ಹಾಸನ

ಮತದಾರರ ವಿಶೇಷ ಅಭಿಯಾನಕ್ಕೆ ಚಾಲನೆ

Published On :

ಹಾಸನ: ಲೋಕಸಭೆ ಚುಣಾವಣೆಗೆ ಮತದಾರರ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲಾದ್ಯಂತ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ವಿಶೇಷ ಅಭಿಯಾನ ನಡೆಸಲಾಯಿತು.
ಮತಗಟ್ಟೆಗಳಲ್ಲಿ ಹಾಲಿ ಮತದಾರರ ಪಟ್ಟಿಯಲ್ಲಿನ ಹೆಸರು ಪ್ರಕಟಿಸಿ ಸಾರ್ವಜನಿಕರಿಗೆ  ಮಾಹಿತಿ ನೀಡಲಾಯಿತು. ಅಲ್ಲದೆ ಮತದಾರರ ಪಟ್ಟಿಯಲ್ಲಿನ ಹೆಸರುಗಳನ್ನು ಓದಿ ಸಹ ಹೇಳಲಾಯಿತು.
ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಅನ್ಬುಕುಮಾರ್ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಅಧ್ಯಕ್ಷ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್, ನಗರಸಭೆ ಆಯುಕ್ತ  ಕೃಷ್ಣಮೂರ್ತಿ, ತಹಸೀಲ್ದಾರ್ ಮಂಜುನಾಥ್ ಇತರರು ನಗರ ವ್ಯಾಪ್ತಿಯ ನಾನಾ ಬೂತ್‌ಗಳಿಗೆ ಭೇಟಿ ನೀಡಿ  ಚಟುವಟಿಕೆ ಪರಿಶೀಲಿಸಿ ಸಲಹೆ ಸೂಚನೆ ನೀಡಿದರು.
ಈ ಪ್ರಕ್ರಿಯೆಯನ್ನು  ಪ್ರತಿ ಚುನಾವಣೆ ಸಂದರ್ಭದಲ್ಲಿ ಅನುಸರಿಸಲಾಗುತ್ತಿತ್ತಾದರೂ ಈ ವರ್ಷ ಇದನ್ನು ವಿಶೇಷ ಅಭಿಯಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಾ. 16 ರವರಗೆ ಮತದಾರರ ಪಟ್ಟಿ ಸೇರ್ಪಡೆಗೆ, ಅಲ್ಲದೆ ಹೆಸರು ತಿದ್ದುಪಡಿ, ಮಾರ್ಪಾಡು, ತೆಗೆದು ಹಾಕಲು ಸಹ ಅವಕಾಶವಿದೆ.ಇದಕ್ಕಾಗಿ ಬೂತ್ ಮಟ್ಟದ ಅಧಿಕಾರಿ, ನಾಡಕಚೇರಿ, ತಹಸೀಲ್ದಾರರ ಕಚೇರಿ ಅಥವಾ ಉಪ ವಿಭಾಗಾಧಿಕಾರಿ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಅಧ್ಯಕ್ಷ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯು.ಪಿ.ಸಿಂಗ್ ಮಾತನಾಡಿ, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಹಾಗೂ ಮತದಾನ ಬಹಳ ಮುಖ್ಯವಾದ ಅಂಶಗಳು. ಪ್ರತಿಯೊಬ್ಬರು ಮತದಾನದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸ ಬೇಕು ಎಂದು ಹೇಳಿದರು.

