ಹಾಸನ

ತರಕಾರಿ ಬೆಳೆ; ಮಹಿಳೆಗೆ ಆರ್ಥಿಕ ಕಳೆ

Published On :

ಕ.ಪ್ರ.ವಾರ್ತ್ಣೆ ರಾಮನಾಥಪುರ  ಮಾ.3
ಸಮೀಪದ ಮರಿಯಾನಗರ ವಿಭಾಗದ ಸಿಎಂಎಸ್‌ಎಸ್‌ಎಸ್ ಸೇವಾ ಸಂಸ್ಥೆ ಹಾಗೂ ಬೆಂಗಳೂರಿನ ಕ್ರಾಸ್ ಸಂಸ್ಥೆ ಆಶ್ರಯದಲ್ಲಿ ಮರಿಯಾನಗರದ ಸಮುದಾಯ ಭವನದಲ್ಲಿ ಸ್ಟೆಪ್ ಯೋಜನೆಯಲ್ಲಿ ಸೋಮವಾರ ತರಕಾರಿ ಬೆಳೆಯುವ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ತರಬೇತಿ ಕಾರ್ಯಾಗಾರವನ್ನು ಮರಿಯಾನಗರದ ಹೋಲಿ ಕ್ರಾಸ್ ಸಂಸ್ಥೆಯ ಸಿಸ್ಟರ್ ಮೇರಿ ಉದ್ಘಾಟಿಸಿ ಮಾತನಾಡಿ, ಈ ಯೋಜನೆಯ ಸದುಪಯೋಗಪಡಿಸಿಕೊಂಡು, ಮಹಿಳೆಯರು ತರಬೇತಿ ಪಡೆದುಕೊಂಡು ಯಶಸ್ವಿಯಾಗಿ ಉತ್ತಮ ತರಕಾರಿ ಬೆಳೆ ಬೆಳೆಯುವಂತೆ ಶುಭ ಹಾರೈಸಿದರು.
ಬಾಂಧವ್ಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗೀತಾ ಶ್ರೀವಾಸಮೂರ್ತಿ ಮಾತನಾಡಿ, ಸಂಸ್ಥೆಯು ನಮಗೆ ಹಲವಾರು ಯೋಜನೆಯನ್ನು ತಂದುಕೊಟ್ಟಿದೆ.  ಈ ಯೋಜನೆಯು ಸಾವಯವ ಗೊಬ್ಬರದಿಂದ ನಾವು  ತರಕಾರಿಯನ್ನು ಬೆಳೆದು ಉತ್ತಮ ಆರೋಗ್ಯ ಪಡೆಯುವುದರ ಜೊತೆಗೆ ಅಧಿಕ ಆದಾಯ ಗಳಿಸಬಹುದು ಹಾಗೂ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿ, ಜಿಲ್ಲಾ ಜಂಟಿ ಕೃಷಿ ತರಬೇತಿ ನಿರ್ದೇಶಕ ಕೆಂಪೇಗೌಡ ತರಬೇತಿಯಲ್ಲಿ ಫಲಾನುಭವಿಗಳನ್ನು ಕುರಿತು ಮಣ್ಣಿನ ಫಲವತ್ತತೆ, ಸಾವಯವ ಗೊಬ್ಬರ ತಯಾರಿಸುವಿಕೆ, ಅದರ ತತ್ವಗಳು, ವಿಧಾನಗಳು, ಪರಿಣಾಮದ ಬಗ್ಗೆ ವಿವರಿಸುತ್ತಾ ರಸಾಯನಿಕ ಗೊಬ್ಬರದಿಂದ ಆಗುವ ತೊಂದರೆ ಹಾಗೂ ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಂಕ್ಷಿಪ್ತ ವಿವರಿಸಿದರು.  
ಕಡಿಮೆ ಖರ್ಚಿನಿಂದ ಹೆಚ್ಚು ಲಾಭ: ಎರೆಹುಳು ಗೊಬ್ಬರ ತಯಾರಿಕೆ ಬಗ್ಗೆ ವಿವರಿಸುತ್ತಾ ಜಮೀನಿನ ಮಣ್ಣು ಬೂದಿ, ಸಗಣಿ, ಕಚ್ಚಾ ವಸ್ತು, ನಮ್ಮ ಸುತ್ತಮುತ್ತಲಿನ ಕಾಡಿನ ಕಡ್ಡಿಗಳು, ಮುಸುಕಿನ ಜೋಳದ ಸಿಪ್ಪೆಯಿಂದ ಸಾವಯವ ಗೊಬ್ಬರ ತಯಾರಿಸಬಹುದು.  ಈ ಗೊಬ್ಬರದಿಂದ ಟೊಮೆಟೊ, ಬೆಂಡೇಕಾಯಿ, ದಪ್ಪ ಮೆಣಸಿನಕಾಯಿ, ಸಣ್ಣ ಮೆಣಸಿನಕಾಯಿ ಬೆಳೆಯಲು ಉತ್ತಮ ಸಹಕಾರಿಯಾಗುತ್ತದೆ ಮತ್ತು ಹೆಚ್ಚು ಲಾಭವನ್ನು ಪಡೆಯಲು ಅನುಕೂಲಕರವಾಗಿದೆ. ಕಡಿಮೆ ಖರ್ಚಿನಿಂದ ಹೆಚ್ಚು ಲಾಭ ಪಡೆಯುವುದು, ಸಾವಯವ ಗೊಬ್ಬರದಿಂದ ತರಕಾರಿ ಬೆಳೆ ಬೆಳೆದು ಮಾರಾಟ ಮಾಡಲು ಮಹಿಳೆಯರಿಂದ ಮಾತ್ರ ಸಾಧ್ಯ ಎಂದರು.
ಕಾರ್ಯಾಗಾರ ಏರ್ಪಡಿಸುವ ಮೂಲಕ ಕ್ರಾಸ್ ಸಂಸ್ಥೆ ಬೆಂಗಳೂರು ಹಾಗೂ ಸಿಎಂಎಸ್‌ಎಸ್‌ಎಸ್ ಸೇವಾ ಸಂಸ್ಥೆ ಮತ್ತು ಉತ್ತಮವಾದ ಕೆಲಸ ನಿರ್ವಹಿಸಿದೆ.  ಹಾಗೇ ಇಲಾಖೆಯ ಸಹಕಾರವನ್ನು ಪಡೆಯಬಹುದು ಎಂದು ತಿಳಿಸಿದರು.  

