ಯುವಕರು ಸೇವಾ ಮನೋಭಾವಮೈಗೂಡಿಸಿಕೊಳ್ಳಲಿ: ಮಧು
ಜಾವಗಲ್: ಯುವಜನತೆ ಸೇವಾ ಮನೋಭಾವನೆ ಮೈಗೂಡಿಸಿಕೊಂಡು ಸಮಾಜ ಸೇವೆ ಮಾಡಿದಲ್ಲಿ ಆತ್ಮತೃಪ್ತಿ ಸಿಗುತ್ತದೆ ಎಂದು ಜಾವಗಲ್ ಐಸಿಟಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ವೈ.ಎನ್. ಮಧು ತಿಳಿಸಿದರು. ಜಾವಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಯೂತ್ಕ್ರಾಸ್ ಘಟಕದ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ರೆಡ್ಕ್ರಾಸ್ ಸಂಸ್ಥೆಯ ಹುಟ್ಟು, ಬೆಳವಣಿಗೆ, ಧೇಯೋದ್ದೇಶಗಳು, ಕಾರ್ಯವ್ಯಾಪ್ತಿ, ತತ್ವಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ ಮಾನವಿಯ ಮೌಲ್ಯಗಳನ್ನು ಒಳಗೊಂಡ ಒಂದು ಮುಖ್ಯ ಸಂಸ್ಥೆಯಾಗಿದೆ ಎಂದರು. ವೈದ್ಯಾಧಿಕಾರಿ ಡಾ. ಬಿ.ಎಂ. ಗೀತಾ ಮಾತನಾಡಿ, ಯುವಜನರು ಸಮಾಜದ ಸ್ವಾಸ್ಥ್ಯ ಆರೋಗ್ಯ ಕಾಪಾಡುವಲ್ಲಿ ಕಾಳಜಿ ವಹಿಸಬೇಕೆಂದರು. ಘಟಕ ಸಂಚಾಲಕ ಶಂಕರಲಿಂಗೇಗೌಡ, ರವಿಶಂಕರ್, ಶೃತಿ, ವಿನುತ, ಮಾತನಾಡಿದರು.
ಕಬ್ಬಳ್ಳಿಯ ಬಸವೇಶ್ವರ ಶಾಲಾ ವಾರ್ಷಿಕೋತ್ಸವ
ಹಿರೀಸಾವೆ (ಚನ್ನರಾಯಪಟ್ಟಣ): ಹೋಬಳಿಯ ಕಬ್ಬಳಿ ಬಸವೇಶ್ವರ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಇತ್ತೀಚೆಗೆ ವಿಜೃಂಭಣೆಯಿಂದ ನಡೆಯಿತು. ಸಮಾರಂಭದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಹಾಸನದ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಹಿತನುಡಿಗಳನ್ನಾಡಿದರು.ಶರೀರ ಅನಿಶ್ಚಿತವಾದದು, ನಿಧನದ ನಂತರ ನಮ್ಮ ಹಿಂದೆ ಬರುವುದಿಲ್ಲ, ಹುಟ್ಟಿನ ಆರಂಭದಿಂದಲೇ ದಿನೇ ದಿನೇ ಸಾವಿನತ್ತ ಪಯಣ, ಇರುವತನಕ ಬದುಕಿನುದ್ದಕ್ಕೂ ಸಂಸ್ಕಾರಯುತ ಸೇವೆಯೊಂದಿಗೆ ದೈವನಿಗೆ ಕೃತಾರ್ಥರಾಗಿ ಎಂದು ಹೇಳಿದರು.1974 ರಲ್ಲಿ ಆದಿಚುಂಚನಗಿರಿ ಕ್ಷೇತ್ರಕ್ಕೆ 71 ನೇ ಮಠಾಧೀಶರಾಗಿದ್ದು, ಅಂದಿನಿಂದಲೂ ಜಗತ್ತಿನಾದ್ಯಂತ ಸಂಸ್ಕೃತಿ ಹಾಗೂ ಸಮುದಾಯವನ್ನು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಿದ್ದಾರೆಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