ನೀತಿ ಸಂಹಿತೆ- ಡಿಸಿ ಪರಿಶೀಲನೆ
ಹಾಸನ: ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿ. ಅನ್ಬು ಕುಮಾರ್ ಜಿಲ್ಲಾ ಮಟ್ಟದ ಚುನಾವಣಾ ಮಾದರಿ ನೀತಿ ಸಂಹಿತೆ ತಂಡದ ಸದಸ್ಯರು ಹಾಗೂ ನಾನಾ ಉಪ ಸಮಿತಿ ಮುಖ್ಯಸ್ಥರ ಸಭೆ ನಡೆಸಿ, ಈವರೆಗೆ  ಕೈಗೊಳ್ಳಲಾಗಿರುವ ಕ್ರಮಗಳ ಪ್ರಗತಿ ಬಗ್ಗೆ ಮಾಹಿತಿ ಪಡೆದರು. ಮುಂದೆ ಹಂತ ಹಂತವಾಗಿ ಅನುಷ್ಠಾನಗೊಳ್ಳಬೇಕಿರುವ ಕ್ರಮಗಳು ಹಾಗೂ ಪ್ರತಿ ದಿನ ನೀಡಬೇಕಿರುವ ಮಾಹಿತಿಗಳ ಬಗ್ಗೆ ಸವಿವರವಾಗಿ ತಿಳಿಸಿದರು.
ಪ್ರತಿ ತಂಡವೂ ತಮಗೆ ನಿಗದಿಪಡಿಸಿದ ಅವಧಿಯೊಳಗೆ ವರದಿ ನೀಡಬೇಕು ಯಾವುದೇ ತಂಡವು ತಮ್ಮ ಗಮನಕ್ಕೆ ಮಾಹಿತಿ ತರದೆ ನೇರವಾಗಿ ಚುನಾವನಾ ಆಯೋಗಕ್ಕೆ ವರದಿ ಕಳುಹಿಸುವಂತಿಲ್ಲ.
ಸಮಯ ಪರಿಪಾಲನೆ ಶಿಸ್ತು, ಸಂಯಮದೊಂದಿಗೆ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು. ಯಾವುದೆ ಲೋಪಗಳಿಲ್ಲದಂತೆ ಕಾರ್ಯ ನಿರ್ವಹಿಸಿ ಚುನಾವಣೆ ಯಶಸ್ವಿಯಾಗಿ ನಡೆಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಮತಗಟ್ಟೆ ಅಧಿಕಾರಿಗಳ ನೇಮಕಾತಿ ಬಗ್ಗೆ ಡಾಟಾ ಎಂಟ್ರಿ
ಹಾಸನ: ಲೋಕಸಭೆ ಚುನಾವಣೆ ಸಂಬಂಧ ಈಗಾಗಲೇ ಫೆಬ್ರವರಿ 10ರಂದು ಎಲ್ಲಾ ವೇತನ ಬಟವಾಡೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದ್ದು, ಮತಗಟ್ಟೆ ಅಧಿಕಾರಿಗಳ ನೇಮಕಾತಿಗಾಗಿ ಅವಶ್ಯಕವಿರುವ ಅವರುಗಳ ಸೇವಾ ವಿವರಗಳನ್ನು ಮತ್ತು ಎಫಿಕ್ ಕಾರ್ಡ್ ಸಂಖ್ಯೆ, ಸ್ವಂತ ಸ್ಥಳ, ಅವರು ಮತದಾನ ಮಾಡುವ ಸ್ಥಳ ಇತ್ಯಾದಿ ವಿವರಗಳನ್ನು ನಿಗದಿತ ತಂತ್ರಾಂಶದಲ್ಲಿ ಯಾವುದೇ ಕಾಲಂಗಳನ್ನು ಬಿಡದೆ ಸಂಪೂರ್ಣವಾಗಿ ಭರ್ತಿ ಮಾಡಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ಗೋಪಾಲಕೃಷ್ಣ ಕೋರಿದ್ದಾರೆ.
ಈ ಕಾರ್ಯ ಮಾರ್ಚ್12 ರೊಳಗಾಗಿ ಪೂರ್ಣಗೊಳ್ಳುವಂತೆ ಹಾಗೂ ಇದಕ್ಕಾಗಿ ಎನ್‌ಐಸಿ ಯಿಂದ ಸಿದ್ದಪಡಿಸಲಾದ ನೂತನ ತಂತ್ರಾಂಶದ ವಿಳಾಸ ಡಿಡಿಠಠಠಟಡ ಒದಗಿಸಿದ್ದು ಈ ಬಗ್ಗೆ ಎಲ್ಲಾ ವೇತನ ಬಟವಾಡೆ ಅಧಿಕಾರಿಗಳು ಗಮನಿಸಬೇಕೆಂದು ಅಪರ ಜಿಲ್ಲಾಧಿಕಾರಿ ಕೋರಿದ್ದಾರೆ.
