ಜಾಗೋ ಗ್ರಾಹಕ್ ವಸ್ತುಪ್ರದರ್ಶನ
ಜಾವಗಲ್: ಜಾವಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದಿಂದ ಜಾಗೋ ಗ್ರಾಹಕ್ ಜಾಗೋ (ಗ್ರಾಹಕರೇ ಜಾಗೃತರಾಗಿರಿ) ವಸ್ತು ಪ್ರದರ್ಶನ, ನಕಲಿ ಮತ್ತು ಅಸಲಿ ಪದಾರ್ಥಗಳ ಪ್ರಯೋಗಾಲಯ ಹಾಗೂ ಗ್ರಾಹಕರ ವ್ಯಾಜ್ಯ ಪರಿಹಾರ ನ್ಯಾಯಾಲಯ ಅಣುಕು ಪ್ರದರ್ಶನ ಕಾರ್ಯಕ್ರಮವನ್ನು ಬುಧವಾರ ಏರ್ಪಡಿಸಲಾಗಿತ್ತು.
ವಸ್ತು ಪ್ರದರ್ಶನವನ್ನು ಪ್ರಾಂಶುಪಾಲ ಡಾ.ಕೆ. ಬಾಷಾ ಉದ್ಘಾಟಿಸಿದರು.
ಉತ್ತಮ ವಿವರಣೆ: ನಕಲಿ ಮತ್ತು ಅಸಲಿ ವಸ್ತುಗಳ ಪ್ರದರ್ಶನ, ನಕಲಿ ಮತ್ತು ಅಸಲಿ ವಸ್ತುಗಳ ಗುರುತಿಸುವಿಕೆ, ನಕಲಿ ಸರಕು ವಸ್ತುಗಳಿಂದಾಗುವ ದುಷ್ಪರಿಣಾಮಗಳು ಹಾಗೂ ಅದಕ್ಕೆ ದೊರಕುವ ಪರಿಹಾರ ಮಾರ್ಗ, ಅಸಲಿ ಮತ್ತು ನಕಲಿ ನೋಟುಗಳ ಚಲಾವಣೆ ಮತ್ತು ಗುರುತಿಸುವಿಕೆ ಬಗ್ಗೆ ವಾಣಿಜ್ಯ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿವರಣೆ ನೀಡಿದರು.
ಭಿತ್ತಿ ಚಿತ್ರಗಳ ಪ್ರದರ್ಶನ: ನಕಲಿ ಮತ್ತು ಅಸಲಿ ಪದಾರ್ಥಗಳ ಪ್ರಯೋಗಾಲಯ ಪ್ರಾತ್ಯಕ್ಷಿಕತೆಯಲ್ಲಿ ವಿದ್ಯಾರ್ಥಿಗಳು ದೈನಂದಿನ ದಿನ ಬಳಕೆ ವಸ್ತುಗಳಲ್ಲಿ ಕಲಬೆರಕೆ ಮಾಡುವುದರ ಬಗ್ಗೆ ಬೆಣ್ಣೆ, ಸಾಂಬಾರು ಪುಡಿ, ರವೆ, ತಂಪು ಪಾನಿಯಗಳು, ಬಿಸ್ಕೇಟ್, ಚಾಕಲೇಟ್, ಮತ್ತಿತರ ಪದಾರ್ಥಗಳ ನಕಲಿ ಮತ್ತು ಅಸಲಿತನವನ್ನು ಗುರುತಿಸುವ ಬಗ್ಗೆ ಪ್ರಾಯೋಗಿಕವಾಗಿ ವಿವರಿಸಿದರು.
ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಗೋಡೆಬರಹಗಳು ಮತ್ತು ಭಿತ್ತಿ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಗಮನ ಸಳೆದ ಅಣಕು: ವಿಭಾಗದ ಮುಖ್ಯಸ್ಥ ದಿಲೀಪ್ ಕುಮಾರ್, ಲೋಕೇಗೌಡ, ಪ್ರಿಯಾಂಕ, ಕುತ್ಸಿಯಾಪರ್ವಿನ್, ಸೌಮ್ಯ, ಪ್ರದೀಪ್, ರಂಗಸ್ವಾಮಿ, ಕುಮಾರಸ್ವಾಮಿ ಅತಿಥಿ ಉಪನ್ಯಾಸಕರ ತಂಡದ ಪರಿಶ್ರಮದಿಂದ ಮೋಟಾರ್ ಸೈಕಲ್ ವಾಹನ ವಿಮೆಗೆ ಸಂಬಂಧಿಸಿದ ಗ್ರಾಹಕ ವ್ಯಾಜ್ಯವನ್ನು ಬಗೆಹರಿಸುವ ಅಣುಕು ಗ್ರಾಹಕರ ನ್ಯಾಯಾಲಯ ಕಾರ್ಯಕ್ರಮ ವಾಣಿಜ್ಯ ಶಾಸ್ತ್ರ ವಿದ್ಯಾರ್ಥಿಗಳಿಂದ ಉತ್ತಮವಾಗಿ ಮೂಡಿತು.
ನ್ಯಾಯವಾದಿ ಪಾತ್ರವಹಿಸಿದ್ದ ರಂಗಸ್ವಾಮಿ, ಮತ್ತು ನ್ಯಾಯಾಧೀಶರ ಪಾತ್ರ ನಿರ್ವಹಿಸಿದ ಜಗದೀಶ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಪಟ್ಟಣದ ನಾನಾ ಶಾಲೆಗಳ ವಿದ್ಯಾರ್ಥಿಗಳು ಕಾರ್ಯಕ್ರಮ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

