ಹಾಸನ

ಕಾಡಾನೆ ಸೆರೆ; ಅರಣ್ಯ ಇಲಾಖೆ ಸಫಲ

Published On :

ಸಕಲೇಶಪುರ: ತಾಲೂಕಿನ ಬೆಕ್ಕನಹಳ್ಳಿ ಗ್ರಾಮದಲ್ಲಿ ಸೋಮವಾರ ಅರಣ್ಯ ಇಲಾಖೆಯವರು ಕಾಡಾನೆಯೊಂದನ್ನು ಸೆರೆ ಹಿಡಿಯುವಲ್ಲಿ ಸಫಲರಾದರು.
ಗ್ರಾಮದ ಸಾಮಾಜಿಕ ಅರಣ್ಯದಲ್ಲಿ ಕಂಡು ಬಂದ 11 ಕಾಡಾನೆ ಹಿಂಡಿನ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ತಿಳಿಸಿದ್ದರಿಂದ ಶೀಘ್ರವೇ ಕಾರ್ಯಪ್ರವತ್ತರಾದ ಯಸಳೂರು ವಲಯ ಅರಣ್ಯ ಇಲಾಖೆ ಸಿಬ್ಬಂದಿ ಆಲೂರು ತಾಲೂಕಿನ ಮಾಗಡಿಹಳ್ಳಿ ಆನೆ ಕ್ಯಾಂಪಿಗೆ ವಿಚಾರ ತಿಳಿಸಿದರು.
ಅಲ್ಲಿಂದ ಲಾರಿಯಲ್ಲಿ 10 ಸಾಕಾನೆಗಳನ್ನು ಬೆಕ್ಕನಹಳ್ಳಿಗೆ ಕರೆಸಿಕೊಂಡು ಮದ್ಯಾಹ್ನದ ನಂತರ ಕಾರ್ಯಚರಣೆ ಆರಂಭಿಸಿದ ಸಿಬ್ಬಂದಿಗೆ 3.30 ರ ವೇಳೆಗೆ ಕಾಡಾನೆಗಳ ಗುಂಪು ಎದುರಾಗಿತ್ತು. ಈ ವೇಳೆ ಅಭಿಮನ್ಯು ಆನೆಯ ಮೇಲೆ ತೆರಳಿ ಗುಂಪಿನಲ್ಲಿದ್ದ ನಿಂತಿದ್ದ ಸುಮಾರು 35 ವರ್ಷದ ಗಂಡಾನೆಯನ್ನು ಗುಂಪಿನಿಂದ ಬೇರ್ಪಡಿಸಿ ಗುಂಡುಹಾರಿಸಿದರು. ಈ ವೇಳೆ ಸುಮಾರು 200 ಮೀಟರ್ ದೂರ ಓಡಿದ ಕಾಡಾನೆ ಪ್ರಜ್ಞೆ ತಪ್ಪಿತ್ತು. ನಂತರ ನೀರು ಹಾಕುವ ಮೂಲಕ ಎಚ್ಚರಿಸಿದ ಸಿಬ್ಬಂದಿ ಸಾಕಾನೆಗಳ ಸಹಾಯದಿಂದ ಬಂಧಿಸಿ ಲಾರಿಯಲ್ಲಿ ದುಬಾರೆ ಆನೆ ಕ್ಯಾಂಪಿಗೆ ಸ್ಥಳಾಂತರಿಸಿದರು.  ಈವರೆಗೂ ಅರಣ್ಯ ಇಲಾಖೆಯವರು ಆರು ಆನೆಗಳನ್ನು ಸೆರೆ ಹಿಡಿದಂತಾಗಿದ್ದು, ಗ್ರಾಮದಲ್ಲಿ ಇನ್ನು ಹತ್ತು ಆನೆಗಳು ಬೀಡು ಬಿಟ್ಟಿದ್ದು, ಮಂಗಳವಾರವೂ ಕಾರ್ಯಚರಣೆ ನಡೆಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.