ಹಾಸನ

ಐಐಟಿ-ಸೆಂಟ್ರಲ್ ವಿವಿ ತರಲು ಬದ್ಧ

Published On :

ಕನ್ನಡಪ್ರಭ ವಾರ್ತೆ ಹಾಸನ ಮಾ. 3
ಜಿಲ್ಲೆಯಿಂದ ಕೈ ತಪ್ಪಿರುವ ಐಐಟಿ ಹಾಗೂ ಸೆಂಟ್ರಲ್ ಯೂನಿವರ್ಸಿಟಿಯನ್ನು ವಾಪಸ್ ಜಿಲ್ಲೆಗೆ ತರುವುದು ಶತ ಸಿದ್ಧ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶಪಥ ಮಾಡಿದರು.
ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದ ಸಭಾಂಗಣದ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿ ಐಐಟಿ ಕಾಲೇಜು ನಿರ್ಮಾಣಕ್ಕೆ ಒಂದು ಸಾವಿರ ಎಕರೆ ಪ್ರದೇಶವನ್ನು ಮೀಸಲಿಡಲಾಗಿತ್ತು.  
ಆದರೆ ಆ ಯೋಜನೆಯನ್ನು ರಾಜಕೀಯ ದುರುದ್ದೇಶದಿಂದ ಬೇರೆಡೆಗೆ ವರ್ಗಾಯಿಸಲಾಗಿದೆ. ಆದರೆ ಯಾವುದೇ ಕಾರಣ ಆ ಯೋಜನೆಯು ಜಿಲ್ಲೆಯಿಂದ ಬೇರೆಡೆ ಹೋಗಲು ಬಿಡುವುದಿಲ್ಲ ಎಂದರು.
ಐಐಟಿಗೆ ಮೀಸಲಿಟ್ಟ ಜಾಗವನ್ನು ಬೇರೆ ಬೇರೆ ಕಾರ್ಯಗಳಿಗೆ ಬಳಸುತ್ತಿರುವ ಬಗ್ಗೆ ಮಾಹಿತಿ ಅದ್ದು, ಅದರ ಹಿಂದೆ ಎಷ್ಟೇ ಪ್ರಭಾವಿಗಳಿದ್ದರೂ ಅದನ್ನು ಬಿಡದೆ ಆ ಜಾಗವನ್ನು ಐಐಟಿಗೆ ಬಳಕೆ ಮಾಡುವಂತೆ ಆಗಬೇಕು ಎಂದ ಅವರು, ಜೊತೆಗೆ ಸೆಂಟರ್ ಯೂನಿವರ್ಸಿಟಿ ನಿರ್ಮಾಣಕ್ಕೆ ಸಂಬಂಧಪಟ್ಟ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳನ್ನು ಕೇಳಿದರೆ ಖಡತ ವಿಲೇವಾರಿ ಮಾಡುವುದಾಗಿ ಹೇಳುತ್ತಾರೆ.
 ಆದರೆ ಐಐಟಿ ಯನ್ನು ಬೇರೆಡೆಗೆ ವರ್ಗಾಹಿಸಿದ್ದಾರೆ. ಈ ಬಗ್ಗೆ ನನ್ನಲ್ಲಿ ಸಂಪೂರ್ಣ ಮಾಹಿತಿ ಇದೆ ಎಂದ ಅವರು, ಯಾವುದೇ ಕಾರಣಕ್ಕೂ ಈ ಯೋಜನೆಗಳು ಕೈತಪ್ಪಲು ಬಿಡುವುದಿಲ್ಲ. ಈ ಯೋಜನೆಯಗಳನ್ನು ಸಾಕಾರಗೊಳಿಸುವುದಾಗಿ ಹೇಳಿದರು.
ಸಂವಾದ ಸಲ್ಲದು:  ಚುನಾವಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದು ಸರಿಯಲ್ಲ. ಆದ್ದರಿಂದ ಇನ್ನೂ ಮೂರು ತಿಂಗಳಿನಲ್ಲಿ ದೇಶದ ಭವಿಷ್ಯ ಗೋಚರವಾಗಲಿದೆ. ಆದ್ದರಿಂದ ಚುನಾವಣೆಯ ನಂತರ ಯಾವಾಗ ಬೇಕಾದರೂ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿ ಬಂದು ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಚರ್ಚಿಸುತ್ತೇನೆ ಎಂದ ಅವರು, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು ಮುಖ್ಯ. ಆದರೆ ರಾಜಕಾರಣಿಗಳಿಗೆ ಶಿಸ್ತು ಅನ್ನೋದೆ ಮರೆತು ಹೋಗಿದೆ. ಆದ್ದರಿಂದ ವಿದ್ಯಾರ್ಥಿಗಳು ಶಿಸ್ತನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದು ಹೇಳಿದರು.ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಹೊಳೆನರಸೀಪುರದಲ್ಲಿ ಪಾಲಿಟೆಕ್ನಿಕ್  ಸಂಜೆ ಕಾಲೇಜನ್ನು ಆರಂಭಿಸಲು ಅನುಮತಿ ಲಭ್ಯವಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಜೆ ಕಾಲೇಜುಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು.
ಜೊತೆಗೆ ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಾಣಕ್ಕೆ ರು. 4 ಕೋಟಿ ಹಣ ನೀಡಿದ್ದು, ಈ ಪೈಕಿ ರು. 2 ಕೋಟಿ ಹಣ ಬಿಡುಗಡೆಯಾಗಿದೆ. ಕೂಡಲೇ ಹಾಸ್ಟೆಲ್ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಜೊತೆಗೆ ಹುಡುಗರ ಹಾಸ್ಟೆಲ್ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಶಾಸಕ ಎಚ್.ಎಸ್. ಪ್ರಕಾಶ್, ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಂ, ಕಾಲೇಜಿನ ಪ್ರಾಂಶುಪಾಲ ಕರಿಸಿದ್ದಯ್ಯ, ಸೂಪರ್‌ಡೆಂಟ್ ಎಂಜಿನಿಯರ್ ರುಕ್ಮಾಂಗದ ಹಾಗೂ ಇತರರು ಇದ್ದರು.