ತರಕಾರಿ ಬೆಳೆವ ವಿಧಾನ ಪ್ರಾತ್ಯಕ್ಷಿಕೆ
ಸಾವಯವ ಗೊಬ್ಬರದಿಂದ ಬೆಳೆದ ತರಕಾರಿಗೆ ಪ್ರತ್ಯೇಕವಾದ ಮಾರುಕಟ್ಟೆ ವ್ಯವಸ್ಥೆ ಇದೆ ಹಾಗೂ ಸಾವಯವ ಗೊಬ್ಬರವನ್ನು ತಯಾರಿಸುವುದು ಸರಳವಾದ ವಿಧಾನವಾಗಿದೆ. ಈ ಸಾವಯವ ಗೊಬ್ಬರದಿಂದ ಬೆಳೆದ ತರಕಾರಿಗಳಲ್ಲಿನ ಹೆಚ್ಚಿನ ಪೌಷ್ಟಿಕಾಂಶಗಳ ಬಗ್ಗೆ, ಮಣ್ಣಿನ ಸೂಕ್ಷ್ಮಜೀವಿಗಳ ಬಗ್ಗೆ, ತಿಪ್ಪೆ ಗೊಬ್ಬರ ತಯಾರಿಕೆ ಬಗ್ಗೆ ವಿವರಿಸುತ್ತಾ ಕಡಿಮೆ ಖರ್ಚಿನಲ್ಲಿ ತರಕಾರಿ ಬೆಳೆಯುವ ವಿಧಾನ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.