ಸಹಕಾರ ಸಂಘದ ನೋಂದಣಿ ರದ್ಧತಿ
ಹಾಸನ: ಕೈಗಾರಿಕಾ ಇಲಾಖಾ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ. ಹಾಸನ ಈ ಸಂಘವು 2010ರ ಮಾ. 4ರಂದು ಸಮಾಪನೆಯಾಗಿದೆ,.
ನಾಲ್ಕು ವರ್ಷಗಳಾದರೂ ಸಂಘವನ್ನು ಪುನಃಶ್ಚೇತನಗೊಳಿಸಲು ಯಾವ ಸದಸ್ಯರೂ ಆಸಕ್ತಿ ತೋರಿ ಮುಂದೆ ಬಾರದ ಕಾರಣ ಹಾಗೂ ಸಂಘದ ಇರುವಿಕೆಯಿಂದ ಯಾರಿಗೂ ಉಪಯೋಗವಾಗದೆ ಇರುವುದರಿಂದ ಸಂಘದ ರದ್ಧತಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಸಂಘವನ್ನು ಪುನಃಶ್ಚೇತನಗೊಳಿಸಲು ಆಸಕ್ತಿ ಹೊಂದಿದ್ದಲ್ಲಿ 15 ದಿನಗಳೊಳಗಾಗಿ ಸಮಾಪನಾಧಿಕಾರಿಯವರನ್ನು ಸಂಪರ್ಕಿಸಲು ತಿಳಿಸಿದೆ. ಸಂಘದಲ್ಲಿ ಸದಸ್ಯರಾಗಿದ್ದವರಿಗೆ ಸದಸ್ಯತ್ವದ ಹಣವನ್ನು ಹಿಂದಿರುಗಿಸಬೇಕಾಗಿರುವುದರಿಂದ ಸದರಿ ಸಂಘದ ಸದಸ್ಯರಾಗಿರುವ ಬಗ್ಗೆ ದಾಖಲಾತಿಗಳನ್ನು ಹಾಜರುಪಡಿಸಿ ಸಮಾಪನಾಧಿಕಾರಿಯಿಂದ ಷೇರು ಹಣ ಪಡೆಯಬಹುದಾಗಿದೆ. ತಪ್ಪಿದಲ್ಲಿ ಷೇರು ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು, ಸಂಘದ ನೊಂದಣಿ ರದ್ದುಪಡಿಸಲು ಕ್ರಮವಿಡಲಾಗುವುದು ಎಂದು ಸಹಕಾರ ಸಂಘಗಳ ಸಹಾಯಕ ನಿಂಬಧಕರು ಹಾಗೂ ಕೈಗಾರಿಕಾ ಇಲಾಖಾ ನೌಕರರ ಗೃಹನಿರ್ಮಾಣ ಸಹಕಾರ ಸಂಘ ನಿಗಮದ ಸಮಾಪನಾಧಿಕಾರಿ ಕೆ. ರಾಜಣ್ಣ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ
ಹಾಸನ: 66 ಕೆ.ವಿ.ಡಿ.ಸಿ. ಮಾರ್ಘ ಹಾಸನ - ಐ.ಜಿ.ಸಿ. (ಕೈಗಾರಿಕಾ ಪ್ರದೇಶ) ಯಿಂದ 220 ಕೆ.ವಿ. ಕಡವಿನಕೋಟೆ ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ಹಾಲಿ ಇರುವ 110 ಕೆ.ವಿ.ಯ ಕಾರಿಡಾರ್ ವಿದ್ಯುತ್ ಮಾರ್ಗವನ್ನು ಮಾ. 14ರಂದು ಅಥವಾ ನಂತರದ ದಿನಗಳಲ್ಲಿ 66 ಕೆ.ವಿ. ವಿದ್ಯುತ್ ಹರಿಸಲಾಗುವುದು. ಆದುದರಿಂದ ಸಾರ್ವಜನಿಕರು ಈ ಮಾರ್ಗದ ವಿದ್ಯುತ್ ಗೋಪುವನ್ನು ಹತ್ತುವುದಾಗಲಿ. ಅವುಗಳಿಗೆ ದನ-ಕರುಗಳನ್ನು ಕಟ್ಟುವುದಾಗಲಿ, ಹಸಿರು ಬಳ್ಳಿ ಅಥವಾ ಲೋಹದ ತಂತಿಗಳನ್ನು ಎಸೆಯುವುದಾಗಲಿ ಮಾಡಬಾರದು. ಇದರಿಂದ ಸಾರ್ವಜನಿಕರ ಆಸ್ತಿ-ಪಾಸ್ತಿ ಮತ್ತು