ಹಾಸನ

ರು. 746 ಕೋಟಿ ಅನುದಾನ

Published On :

ಹಾಸನ: ಜಿಲ್ಲೆಯ ನಾನಾ ಯೋಜನೆಗಳಡಿ 2013-14ನೇ ಸಾಲಿಗೆ 746 ಕೋಟಿ ರು.ಗಳ ಅನುದಾನವನ್ನು ಒದಗಿಸಲಾಗಿದೆ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದರು.
ವಿಶೇಷ ಘಟಕ ಯೋಜನೆ (ಎಸ್‌ಸಿಪಿ)ಯಡಿ 138 ಕಾಮಗಾರಿಗೆ 10.06 ಕೋಟಿ ರು., ಗಿರಿಜನ ಉಪಯೋಜನೆ (ಟಿಎಸ್‌ಪಿ) ಅಡಿ 39 ಕಾಮಗಾರಿಗಳಿಗೆ 1.12 ಕೋಟಿ ರು., ವಿಶೇಷ ಅಭಿವೃದ್ಧಿ ಯೋಜನೆಯಡಿ (ಎಸ್‌ಡಿಪಿ) 21 ಕಾಮಗಾರಿಗಳಿಗೆ 9.24 ಕೋಟಿ ರು., 13ನೇ ಹಣಕಾಸಿನಲ್ಲಿ 12 ಕಾಮಗಾರಿಗಳಿಗೆ 11.32 ಕೋಟಿ ರು., ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿಯಡಿ (ಸಿಎಂಜಿಆರ್‌ವೈ) 381 ಕಾಮಗಾರಿಗಳಿಗೆ 15.81 ಕೋಟಿ ರು.ಗಳನ್ನು ಒದಗಿಸಲಾಗಿದೆ ಎಂದ ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಯೋಜನೆಗಳಿಗೆ ಅನುದಾನ: ಕೇಂದ್ರ ರಸ್ತೆ ನಿಧಿಯಡಿ 8 ಕಾಮಗಾರಿಗಳಿಗೆ 25 ಕೋಟಿ ರು., ಅಪೆಂಡಿಕ್ಸ್ ಇ (ರಸ್ತೆ, ಸೇತುವೆ ಹಾಗೂ ಕಟ್ಟಡಗಳು) 235 ಕೋಟಿ ರು., ನಬಾರ್ಡ್‌ನ 12  ಕಾಮಗಾರಿಗಳಿಗೆ 9.85 ಕೋಟಿ ರು., ಎಸ್ ಎಚ್ ಡಿ ಪಿ ಅಡಿ 307.06 ಕಿಮೀ ರಸ್ತೆ ಕಾಮಗಾರಿಗೆ 174.62 ಕೋಟಿ ರು., ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಅಡಿ 14 ಕಾಮಗಾರಿಗಳಿಗೆ 41.26 ಕೋಟಿ ರು., ನಮ್ಮ ಗ್ರಾಮ ನಮ್ಮರಸ್ತೆ ಯೋಜನೆಯಡಿ 128 ಕಾಮಗಾರಿಗಳಿಗೆ 84.85 ಕೋಟಿ ರು., ಕೆಆರ್‌ಡಿಸಿಎಲ್ ಯೋಜನೆಯಡಿ (ಚಿಕ್ಕನಾಯಕನಹಳ್ಳಿ- ತಿಪಟೂರು- ಹಾಸನ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ, ಭಾಗಶ- ಜಿಲ್ಲಾ ಮುಖ್ಯರಸ್ತೆ ಮತ್ತು ರಾಜ್ಯ ಹೆದ್ದಾರಿ-71) 241.76 ಕೋಟಿ ರು., ರಾಷ್ಟ್ರೀಯ ಹೆದ್ದಾರಿ ವಾರ್ಷಿಕ ಯೋಜನೆಯ 2013-14ರಲ್ಲಿ 47.74 ಕಿಮೀಗೆ 98.59 ಕೋಟಿ ರು.ಗಳು. ಕೇಂದ್ರ ರಸ್ತೆ ನಿಧಿ ಹಂತ-2ಕ್ಕೆ 27 ಕೋಟಿ ರು., ಮಲೆನಾಡು ಅಭಿವೃದ್ಧಿಯ 6 ಕಾಮಗಾರಿಗಳಿಗೆ 45 ಲಕ್ಷ ರು. ಅನುದಾನ ಒದಗಿಸಲಾಗಿದೆ ಎಂದರು.
