ಹಾಸನ

1957 ರಲ್ಲಿ ರಚನೆಯಾದ ಹಾಸನ ಲೋಕಸಭೆ

Published On :

ಹಾಸನ: ಹಾಸನ ಲೋಕಸಭೆ ಕ್ಷೇತ್ರ 1951 ರಲ್ಲಿ  ಚಿಕ್ಕಮಗಳೂರನ್ನು ಒಳಗೊಂಡಂತೆ ಅತಿ ವಿಸ್ತಾರವಾದ ಲೋಕಸಭೆ ಕ್ಷೇತ್ರವಾಗಿತ್ತು. 1957ರಲ್ಲಿ ಹಾಸನ ಲೋಕಸಭಾ ಕ್ಷೇತ್ರವಾಗಿ ರೂಪಿಸಲಾಯಿತು.
ಹಾಸನ ಜಿಲ್ಲೆಯ ಸಕಲೇಶಪುರ-ಆಲೂರು ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದರೆ, ಉಳಿದ 7 ಕ್ಷೇತ್ರಗಳು ಸಾಮಾನ್ಯ ಕ್ಷೇತ್ರ. ಚಿಕ್ಕಮಗಳೂರು ಜಿಲ್ಲೆಗೆ ಸೇರಿದ ಕಡೂರು ಸೇರಿದಂತೆ 8 ವಿಧಾನಸಭೆ ಕ್ಷೇತ್ರಗಳನ್ನು ಹಾಸನ ಲೋಕಸಭೆ ಕ್ಷೇತ್ರ ಒಳಗೊಂಡಿದೆ.
1957 ಹಾಗೂ 1962ರಲ್ಲಿ ಕಾಂಗ್ರೆಸ್‌ನಿಂದ ಎಚ್. ಸಿದ್ದನಂಜಪ್ಪ ಆಯ್ಕೆಯಾಗಿದ್ದರು. 1961ರಲ್ಲಿ ಸ್ವತಂತ್ರ ಪಕ್ಷದ ಎನ್.ಶಿವಪ್ಪ, 1971ರಲ್ಲಿ ಕಾಂಗ್ರೆಸ್‌ನ ನುಗ್ಗೇಹಳ್ಳಿ ಶಿವಪ್ಪ, 1974ರಲ್ಲಿ ಕಾಂಗ್ರೆಸ್‌ನ ಎಚ್.ಆರ್.ಲಕ್ಷ್ಮಣ್ ಆಯ್ಕೆಯಾದರು.
1977ರಲ್ಲಿ ಹಾಸನ  ಕ್ಷೇತ್ರದಿಂದ ಭಾರತೀಯ ಲೋಕದಳದ ಎಸ್.ನಂಜೇಶ್‌ಗೌಡ, 1980 ರಲ್ಲಿ ಭಾರತೀಯ ಕಾಂಗ್ರೆಸ್‌ನ (ಇಂದಿರಾ) ಹಾಗೂ 1984ರಲ್ಲಿ ಕಾಂಗ್ರೆಸ್‌ನಿಂದ ಎಚ್.ಎನ್.ನಂಜೇಗೌಡ ಆಯ್ಕೆಯಾಗಿದ್ದರು. 1989ರಲ್ಲಿ ಎಚ್.ಸಿ.ಶ್ರೀಕಂಠಯ್ಯ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದರೆ 1991ರಲ್ಲಿ ಜನತಾ ದಳದಿಂದ ಎಚ್.ಡಿ. ದೇವೇಗೌಡ ಜಯಗಳಿಸಿದ್ದರು.
1996ರಲ್ಲಿ ಜನತಾ ದಳದಿಂದ ವೈ.ಎನ್.ರುದ್ರೇಶಗೌಡ, 1998ರಲ್ಲಿ ಜನತಾ ದಳದಿಂದ ಎಚ್.ಡಿ.ದೇವೇಗೌಡ, 1999ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಜಿ.ಪುಟ್ಟಸ್ವಾಮಿಗೌಡ, 2004 ಮತ್ತು 2009ರಲ್ಲಿ ಜಾತ್ಯಾತೀತ ಜನತಾದಳದಿಂದ ಎಚ್.ಡಿ.ದೇವೇಗೌಡ ಆಯ್ಕೆಯಾಗಿದ್ದರು.