'ಏಳು-ಬೀಳು ಸಹಜ'
ಅರಕಲಗೂಡು: 52 ವರ್ಷಗಳ ರಾಜಕೀಯ ಜೀವನದಲ್ಲಿ ಏಳು-ಬೀಳುಗಳನ್ನು ಕಂಡಿದ್ದೇನೆ. ದೇಶದ ಹಳ್ಳಿ ಹಳ್ಳಿಗಳ ಸಮಸ್ಯೆ ಏನೆಂದು ಅರಿತಿದ್ದೇನೆ. ಗ್ರಾಮೀಣ ಜನರ ಸಮಸ್ಯೆಗಳು ಬಗೆಹರಿದಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸದರು.
 ಭಾನುವಾರ ರಾತ್ರಿ ಇಲ್ಲಿನ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಪೇಟೆ ಮಾಚಗೋಡನಹಳ್ಳಿ ಗ್ರಾಮದ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
  ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಮಾಜಿ ಪ್ರಧಾನಿಯಾಗಿಯೂ ಗ್ರಾಮಗಳಲ್ಲಿ ಉಳಿದು ಜನರ ಆಗುಹೋಗುಗಳನ್ನು ವಿಚಾರಿಸಿದ ಏಕೈಕ ರಾಜಕಾರಣಿ ದೇವೇಗೌಡರು.  
 ಬಹಳಷ್ಟು ಜನ ಪ್ರಧಾನಿಗಳು ಆಗಿ ಹೋಗಿದ್ದಾರೆ.ಅವರಾರೂ ಮತ್ತೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಗ್ರಾಮಗಳತ್ತ ಮುಖ ಮಾಡಿದ್ದು ನಾವು ನೋಡಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.