ಪ್ರಾಣಕ್ಕೆ ಹಾನಿಯಾಗುವ ಸಂಭವವಿರುತ್ತದೆ. ಮೇಲೆ ತಿಳಿಸಿರುವ ಯಾವುದೇ ತರಹದ ದುಷ್ಕೃತ್ಯಗಳಿಗೆ ಒಳಗೊಂಡ ಅಪಘಾತ ಅಥವಾ ಹಾನಿ ಸಂಭವಿಸಿದರೆ ಅವರೇ ಜವಾಬ್ದಾರರಾಗಿದ್ದಾರೆ. ಅನಾಹುತಗಳಿಗೆ ಕರ್ನಾಟಕ ವಿದ್ಯುತ್ಪ್ರ್ಸರಣ ನಿಗಮವು ಜವಾಬ್ದಾರಿಯಾಗುವುದಿಲ್ಲವೆಂದು ಕಾರ್ವನಿರ್ವಾಹಕ ಇಂಜಿನಿಯರ್ ವಿ.ಎನ್.ಎಂ. ರೇವಣ್ಣಸಿದ್ದಪ್ಪ ತಿಳಿಸಿದ್ದಾರೆ.
ಲೋಕಾಯುಕ್ತ ಭೇಟಿ
ಹಾಸನ: ಕರ್ನಾಟಕ ಲೋಕಾಯುಕ್ತ ಹಾಸನ ವಿಭಾಗದ ಪೊಲೀಸ್ ನಿರೀಕ್ಷಕ ವೇದಮೂರ್ತಿ ಹಾಗೂ ತಂಡದವರು ಮಾ. 14ರಂದು ಅರಕಲಗೂಡು ತಾಲೂಕಿನ ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1.30ರವರೆಗೆ ನಂತರ ಹೊಳೆನರಸೀಪುರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನ 2ರಿಂದ ಸಂಜೆ 5-30 ರವರೆಗೆ ಭೇಟಿ ನೀಡಲಿದ್ದು, ಆ ಸಮಯದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿರುವರೆಂದು ಕರ್ನಾಟಕ ಲೋಕಾಯುಕ್ತ ಹಾಸನ ವಿಭಾಗದ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ತಿಳಿಸಿದ್ದಾರೆ.
'ಸ್ವಯಂ ಜಾಗೃತಿಯಿಂದ ಸ್ತ್ರೀ ಸಬಲೀಕರಣ'
ಹಾಸನ: ಸ್ತ್ರೀಯರಲ್ಲಿ ಸ್ವಯಂ ಜಾಗೃತಿ ಮೂಡಿದಾಗ ಮಾತ್ರ ಮಹಿಳೆ ಸಂಪೂರ್ಣವಾಗಿ ಸಬಲೀಕರಣಗೊಳ್ಳುತ್ತಾಳೆ ಎಂದು ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕಿ ಡಾ. ವಿದ್ಯಾ ಅಭಿಪ್ರಾಯಪಟ್ಟರು. ಅವರು ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಮಾನವ ಜನಾಂಗದ ಸುಸ್ಥಿರಗತಿ ಯನ್ನು ಅದರ ಸಹವರ್ತಿ ಪ್ರತಿಕ್ರಿಯೆಗಳನ್ನು ಸಾಕ್ಷಾತ್ಕರಿಸುವವಳು ಮಹಿಳೆ. ಅವರು ಲಿಂಗ ಸಂಬಂಧಿ ಅಸಮಾನತೆ ಶ್ರೇಣೀಕರಣಗಳಲ್ಲಿ ಪುರುಷರಿಗಿಂತ ಕೆಳಮಟ್ಟ ದಲ್ಲಿದ್ದಾರೆ. ಆರ್ಥಿಕ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅಸಮತೋಲನ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಶಾಂತ್ ಭಟ್, ಪ್ರೊ. ಜಯಲಕ್ಷ್ಮಿ ಪ್ರೊ. ರವಿ ಕುಮಾರ್ ಹಾಗೂ ಇತರರು ಇದ್ದರು.
