ಸರಗಳ್ಳಿ ಗ್ರಾಮದಂಚಲ್ಲಿ ಸಲಗ ಸೆರೆ
ಸಕಲೇಶಪುರ: ತಾಲೂಕಿನ ಸರಗಳ್ಳಿ ಗ್ರಾಮದಂಚಿನಲ್ಲಿ ಸೋಮವಾರ ಕಂಡು ಬಂದ ಸಲಗವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಮುಂಜಾನೆ ಸರಗಳ್ಳಿ ಗ್ರಾಮದ ಯಸಳೂರು ಶೆಟ್ಟರ್ ಎಂಬುವವರ ಕಾಫಿ ತೋಟದಲ್ಲಿ 14 ಕಾಡಾನೆ ಗುಂಪು ಬೀಡುಬಿಟ್ಟಿರುವುದಾಗಿ ಗ್ರಾಮಸ್ಥರು ಯಸಳೂರು ವಲಯ ಅರಣ್ಯಕ್ಕೆ ತಿಳಿಸಿದ್ದರು. ಆಲೂರು ತಾಲೂಕಿನ ಭರತೂರು ಗ್ರಾಮದಲ್ಲಿರುವ ಆನೆ ಕ್ಯಾಂಪಿಗೆ ಮಾಹಿತಿ ನೀಡಿದ ಪರಿಣಾಮ 11.45 ರವೇಳೆಗೆ ಸ್ಥಳಕ್ಕಾಗಮಿಸಿದ ಸಾಕಾನೆಗಳು, ಮಾವುತರು ಹಾಗೂ ವೈದ್ಯರು ಮಧ್ಯಾಹ್ನ 12.30 ರವರಗೆ ಕಾರ್ಯಾಚರಣೆ ನಡೆಸಿ ಗುಂಪಿನಲ್ಲಿದ್ದ ಸುಮಾರು 30 ವರ್ಷದ ಗಂಡಾನೆಯನ್ನು ಗುಂಪಿನಿಂದ ಬೇರ್ಪಡಿಸಿ ಅರವಳಿಕೆ ಮದ್ದುನ್ನು ಬದುಕಿನ ಮೂಲಕ ಹಾರಿಸಿದರು. ಇದರಿಂದ ಕೆಲ ದೂರ ಓಡಿ ನಿತ್ರಾಣಗೊಂಡ ಕಾಡಾನೆಯನ್ನು ಬಂಧಿಸಿದ ಮಾವುತರು ನೀರು ಹಾಕುವ ಮೂಲಕ ಎಚ್ಚರಿಸಿ ಸರಗಳ್ಳಿ ಗ್ರಾಮದಲ್ಲಿ ಕಟ್ಟಿಹಾಕಿದರು. ಕೂಡಲೇ ನಂತರ ಮತ್ತೊಂದು ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನಿಸಿದರಾದರೂ ಗುಂಪಿನಲ್ಲಿದ್ದ ಆನೆಯನ್ನು ಬೇರ್ಪಡಿಸಲು ವಿಫಲವಾದ ಕಾರಣ ಕಾರ್ಯಾಚರಣೆಯನ್ನು ನಾಳೆಗೆ ಮುಂದೂಡಲಾಗಿದೆ. ಗ್ರಾಮದಲ್ಲಿ 8 ನಾನಾ ವಯಸ್ಸಿನ ಮರಿಯಾನೆಗಳಿದ್ದರೆ, ಐದು ಬಾರಿ ಗಾತ್ರದ ಆನೆಗಳಿವೆ. ಮಂಗಳವಾರವು ಮತ್ತೆ ಕಾರ್ಯಾಚರಣೆ ನಡೆಯಲಿದೆ. ನಾಳೆ ಹಿಡಿಯಲಿರುವ ಆನೆಯೊಂದಿಗೆ ಇಂದು ಹಿಡಿದಿರುವ ಆನೆಯನ್ನು ಒಟ್ಟಿಗೆ ದುಬಾರೆ ಆನೆ ಕ್ಯಾಂಪಿಗೆ ಸಾಗಿಸಲಾಗುವುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಇದುವರಗೆ ಒಟ್ಟು 6 ಕಾಡಾನೆಗಳನ್ನು ಹಿಡಿಯಲಾಗಿದ್ದು ಉಚ್ಚನ್ಯಾಯಲಯದ ಆದೇಶದಂತೆ ಇನ್ನೂ 19 ಕಾಡಾನೆ ಸೆರೆಹಿಡಿಯಬೇಕಿದೆ.
ಕಲಾಸಕ್ತರನ್ನು ಸೆಳೆದ ಚಿತ್ರಕಲಾ ಪ್ರದರ್ಶನ
ಹಾಸನ: ಚಿತ್ರಕಲಾ ಶಿಕ್ಷಕರ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರದಲ್ಲಿ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಚಿತ್ರ ಕಲೆಗಳ ಪ್ರದರ್ಶನ ಕಲಾಸಕ್ತರನ್ನು ಸೆಳೆದಿದೆ. ಮೂರನೇ ದಿನವಾದ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ವೀಕ್ಷಿಸಿದರು. ಹಿರಿಯ ಕಲಾವಿದ ಬಿ.ಎಸ್. ದೇಸಾಯಿ ಮತ್ತು ತಮ್ಮ ಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿರುವ ಕಲಾವಿದರು ವಿವರ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