ಉದ್ಘಾಟನೆಗೊಂಡ ಕಾಮಗಾರಿಗಳು: ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಡಿ ಶಿಕ್ಷಕರ ವಸತಿ ಗೃಹ 44 ಲಕ್ಷ ರು.ಗಳಲ್ಲಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯಡಿ 24 ಬಿದಾಯಿ ಫಲಾನುಭವಿಗಳಿಗೆ ಚೆತರಣೆ, ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಹಾಸನದಲ್ಲಿ 1.79 ಕೋಟಿ ರು.ಗಳಲ್ಲಿ, ಸಮಾಜ ಕಲ್ಯಾಣ ಇಲಾಖೆಯಡಿ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಸಕಲೇಶಪುರದಲ್ಲಿ 99.97 ಲಕ್ಷ ರು.ನಲ್ಲಿ, ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಬೇಲೂರು ತಾಲೂಕಿನಲ್ಲಿ 96 ಲಕ್ಷ ರು.ಗಳಲ್ಲಿ. ಪ್ರವಾಸೋದ್ಯಮ ಇಲಾಖೆಯಡಿ ಅರಕಲಗೂಡು ತಾಲೂಕಿನ ಹುಲಿಕಲ್ಲು ಶ್ರೀವೆಂಕಟರಮಣ ದೇವಾಲಯ ಬಳಿ ಯಾತ್ರಿ ನಿವಾಸಕ್ಕೆ 50 ಲಕ್ಷ ರು., ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಯಾತ್ರಿ ನಿವಾಸ 50 ಲಕ್ಷ ರು.ವೆಚ್ಚದಲ್ಲಿ ಕಾಮಗಾರಿಗಳ ಉದ್ಘಾಟನೆಗೊಳ್ಳಲಾಗಿದೆ.
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯಡಿ ಅಲ್ಪ ಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಚನ್ನರಾಯಪಟ್ಟಣದಲ್ಲಿ 99.98 ಲಕ್ಷ ರು.ವೆಚ್ಚದಲ್ಲಿ, ಸಮಾಜಕ ಕಲ್ಯಾಣ ಇಲಾಖೆಯಡಿ ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾಗಿರುವ 12 ಎಸ್‌ಇಪಿ, ಟಿಎಸ್‌ಪಿ ಕಾಮಗಾರಿಗಳು 90 ಲಕ್ಷ ರು.ನಲ್ಲಿ, ಪೌರಾಡಳಿತ ಇಲಾಖೆಯಡಿ ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಬೇಲೂರಿನಲ್ಲಿ 5 ಕೋಟಿ ರು.ನಲ್ಲಿ, ಪುರಸಭಾ ಮತ್ತು ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನದಲ್ಲಿ 90 ಲಕ್ಷ ರು., ಹಾಸನ ತಾಲೂಕು ಹಾಲುವಾಗಿಲು ಹತ್ತಿರ ಯಗಚಿ ನೀರಿನ ಸ್ಥಾವರದಿಂದ ತಟ್ಟೆಕೆರೆ ಪಂಚಾಯ್ತಿ ದೇವೇಗೌಡ ನಗರ ಮತ್ತು ಕೃಷ್ಣಾ ನಗರಗಳಿಗೆ ಕುಡಿಯುವ ನೀರು ಒದಗಿಸುವ ಕಾಮಗಾರಿಗೆ 99 ಲಕ್ಷ ರು.ಗಳಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.