2009ರ ಲೋಕಸಭಾ ಚುನಾವಣೆ-ಹಿನ್ನೋಟ
2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರ ಮತ್ತೊಮ್ಮೆ ಎಚ್.ಡಿ. ದೇವೇಗೌಡರಿಗೆ ಒಲಿದಿತ್ತು. ಹಾಸನ ಲೋಕಸಭಾ ಕ್ಷೇತ್ರದಲ್ಲಿ 2009ರ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 14,15,680. ಇದರಲ್ಲಿ 7,16,214 ಪುರುಷ, 6,99,466 ಮಹಿಳಾ ಮತದಾರರಿದ್ದರು.
ಅದರಲ್ಲಿ 5,04,545 ಪುರುಷ ಹಾಗೂ 4,75,498 ಮಹಿಳಾ ಮತದಾರರು ಸೇರಿದಂತೆ ಒಟ್ಟಾರೆ 9,80,043 ಮಂದಿ ಮತ ಚಲಾಯಿಸಿದ್ದಾರೆ.
ಕ್ಷೇತ್ರವಾರು ವಿವರ: (2009). ಶ್ರವಣಬೆಳಗೊಳ - ಒಟ್ಟು ಮತದಾರರು  1,80,305. ಇದರಲ್ಲಿ 90,672 ಪುರುಷ ಹಾಗೂ 89,633 ಮಹಿಳೆ, ಅರಸೀಕೆರೆ ಒಟ್ಟು 1,80,895 ಇದರಲ್ಲಿ 91,054 ಪುರುಷ ಹಾಗೂ 89,841 ಮಹಿಳಾ ಮತದಾರರಿದ್ದರು. ಬೇಲೂರು ಒಟ್ಟು 1,63,653 ಮತದಾರರಿದ್ದು ಇದರಲ್ಲಿ 83,102 ಪುರುಷ ಹಾಗೂ 80,551 ಮಹಿಳಾ ಮತದಾರಿದ್ದರು. ಹಾಸನ ಒಟ್ಟು  1,79,154 ಮತದಾರರಿದ್ದು ಇದರಲ್ಲಿ 89,533 ಪುರುಷ ಹಾಗೂ 89,621 ಮಹಿಳಾ ಮತದಾರರು.
ಹೊಳೆನರಸೀಪುರದಲ್ಲಿ 1,84,980 ಮತದಾರರಿದ್ದು ಇದರಲ್ಲಿ 93,721 ಪುರುಷ ಹಾಗೂ 91,259 ಮಹಿಳಾ ಮತದಾರರು. ಅರಕಲಗೂಡಿನಲ್ಲಿ 1,81,139 ಮತದಾರರಿದ್ದು ಇದರಲ್ಲಿ 93,669 ಪುರುಷ ಹಾಗೂ 87,470 ಮಹಿಳಾ ಮತದಾರರು. ಸಕಲೇಶಪುರದಲ್ಲಿ ಒಟ್ಟು 1,71,455 ಮತದಾರರಿದ್ದು ಇದರಲ್ಲಿ 85,417 ಪುರುಷ ಹಾಗೂ 86,038 ಮಹಿಳಾ ಮತದಾರರು. ಕಡೂರು ಲೋಕಸಭಾ ಕ್ಷೇತ್ರ ದಲ್ಲಿ ಒಟ್ಟು 74,099 ಮತದಾರರಿದ್ದು, ಇದರಲ್ಲಿ 89,046 ಪುರುಷರು ಹಾಗೂ 86,38 ಮಹಿಳೆಯರಿದ್ದರು.
ಚಲಾವಣೆಗೊಂಡ ಮತಗಳ ವಿವರ: ಒಟ್ಟು 14,15,680 ಮತದಾರರಲ್ಲಿ 9,80,043 ಮತದಾರರು ಮತ ಚಲಾಯಿಸಿದ್ದು ಶೇಕಡ 69.16ರಷ್ಟು ಮತದಾನವಾಗಿತ್ತು. ಇದರಲ್ಲಿ ಅತಿ ಹೆಚ್ಚು ಅರಕಲಗೂಡು ಕ್ಷೇತ್ರದಲ್ಲಿ ಶೇಕಡ 77.21 ಮಂದಿ ಮತ ಚಲಾಯಿಸಿದ್ದರು. ಒಟ್ಟು 1,81,139 ಮತದಾರರ ಪೈಕಿ 72,801 ಪುರುಷುರು ಮತ್ತು 67,064 ಮಹಿಳೆಯರು ಸೇರಿದಂತೆ ಒಟ್ಟು 1,39,865 ಮಂದಿ ಮತ ಚಲಾಯಿಸಿದ್ದರು.
