ಎಲ್ಲಾ ಕ್ಷೇತ್ರಗಳಲ್ಲೂ ಕೆನರಾಬ್ಯಾಂಕ್ ಪ್ರಗತಿ
ಹಾಸನ: ಕೆನರಾ ಬ್ಯಾಂಕ್ ಇಂದು, ಬ್ಯಾಂಕಿಂಗ್ನ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದೆ ಎಂದು ನಗರದ ಮೈಸೂರು ವೃತ್ತದ ಬಳಿಯಿರುವ ಕೆನರಾಬ್ಯಾಂಕ್ ಕಚೇರಿಯ ಉಪ ಮಹಾಪ್ರಬಂಧಕ ಡಾ.ಎಸ್.ಟಿ. ರಾಮಚಂದ್ರ ತಿಳಿಸಿದ್ದಾರೆ.
ಹಾಸನ ನಗರದ, ಸಂತೆಪೇಟೆಯ ಬಿ.ಎಂ.ರೋಡ್ ಶಾಖೆಯ ಆವರಣದಲ್ಲಿ ಏರ್ಪಡಿಸಿದ್ದ ಆರ್ಥಿಕ ಯೋಜನೆ, ಆರೋಗ್ಯ ಮೇಳ ಮತ್ತು ಉಳಿತಾಯ ಉತ್ಸವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಒಂದೇ ಸೂರಿನಡಿ ಸಕಲ ವ್ಯವಹಾರ: ಪ್ರಗತಿಯಲ್ಲಿ ಬ್ಯಾಂಕ್ ದಾಪುಗಾಲು ಇಡುತ್ತಿದ್ದು, ಈ ನಿಟ್ಟಿನಲ್ಲಿ ಬ್ಯಾಂಕ್ ಹೆಚ್ಚು ಹೆಚ್ಚು ಶಾಖೆ ಮತ್ತು ಎಟಿಎಂಗಳನ್ನು ದೇಶ- ವಿದೇಶಗಳಲ್ಲಿ ತೆರೆಯುತ್ತಿದೆ. ಹೊಸ ಹೊಸ ಗ್ರಾಹಕ ಸ್ನೇಹಿ ಯೋಜನೆಗಳನ್ನು ಈ ಮೂಲಕ ತರಲಾಗುತ್ತಿದೆ. ಸದ್ಯಕ್ಕೆ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಮೂಲಕ ನಾನಾ ಸೇವೆಗಳನ್ನು ತಂದಿರುವುದಲ್ಲದೆ, ಜೀವ ವಿಮೆ, ಆಜೀವ ವಿಮೆ, ಮ್ಯೂಚ್ಯುವೆಲ್ ಫಂಡ್ ಹೂಡಿಕೆ, ಸಾರ್ವಜನಿಕ ಭವಿಷ್ಯ ನಿಧಿ ಮುಂತಾದ ಸೌಲಭ್ಯಗಳು ಕೆನರಾ ಬ್ಯಾಂಕ್ನಲ್ಲಿ ಲಭ್ಯವಿದೆ. ಒಟ್ಟಿನಲ್ಲಿ, ಒಂದೇ ಛಾವಣಿಯ ಅಡಿಯಲ್ಲಿ ಹಣಕಾಸಿಗೆ ಸಂಬಂಧಪಟ್ಟಂತೆ ಎಲ್ಲಾ ವ್ಯವಹಾರಗಳನ್ನು ಬ್ಯಾಂಕ್ ಮೂಲಕವೇ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.