ಆರೋಗ್ಯ ಉಚಿತ ತಪಾಸಣಾ ಶಿಬಿರ
ಬೇಲೂರು: ತಾಲ್ಲೂಕಿನ ಗೆಂಡೇಹಳ್ಳಿ ಮಾ. 15ರ ಶನಿವಾರ ಅದಿಚುಂಚನಗಿರಿ ವೈಧ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಅಪೋಲೋ ಬಿಜಿಎಸ್ ಮೈಸೂರು, ಗೆಂಡೇಹಳ್ಳಿ ಹಳೇ ವಿದ್ಯಾರ್ಥಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ, ರಕ್ತದಾನ ಹಾಗೂ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗೆಂಡೇಹಳ್ಳಿ ಶಾಲಾ ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯ ಸುಭಾನ್ ತಿಳಿಸಿದರು.
ಪತ್ರಿಕಾ ಹೇಳಿಕೆ ನೀಡಿದ ಅವರು ಶಿಬಿರಲ್ಲಿ ಉಚಿತ ವೈದ್ಯಕೀಯ ತಪಾಸಣೆಗಳನ್ನು ನಡೆಸಿ, ತಕ್ಕ ಔಷದಿ ನೀಡಲಾಗುತ್ತದೆ. ಹೆಚ್ಚುವರಿ ಕಾಯಿಲೆಗಳಿಗೆ ನುರಿತ ವೈದ್ಯರ ಬಳಿ ಕರೆದುಕೊಂಡು ಹೋಗಲಾಗುತ್ತದೆ, ಶಿಬಿರದಲ್ಲಿ ಸ್ಕ್ಯಾನಿಂಗ್, ಎಕೋ, ಇಸಿಜಿ, ರಕ್ತ ಮೂತ್ರ ಪರೀಕ್ಷೆ ಮಾಡಲಾಗುತ್ತದೆ ಈ ಅವಕಾಶವನ್ನು ಸಾರ್ವಜನಿಕರು ಉಪಯೋಗ ಪಡೆಯಬೇಕು ಎಂದು ತಿಳಿಸಿದರು.
ಸಿಲಿಂಡರ್ಗಾಗಿ ಅಭಿನಂದನೆ
ಮೈಸೂರು: ಸಬ್ಸಿಡಿ ಸಹಿತ ಸಿಲಿಂಡರ್ಗಳನ್ನು ಗ್ರಾಹಕರಿಗೆ ಒದಗಿಸಲು ಆದೇಶಿಸಿರುವ ಕೇಂದ್ರ ಯುಪಿಎ ಸರ್ಕಾರವನ್ನು ಕಾಂಗ್ರೆಸ್ ಮುಖಂಡ ಜೆ.ಎನ್. ಲಕ್ಷ್ಮಣ್ ಅಭಿನಂದಿಸಿದ್ದಾರೆ. ಆದರೆ ಆಧಾರ್ ಕಾರ್ಡ್ ಜೋಡಣೆ ಮಾಡಿದ್ದರಿಂದ ಸರ್ಕಾರದ ಹಾಗೂ ಬ್ಯಾಂಕ್ಗಳ ಆಡಳಿತಾತ್ಮಕ ವೆಚ್ಚದ ಹೊರೆ ಗ್ರಾಹಕರ ಮೇಲೆ ಬೀಳುತ್ತಿತ್ತು. ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರಿಗೆ ಅನಾನುಕೂಲವಾಗುತ್ತಿತ್ತು.ಇದರಿಂದ ಗ್ರಾಹಕರಿಗೆ ಮುಕ್ತಿ ದೊರಕಿಸಿ ಕೊಡುವಂತೆ ಮನವಿ ಮಾಡಲಾಗಿತ್ತು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