ಕನಿಷ್ಠ ಅಂದರೆ ಕಡೂರು ಕ್ಷೇತ್ರದಲ್ಲಿ 1,74,099 ಮತದಾರರಲ್ಲಿ 54,406 ಪುರುಷ ಹಾಗೂ 46,327 ಮಹಿಳೆಯರು ಸೇರಿದಂತೆ 1,00,733 ಮಂದಿ ಮತ ಚಲಾಯಿಸಿದ್ದರು. ಕೇವಲ 57.86ರಷ್ಟು ಮತದಾನವಾಗಿತ್ತು.
ಇತರ ಕ್ಷೇತ್ರಗಳ ಮತದಾನದ ವಿವರ: ಶ್ರವಣಬೆಳಗೊಳ ಕ್ಷೇತ್ರದಲ್ಲಿ 62,391 ಪುರುಷ ಹಾಗೂ 62,124 ಮಹಿಳೆಯರು ಸೇರಿದಂತೆ ಒಟ್ಟು 1,24,515 ಮಂದಿ ಮತ ಚಲಾಯಿಸಿದ್ದರು. ಅರಸೀಕೆರೆ ಕ್ಷೇತ್ರದಲ್ಲಿ 64,558 ಪುರುಷ ಹಾಗೂ 60,487 ಮಹಿಳೆಯರು ಸೇರಿದಂತೆ ಒಟ್ಟು 1,25,045 ಮಂದಿ ಮತ ಚಲಾಯಿಸಿದ್ದರು.
ಬೇಲೂರು ಕ್ಷೇತ್ರದಲ್ಲಿ 58,931 ಪುರುಷ ಹಾಗೂ 53,759 ಮಹಿಳೆಯರು ಸೇರಿದಂತೆ ಒಟ್ಟು 1,12,690 ಮಂದಿ ಮತ ಚಲಾಯಿಸಿದ್ದರು. ಹಾಸನ ಕ್ಷೇತ್ರದಲ್ಲಿ 56,326 ಪುರುಷ ಹಾಗೂ 54,109 ಮಹಿಳೆಯರು ಸೇರಿದಂತೆ ಒಟ್ಟು 1,10,435 ಮಂದಿ ಮತ ಚಲಾಯಿಸಿದ್ದರು.
ಹೊಳೆನರಸೀಪುರ ಕ್ಷೇತ್ರದಲ್ಲಿ 71,494 ಪುರುಷ ಹಾಗೂ 69,211 ಮಹಿಳೆಯರು ಸೇರಿದಂತೆ ಒಟ್ಟು 1,40,705 ಮಂದಿ ಮತ ಚಲಾಯಿಸಿದ್ದರು. ಸಕಲೇಶಪುರ ಕ್ಷೇತ್ರದಲ್ಲಿ 63,638 ಪುರುಷ ಹಾಗೂ 62,417 ಮಹಿಳೆಯರು ಸೇರಿದಂತೆ ಒಟ್ಟು 1,26,055 ಮಂದಿ ಮತ ಚಲಾಯಿಸಿದ್ದರು.

2009ರ ಲೋಕಸಭಾ ಚುನಾವಣೆ-ಹಿನ್ನೋಟ
2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರ ಮತ್ತೊಮ್ಮೆ ಎಚ್.ಡಿ. ದೇವೇಗೌಡರಿಗೆ ಒಲಿದಿತ್ತು. ಹಾಸನ ಲೋಕಸಭಾ ಕ್ಷೇತ್ರದಲ್ಲಿ 2009ರ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 14,15,680. ಇದರಲ್ಲಿ 7,16,214 ಪುರುಷ, 6,99,466 ಮಹಿಳಾ ಮತದಾರರಿದ್ದರು.
ಅದರಲ್ಲಿ 5,04,545 ಪುರುಷ ಹಾಗೂ 4,75,498 ಮಹಿಳಾ ಮತದಾರರು ಸೇರಿದಂತೆ ಒಟ್ಟಾರೆ 9,80,043 ಮಂದಿ ಮತ ಚಲಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.