ವಿವಿಧ ಅನುಕೂಲಗಳು: ಕೆನರಾ ಬ್ಯಾಂಕ್ ಇತ್ತೀಚೆಗೆ ಜಾರಿಗೆ ತಂದ ಕೆಲವು ಜನಪ್ರಿಯ ಯೋಜನೆಗಳಾದ, ರೈತರಿಗೆ, ಅನಿವಾಸಿ ಭಾರತೀಯರಿಗೆ ಮತ್ತು ಅಧಿಕ ಆದಾಯ ವರ್ಗದವರಿಗೆ ವಿಶೇಷ ಗೃಹಸಾಲ, ತಂತ್ರಜ್ಞಾನದ ಅಡಿಯಲ್ಲಿ, ಇ- ಲಾಂಜ್ ಸೌಲಭ್ಯ, ಆನ್ಲೈನ್ ಮೂಲಕ ಉಳಿತಾಯ ಖಾತೆ, ಪಿಪಿಎಫ್ ಖಾತೆ, ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಸೌಲಭ್ಯ, ಷೇರು ವ್ಯವಹಾರ ಸೌಲಭ್ಯ, ಕೆನರಾ ಇ ಇನ್ಫೋಬುಕ್, ಮೊಬೈಲ್ ಮತ್ತು ಇಂಟರ್ ನೆಟ್ ಮುಂತಾದವುಗಳನ್ನು ಕುರಿತು ಉದಾಹರಿಸಿದರು.
ಅಲ್ಲದೇ, ಇತ್ತೀಚೆಗೆಷ್ಟೇ ಒಪ್ಪಂದದ ಮೂಲಕ ಜಾರಿಗೆ ಬಂದ ಕೆನರಾ ಅಪಲೋ-ಮ್ಯೂನಿಕ್ ಆರೋಗ್ಯ ವಿಮೆ ಕುರಿತು, ಈ ಯೋಜನೆ ಕೆನರಾ ಬ್ಯಾಂಕ್ ಗ್ರಾಹಕರಿಗೆ ತುಂಬಾ ಲಾಭದಾಯಕವಾಗಿದೆ ಎಂದರು.
ನಮ್ಮಲ್ಲೇ ಹೂಡಿಕೆ ಮಾಡಬಹುದು: ಈ ಸಂದರ್ಭದಲ್ಲಿ ಮಾತನಾಡಿದ, ಕೆನರಾ ಬ್ಯಾಂಕ್ ಮೈಸೂರು ವೃತ್ತ ಕಚೇರಿಯ ಸಹಾಯಕ ಮಹಾ ಪ್ರಬಂಧಕ ದಿವಾಕರ ಶೆಟ್ಟಿ ಮಾತನಾಡಿ, ಬ್ಯಾಂಕಿನ ಜೀವ ವಿಮೆ, ಆಜೀವ ವಿಮೆ, ಮ್ಯೂಚ್ಯುವಲ್ ಫಂಡ್ ಹೂಡಿಕೆ, ಅತ್ಯುತ್ತಮ ಹಾಗೂ ಸ್ಪರ್ಧಾತ್ಮಕ ಯೋಜನೆಗಳಾಗಿದ್ದು, ಗ್ರಾಹಕರು ಬೇರೆ ಬೇರೆ ಕಡೆ ಹೋಗುವ ಬದಲು ಇಲ್ಲೇ ಹೂಡಿಕೆ ಮಾಡಬಹುದು ಎಂದರು.
ಬೇರೆ ಬೇರೆ ಯೋಜನೆಗಳ ಮಾಹಿತಿ ಕೇಂದ್ರಗಳು ಮತ್ತು ಉಚಿತ ನೇತ್ರ ತಪಾಸಣಾ ಕೇಂದ್ರವು, ಮೇಳದ ಆಕರ್ಷಣೆಯಾಗಿತ್ತು. ಹಾಸನ ಮುಖ್ಯಶಾಖೆಯ ಮುಖ್ಯ ಪ್ರಬಂಧಕ ಕೆ. ಮಂಜುನಾಥ್, ಮತ್ತು ಲೀಡ್ ಬ್ಯಾಂಕ್ ಮ್ಯಾನೇಜರ್ ಆದ ಸೋಲಮನ್ ಮೆಂಡಿಸ್ ಅವರು ಮೇಳದಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

