ಭಾಷಣ, ಪುಸ್ತಕಗಳಲ್ಲಿ ಮಾತ್ರ ಮಹಿಳೆಯರಿಗೆ ಗೌರವ
ಬೇಲೂರು: ವೇದಿಕೆ ಮೇಲಿನ ಭಾಷಣ ಮತ್ತು ಪುಸ್ತಕದಲ್ಲಿ ಮಾತ್ರ ಮಹಿಳೆಗೆ ಗೌರವ ನೀಡುತ್ತಿದ್ದು, ಇಂದಿನ ಆಧುನಿಕ ಯುಗದಲ್ಲೂ ಕೆಲವೆಡೆ ಮಹಿಳೆಯರನ್ನು ಕೀಳಾಗಿ ಕಾಣುತ್ತಿರುವುದು ವಿಷಾದನೀಯ ಎಂದು ಶಿವಪುರ ಬಸವ ಮಹಾಮನೆ ಶ್ರೀ ಬಸವಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂದಿರಲ್ಲಿ ಭಾನುವಾರ ತಾಲೂಕು ಗಂಗೋತ್ರಿ ಮಹಿಳಾ ಒಕ್ಕೂಟ, ಮಾನವ ಹಕ್ಕು ಭಾರತೀಯ ಮಹಾಮೈತ್ರಿ , ಟಿಪ್ಪು ಸಂಘ, ಅಂತರಾಷ್ಟ್ರೀಯ ಕೈಸ್ತ ಸೇವಾ ಸಂಸ್ಥೆ, ಚಿಕ್ಕಮಗಳೂರು ವಿವಿಧೋದ್ದೇಶ ಸೇವಾ ಸಂಸ್ಥೆ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಬಸವಾದಿ ಶರಣರ ಕಾಲದಲ್ಲೇ ಮಹಿಳೆ ಪುರುಷನ್ನು ತಿದ್ದಿ ಬುದ್ದಿ ಹೇಳುವ ಸಾಮರ್ಥ್ಯವನ್ನು ಬೆಳೆಸಿಕೊಂಡು ಸಮಾಜ ಅಂಕು-ಡೊಂಕುಗಳ ಬಗ್ಗೆ ತಮ್ಮದೇ ಆದ ವಚನಗಳನ್ನು ಬರೆದಿದ್ದಾರೆ ಎಂದರು.
ಹಾಸನ ಸಂಜೀವಿನಿ ಸಂಘದ ಅಧ್ಯಕ್ಷೆ ಜೆ.ಸಿ. ರೇಣುಕಾಕೃಷ್ಣ ಮಾತನಾಡಿ, ಮಹಿಳೆಗೆ ಗೌರವ ಕೊಡುವುದರ ಜತೆಗೆ ರಾಜಕೀಯವಾಗಿ ವಿಶೇಷ ಸ್ಥಾನ-ಮಾನ ನೀಡಬೇಕು. ಕೇವಲ ಸ್ಥಳೀಯ ಸಂಸ್ಥೆಗಳಿಗೆ ಮಾತ್ರ ಮೀಸಲಾತಿ ನೀಡುವುದಕ್ಕಿಂತ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಸಿಎಂಎಸ್ಎಸ್ಎಸ್ ಹಾಸನ ನಿರ್ದೇಶಕ ಫೆಲಿಕ್ ಥಾಮಸ್ ಸುಜಾರಿಯೋ ಮಾತನಾಡಿ, ಮಹಿಳೆಗೆ ಗೌರವ ನೀಡುವ ಸಮಾಜದಲ್ಲಿ ನಿತ್ಯ ಮಹಿಳೆಯ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯುತ್ತಿದ್ದು, ಕುಟುಂಬದಲ್ಲಿ ಹೊಣೆಗಾರಿಕೆ ಕೈತಪ್ಪಿ ಕುಟುಂಬದ ಬೀದಿ ಪಾಲಾಗುವ ಸಂಭವ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಮಹಿಳೆ ಸ್ವಾವಲಂಬಿ ಬದುಕಿಗೆ ಮುಖ ಮಾಡಬೇಕು ಹಾಗೂ ತನ್ನ ಕುಟುಂಬದ ಸಂಪೂರ್ಣ ಹೊಣೆಗಾರಿಕೆಯನ್ನು ನಿಭಾಯಿಸಿದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಗತಿ ಪರ ಸಂಘಟನೆಗಳ ಗೌರವಾಧ್ಯಕ್ಷ ಕೆ. ಸುದರ್ಶನ್, ನೇತ್ರ ವೈದ್ಯ ಡಾ. ಪಿ. ಎಲ್. ನಟರಾಜ್, ಮಾನವ ಹಕ್ಕು ಜಿಲ್ಲಾಧ್ಯಕ್ಷ ರವಿಕುಮಾರ್, ಸಂಯೋಜಕ ಜಾನಿ, ಗಂಗೋತ್ರಿ ಮಹಿಳಾ ಅಧ್ಯಕ್ಷೆ ಸಂಪಾವತಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

