ಧಾರ್ಮಿಕ ಕಾರ್ಯಗಳು ನಮ್ಮ ಸಂಸ್ಕೃತಿಯ ಭಾಗ
ರಾಮನಾಥಪುರ: ಧಾರ್ಮಿಕ ಕಾರ್ಯಕ್ರಮಗಳು ನಮ್ಮ ಸಂಸ್ಕತಿಯ ಅವಿಭಾಜ್ಯ ಅಂಗ. ಧರ್ಮ ಜಾಗೃತಿ ಜತೆಗೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಯೊಬ್ಬರು ಒತ್ತು ನೀಡಬೇಕೆಂದು ಕುಕ್ಕೆ ಸುಬ್ರಹ್ಮಣ್ಯ ಮಠ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದರು.
ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿರುವ ಚಾತುರ್ಯುಗ ಮೂರ್ತಿ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನದ ಅವರಣದಲ್ಲಿ ಇತ್ತೀಚೆಗೆ ನಡೆದ ಅತಿರುದ್ರ ಮಹಾಯಾಗದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಲ್ಲಿಯ ಪಟ್ಟಾಭಿರಾಮ ದೇವಸ್ಥಾನದ ಧರ್ಮದರ್ಶಿ ಅರ್.ಎಸ್. ನರಸಿಂಹಮೂರ್ತಿ, ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಪಾರುಪತ್ತೇಗಾರ್ ಸೀತಾರಾಮ್, ಸಮಾಜ ಸೇವಕ ಎಚ್.ಎನ್. ರಾಮಶೇಷ, ಕೋಣನೂರು ಶ್ರೀನಿವಾಸಮೂರ್ತಿ ವಾಸುಮಾಸ್ರು ಶ್ರೀ ಅತಿರುದ್ರ ಹಾಗೂ ಶತಚಂಡಿಕಾ ಮಹಾಯಾಗದ ಸಮಿತಿ ಅಧ್ಯಕ್ಷ ಕೇಶವಮೂರ್ತಿ, ಎಚ್.ಎಸ್. ತಿರುಮಲಾಚಾರ್, ದೇವಕಿ ಚಂದ್ರಶೇಖರ್, ಎಚ್.ಎನ್. ವೆಂಕಟೇಶ್, ನಾಗರಾಜ್, ಶ್ರೀನಿವಾಸ್ ಅಯ್ಯಾಂಗಾರ್ ಇತರರು ಇದ್ದರು.
ಬಸ್ಮೀಕರಣ ಹೊಂಡ ಸ್ಥಳಾಂತರಿಸಲು ಆಗ್ರಹ
ಬೇಲೂರು: ಪುರಸಭಾ ಬಸ್ಮೀಕರಣ ಹೊಂಡದಿಂದ ಸುತ್ತಮುತ್ತ ನಿವಾಸಿಗಳಿಗೆ ದುರ್ವಾಸನೆ ಸಮಸ್ಯೆ ಉಂಟಾಗುತ್ತಿದ್ದು, ಇದರ ನಿರ್ಮಾಣ ಅವೈಜ್ಞಾನಿಕವಾಗಿದು, ಕೂಡಲೇ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ವೈ.ಎನ್. ರುದ್ರೇಶಗೌಡ ತಿಳಿಸಿದ್ದಾರೆ.
ಇತ್ತೀಚೆಗೆ ಪಟ್ಟಣದ ಹೊಳೇಬೀದಿಯ ಪುರಸಭಾ ಭಸ್ಮೀಕರಣ ಹೊಂಡಕ್ಕೆ ಆರಿಫ್ ಎಂಬ ಯುವಕ ಬಿದ್ದು ಸಾವನ್ನಪಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿದ ನಂತರ ಮಾತನಾಡಿ, ಈ ಘಟಕ ನಿರ್ಮಿಸುವಾಗಲೇ ಸ್ಥಳದ ವಿಷಯದಲ್ಲಿ ತಪ್ಪಾಗಿದೆ. ನಗರ ಹೊರವಲಯದಲ್ಲಿ ಈ ಬಸ್ಮೀಕರಣ ಹೊಂಡವನ್ನು ನಿರ್ಮಾಣ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಸ್ಥಳದ ಅಭಾವದಿಂದ ಸಾಧ್ಯವಾಗಲಿಲ್ಲ. ಈ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ, ಶೀಘ್ರವೇ ಎಲ್ಲಾ ಕೊರತೆಗಳನ್ನು ನಿವಾರಿಸಿ ಸ್ಥಳಾಂತರಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ದರ್ಗಾ ಕಮಿಟಿಯ ಸಲೀಂ, ಶಕೀಲ್, ಅಕ್ರಂ, ಇರ್ಫಾನ, ಅತೀಖ್, ಬಸವೇಶ್ವರ ದೇವಸ್ಥಾನ ಕಮಿಟಿಯ ವಿರೂಪಾಕ್ಷ, ಶ್ರೀಧರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