ಮಾಧ್ಯಮ ಉಸ್ತುವಾರಿ ಸಮಿತಿ: ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ - 9449892000
ರೇಷ್ಮೆ ಇಲಾಖೆ ಉಪನಿರ್ದೇಶಕ ಶಿವನಾಗೇಂದ್ರ ಬಾಬು ಸಮಿತಿ ಸದಸ್ಯ- ಮೊ. 9741156468
ಆಕಾಶವಾಣಿಯ ಪ್ರಸಾರ ನಿರ್ವಾಹಕ (ಕೃಷಿ) ಡಾ. ವಿಜಯ್ ಅಂಗಡಿ ಸದಸ್ಯ -ಮೊ 9448996495.
ನಗರದ ಸರ್ಕಾರಿ ಎಲ್.ವಿ.ಪಾಲಿಟೆಕ್ನಿಕ್ ಪ್ರಾಧ್ಯಾಪಕ ಐವನ್ ಡಿಸಿಲ್ವ ಸದಸ್ಯ - ಮೊ  9448073330
ವಾರ್ತಾಧಿಕಾರಿ ವಿನೋದ್‌ಚಂದ್ರ ಸಮಿತಿ ಸದಸ್ಯ ಕಾರ್ಯದರ್ಶಿ - ಮೊ 9448267068
ವಾರ್ತಾ ಇಲಾಖೆ ಕಿರಿಯ ಸಹಾಯಕ ಪ್ರಕಾಶ್ ಸಮಿತಿ ಸಹಾಯಕರು -ಮೊ 9481114894
ಜಿಲ್ಲಾಧಿಕಾರಿ ಕಚೇರಿಯ ಹಾಗೂ ನಿಯಂತ್ರಣ ಕೊಠಡಿ ಮತ್ತು ತಾಲೂಕು ಕಚೇರಿ ದೂರವಾಣಿ ಸಂಖ್ಯೆಗಳು
ಕಚೇರಿ ದೂರವಾಣಿ ಸಂಖ್ಯೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಚುನಾವಣಾ ಶಾಖೆ ದೂ.ಸಂ.  08172-265028
ನಿಯಂತ್ರಣ ಕೊಠಡಿ - 08172-265021,  08172-265029, 08172-265024, 08172-265025, 08172-261111, ಎನ್.ಐ.ಸಿ ಕಚೇರಿ, ಜಿಲ್ಲಾ ಪಂಚಾಯಿತಿ, ಹಾಸನ-
08172-267479, 08172-265027, ಉಪವಿಭಾಗಾಧಿಕಾರಿ ಕಚೇರಿ, ಹಾಸನ - 08172-268403, ಉಪವಿಭಾಗಾಧಿಕಾರಿ ಕಚೇರಿ, ಸಕಲೇಶಪುರ - 08173-244003
ತಾಲೂಕು ಕಚೇರಿ, ಹಾಸನ - 08172-268395, 08172-260395, ತಾಲೂಕು ಕಚೇರಿ, ಚನ್ನರಾಯಪಟ್ಟಣ- 08176-252235, 08176-252314, ತಾಲೂಕು ಕಚೇರಿ, ಅರಸೀಕೆರೆ
- 08174-232270, 08174-234879, ತಾಲೂಕು ಕಚೇರಿ.
 ಹೊಳೆನರಸೀಪುರ - 08175-273261, 08175-272111, ತಾಲೂಕು ಕಚೇರಿ, ಸಕಲೇಶಪುರ - 08173-244004,
08173-243012, ತಾಲೂಕು ಕಚೇರಿ, ಬೇಲೂರು- 08177-222234, 08177-230800, ತಾಲೂಕು ಕಚೇರಿ, ಅರಕಲಗೂಡು- 08175-220246, 08175-221736,
ತಾಲೂಕು ಕಚೇರಿ, ಆಲೂರು - 08170-218222, 08170-218422.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.