ಎತ್ತಿನಹೊಳೆ ವಿರೋಧಿಸಿ ಪ್ರತಿಭಟನೆ
ಕ.ಪ್ರ. ವಾರ್ತೆ ಸಕಲೇಶಪುರ ಮಾ. 3
ಉದ್ದೇಶಿತ ಎತ್ತಿನಹೊಳೆ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಎತ್ತಿನಹೊಳೆ ನದಿ ಪಾತ್ರದ ಗ್ರಾಮಸ್ಥರು ರಸ್ತೆ ತಡೆನಡೆಸಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ತಾಲೂಕಿನ ಹಾರ್ಲೇ ಗ್ರಾಮದಲ್ಲಿ ನಡೆಯಿತು.
ತಾಲೂಕಿನ ಹಾರ್ಲೇ ಗ್ರಾಮದಲ್ಲಿ ಹರಿಯುವ ಎತ್ತಿನಹೊಳೆ ಸೇತುವೆ ಮೇಲೆ ಪ್ರತಿಭಟನೆ ನಡೆಸಿದ ನಡಹಳ್ಳಿ, ಕುಂಬರಡಿ, ರಕ್ಷಿಧಿ, ಗಾಣದಹೊಳೆ ಸೇರಿದಂತೆ ನೂರಾರು ಗ್ರಾಮಸ್ಥರು ಸಕಲೇಶಪುರ-ನಡಹಳ್ಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ಮಾತನಾಡಿದ ಮುಖಂಡರು, ಬಯಲು ಸೀಮೆ ಜನರಿಗೆ ಕುಡಿಯುವ ನೀರು ಒದಗಿಸಲು ಮಲೆನಾಡ ರೈತರ ಹಿತವನ್ನು ಬಲಿಕೂಡಲು ಸರ್ಕಾರ ಮುಂದಾಗಿದೆ.
ಈಗಾಗಲೇ ಇದೆ ರೀತಿಯ ಹಲವು ಯೋಜನೆಯಿಂದ ಮಲೆನಾಡಿಗರು ಮನೆ-ಮಠ ಕಳೆದುಕೊಂಡು ನಿರ್ವಸತಿಗರಾಗಿದ್ದು, ರಾಜ್ಯವನ್ನಾಳಿದ ಯಾವುದೇ ಸರ್ಕಾರಗಳಿಗೂ ಮಲೆನಾಡಿಗರ ಬಗ್ಗೆ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವೈಜ್ಞಾನಿಕ ಈ ಯೋಜನೆಯಿಂದ ಹಣವನ್ನು ಅನಾವಶ್ಯಕವಾಗಿ ವ್ಯರ್ಥಮಾಡಲಾಗುತ್ತಿದ್ದು, ಬೇಸಿಗೆಯಲ್ಲಿ ಬತ್ತಿಹೋಗುವ ನದಿಯಿಂದ ನೀರನ್ನು ಎತ್ತುವುದು ಹೇಗೆ ಎಂದು ಪ್ರಶ್ನಿಸಿದ ಗ್ರಾಮಸ್ಥರು, ಆಳಿದುಳಿದ ನೀರನ್ನು ಬೇರೆಡೆ ಹರಿಸಿದರೆ ನದಿ ಪಾತ್ರದ ಸುಮಾರು 10 ಕಿಮಿ ದೂರದ ಜಮೀನು ಹಾಗೂ ನದಿಯನ್ನೇ ಆಶ್ರಯಿಸಿರುವ ಜಲಚರ, ಕಾಡುಪ್ರಾಣಿಗಳು ಬದುಕುವುದು ದುಸ್ತರವಾಗಲಿದೆ. ಆದ್ದರಿಂದ ಈ ಯೋಜನೆ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು. ಗ್ರಾಮಸ್ಥರಾದ ಉತ್ತಪ್ಪ, ಶಿವಶಂಕರ್, ಸದಾಶಿವ, ಮಹೇಶ್, ಕುಮಾರಸ್ವಾಮಿ, ಹಿಂದೂ ಪರ ಸಂಘಟನೆಯ ಮುಖಂಡರಾದ ರಘು, ಸಂತೋಷ್ ಪ್ರತಿಭಟನೆ ನೇತೃತ್ವವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

