ಹಾಸನ

ಪುರಸಭೆಗೆ ಕಂದಾಯ ಪಾವತಿಸದ ಖಾಸಗಿ ಶಾಲೆಗಳು

Published On :

ಚನ್ನರಾಯಪಟ್ಟಣ: ಪಟ್ಟಣದ ಹಲವು ಖಾಸಗಿ ಶಾಲೆಗಳು ಹಲವು ವರ್ಷಗಳಿಂದ ತಮ್ಮ ಕಟ್ಟಡ ಕಂದಾಯ ಪಾವತಿಸದೇ ಬಾಕಿ ಉಳಿಸಿಕೊಂಡಿವೆ.  ಪಟ್ಟಣದಲ್ಲಿ ಸುಮಾರು 20 ಖಾಸಗಿ ಶಾಲೆಗಳಿದ್ದು, ಬಹುತೇಕ ಶಾಲೆಗಳು ಪುರಸಭೆಯ ಕಂದಾಯವನ್ನು ಬಾಕಿ ಉಳಿಸಿಕೊಂಡಿದ್ದು, ವಾರ್ಷಿಕವಾಗಿ ಖಾಸಗಿ ಶಾಲೆಗಳ ಕಂದಾಯ ಪುರಸಭೆಗೆ ಜಮಾ ಆದರೆ ಸುಮಾರು ರು. 5 ಲಕ್ಷ ಬರಬಹುದೆಂದು ಪುರಸಭೆ ತಿಳಿಸಿದೆ. ಈಗ, ಸುಮಾರು ರು. 50 ಲಕ್ಷ ಬಾಕಿ ಬರಬೇಕಾಗಿದೆ ಎಂದು ಅಂದಾಜಿಸಲಾಗಿದೆ.
ಬಾಕಿ ಉಳಿಸಿಕೊಂಡ ಶಾಲೆಗಳು: ಪಟ್ಟಣದ ಖಾಸಗಿ ಶಾಲೆಗಳಾದ ಸೌದಾಮಿನಿ ಶಾಲೆ 6905 ರು., ರಾಧಕೃಷ್ಣ  ಶಾಲೆ 70,808 ರು., ಕಿಡ್ಸ್  ಶಾಲೆ 9,410 ರು., ಚೈತನ್ಯ  ಶಾಲೆ 14,185 ರು., ವಿವೇಕಾನಂದ ಶಾಲೆ 66,369 ರು., ಕೇಂಬ್ರಿಡ್ಜ್ 20,432 ರು., ಜ್ಞಾನಸಾಗರ ಶಾಲೆ 1,62,105 ರು., ನಿರ್ಮಲ ಶಾಲೆ 11,999 ರು., ವಾಸವಿ ಶಾಲೆ 36,608 ರು., ದತ್ತಾತ್ರೇಯ ಶಾಲೆ 26,076 ರು., ಅಮೀನ್ ಶಾಲೆ 19,374 ರು., ವಾರ್ಷಿಕ ಕಟ್ಟಡ ಕಂದಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಹೇಮಾವತಿ, ಜ್ಞಾನದರ್ಶನ, ಗೌತಮ ಶಾಲೆಗಳ ಕಟ್ಟಡ ಅಳತೆ ಮಾಡಿ ನಂತರ ಕಂದಾಯ ಪಡೆಯಬೇಕಾಗಿದೆ. ನಾಗರಿಕ ಸೌಲಭ್ಯ ಒದಗಿಸಿದ್ದಕ್ಕಾಗಿ ಮತ್ತು ಸಾಮಾನ್ಯ ಅಥವಾ ವಿಶೇಷ ಸೇವೆಗಳನ್ನು ಸಲ್ಲಿಸಿದ್ದಕ್ಕಾಗಿ ಸೇವಾ ಶುಲ್ಕ ನಿಯಮಿಸಬಹುದಾದಂತೆ ಅಂಥ ದರಗಳಲ್ಲಿ ಸಂಗ್ರಹಿಸುವುದಕ್ಕೆ ಪುರಸಭಾ ಸದಸ್ಯರಿಗೆ ಅವಕಾಶವಿದೆ ಎಂದು ಕರ್ನಾಟಕ ಪೌರಸಭೆಗಳ ಅಧಿನಿಯಮದಲ್ಲಿದೆ. ಶಾಲೆಗಳು ತಮ್ಮ ಜವಾಬ್ದಾರಿ ಅರಿತು ಪುರಸಭೆಯೊಂದಿಗೆ ಕೈಜೋಡಿಸಬೇಕಾಗಿದೆ. ಪುರಸಭೆ ಆದಾಯ ಮೂಲವನ್ನು ಹುಡುಕಿದ್ದು ಅಭಿವೃದ್ಧಿಗೆ ಚಿಂತನೆ ಮಾಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.