನಾಥಪುರ ಹೋಬಳಿ ವಿಶ್ವ ವೀರಶೈವ ವೇದಿಕೆ ಅಧ್ಯಕ್ಷ ರಾಮನಾಥಪುರ ಸೋಮಶೇಖರ್ ಪ್ರಧಾನ ಕಾರ್ಯದರ್ಶಿ ಬಸವಾಪಟ್ಟಣ ಮೃತ್ಯುಂಜಯ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೂ. 14.ರಂದು ಬೆಳಗ್ಗೆ 7ಕ್ಕೆ ಮುದ್ದಿನಕಂತೆ ಮಠ ಶ್ರೀ ಸಿದ್ದಲಿಂಗ ಶಿವಾಚಾರ್ಯಸ್ವಾಮಿಜಿ ಅವರು ಷಟ್‌ಸ್ಥಳ ಧ್ವಜಾರೋಹಣ ನೆರವೇರಿಸುವರು. ಶ್ರೀಮಠದಲ್ಲಿ ರುದ್ರಾಭಿಷೇಕ ಹಾಗೂ ಶ್ರೀಮುನ್ನಿರಂಜನ ಶ್ರೀ ಚಿಕ್ಕವೀರದೇಶಿಕೇಂದ್ರಮಹಾಸ್ವಾಮಿಜಿಯವರ 86ನೇ ವರ್ಷದ ಗಣರಾಧನೆ ಹಾಗೂ ಶ್ರೀ ಚನ್ನವೀರದೇಶಿಕೇಂದ್ರಸ್ವಾಮಿ ಅವರ 33ನೇ ವರ್ಷದ ಗಣರಾಧನೆ ಕಾರ್ಯಕ್ರಮ ನಡೆಯಲಿದೆ.
ಶಿವಾನುಭವ ಗೋಷ್ಠಿ 10 ಗಂಟೆಗೆ ನಡೆಯಲಿದ್ದು, ಶಿವಮೊಗ್ಗ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಜಿ ದಿವ್ಯ ನೇತೃತ್ವ ವಹಿಸುವರು. ಬೆಟ್ಟದಪುರ ಸಲೀಲಾಖ್ಯ ಮಠ ಹಾಗೂ ಕನ್ನಡ ಮಠದ ಶ್ರೀ ಚನ್ನಬಸವದೇಶಿಕೇಂದ್ರಸ್ವಾಮಿಜಿ ಅವರು ಸಮುಖ ವಹಿಸುವರು. ಅಂಕನಹಳ್ಳಿ ಶ್ರೀ ಗವಿಮಠ ಶ್ರೀ ಶಿವರುದ್ರ ಶಿವಾಚಾರ್ಯಸ್ವಾಮಿಜಿ ಅವರು ಅಧ್ಯಕ್ಷತೆ ವಹಿಸುವರು. ಮೈಸೂರು, ಕೊಡಗು ಜಿಲ್ಲೆ ಲೋಕಸಭಾ ಸದಸ್ಯ ಪ್ರತಾಪಸಿಂಹ  ಕಾರ್ಯಕ್ರಮ ಉದ್ಘಾಟಿಸುವರು. ಕೆ.ಅರ್. ಶಾಸಕ ಸಾ.ರ. ಮಹೇಶ್.  ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸುವರು.  
ಲಿಂಗದೀಕ್ಷೆ: ಸಮಾಜ ಬಾಂಧವರು ಜೂ. 13ರಂದು ಶುಕ್ರವಾರ ಸಂಜೆ ಶ್ರೀಮಠಕ್ಕೆ ಒಂದು ದಿವಸ ಮುಂಚಿತವಾಗಿ ಲಿಂಗದೀಕ್ಷೆ ಸಂಸ್ಕಾರಕ್ಕೆ ನೋಂದಾಯಿಸಿಕೊಳ್ಳುವಂತೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.