ಹಾಸನ

ರೇಲ್ವೆ ಚಾಲಕ, ಪಾಲಕರ ಪ್ರತಿಭಟನೆ

Published On :

ಅರಸೀಕೆರೆ: ರೇಲ್ವೆ ನೌಕರರಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಚಾಲಕ ಹಾಗೂ ನಿಯಂತ್ರಣಾಧಿಕಾರಿ ಉದಯ್ ಕುಮಾರ್ ವಿರುದ್ಧ ಕ್ರಮ ಜರುಗಿಸಬೇಕು. ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರೇಲ್ವೆ ಕಚೇರಿ ಮುಂಭಾಗ ರೇಲ್ವೆ ಚಾಲಕ, ಪಾಲಕ ಸಂಘದ ಪದಾಧಿಕಾರಿಗಳು ಬುಧವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.ಬೇಡಿಕೆಗಳು: ರೇಲ್ವೆ ವಿಭಾಗೀಯ ಕಾರ್ಯದರ್ಶಿ ಎಸ್.ಎನ್. ಮಹಮ್ಮದ್ ಮಾತನಾಡಿ, ಸ್ಪಾಡ್ ಸಮಿತಿಯ ಯೋಜನೆಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು, ಬಾಕಿ ವೇತನ ಪಾವತಿಗೆ ಕ್ರಮ ತೆಗೆದುಕೊಳ್ಳಬೇಕು, ಕೇಂದ್ರ ಸರ್ಕಾರದ ಯೋಜನೆಗಳು ಚಾಲಕ ಮತ್ತು ಪಾಲಕ ವರ್ಗಕ್ಕೂ ಲಭ್ಯವಾಗಬೇಕು. ನೌಕರರಿಗೆ ಗುಣಮಟ್ಟದ ಸಮವಸ್ತ್ರಗಳನ್ನು ಪೂರೈಸಬೇಕು ಎಂದು ಒತ್ತಾಯಿಸಿದರು.ತಾವು ಈ ಪ್ರತಿಭಟನೆಯನ್ನು ಎಐಆರ್‌ಎಫ್ ಹಾಗೂ ವಲಯ ಕಾರ್ಯದರ್ಶಿ ಡಿಎಂಡಿ ಡಿಕ್ರೂಸ್ ಆದೇಶದ ಮೇರೆಗೆ ಧರಣಿ ನಡೆಸಿದ ನೌಕರರು ನೌಕರ ವಿರೋಧಿ ನೀತಿ ಅನುಸರಿಸುತ್ತಿರುವ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಘೋಷಣೆಗಳನ್ನು ಕೂಗಿದರು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಎಂ.ಎ.ಪಠಾನ್, ಕರುಣಾಕರನ್, ವಿಭಾಗೀಯ ಅಧ್ಯಕ್ಷ ಶಿವಪ್ರಕಾಶ್, ಖಜಾಂಚಿ ಶ್ರೀಪತಿ, ಅಯ್ಯಪ್ಪನ್, ರವಿಶಂಕರ್, ರಾಮಚಂದ್ರಯ್ಯ, ರಾಜೇಂದ್ರ, ಆಲ್ಬರ್ಟ್ ಅನಿಲ್, ರವಿ, ರಘು ಸೇರಿದಂತೆ ಹಲವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.