ಹಾಸನ

ಕೆಟ್ಟು ನಿಂತ ಬಸ್: ಪ್ರಯಾಣಿಕರ ಹಿಡಿಶಾಪ

Published On :

ರಾಮನಾಥಪುರ:  ಇಲ್ಲಿನ ಕೆಎಸ್‌ಆರ್‌ಟಿಸಿ ಘಟಕದಿಂದ ಅರಕಲಗೂಡು ಹಾಸನಕ್ಕೆ ಹೋಗುವ ಮಾರ್ಗ ಮಧ್ಯೆ ಬರಗೂರು ಗ್ರಾಮದ ಹತ್ತಿರ ಇತ್ತೀಚೆಗೆ ಕೆ.ಎ.13.ಎಫ್. 1897 ರಾಮನಾಥಪುರ ಸಾರಿಗೆ ಸಂಸ್ಥೆ ಬಸ್ ಕೆಟ್ಟು ನಿಂತ ಪರಿಣಾಮ ಪ್ರಯಾಣಿಕರು ತೊಂದರೆಗೊಳಗಾದ ಪ್ರಸಂಗ ಗುರುವಾರ ನಡೆಯಿತು.
ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಪ್ರಯಾಣಿಕರೊಬ್ಬರು, ರಾಮನಾಥ ಪುರ ಡಿಪೋದ ಬಸ್‌ಗಳು ಹೀಗೆ ಅಲ್ಲಲ್ಲಿ ಕೆಟ್ಟು ನಿಲ್ಲುವುದು ಇತ್ತೀಚೆಗೆ ಮಾಮೂಲು ವಿಷಯವಾಗಿದ್ದು, ಈ ಬಸ್‌ಗಳಿಗೆ ಸೂಕ್ತ ದುರಸ್ತಿ ಇಲ್ಲದಿರುವುದರಿಂದ ಇಂಥ ಘಟನೆಗಳು ಪದೇಪದೇ ನಡೆಯುತ್ತಿರುತ್ತವೆ. ಇದರಿಂದ ಪ್ರಯಾಣಿಕರು ಪುನಃಪುನಃ ತೊಂದರೆಗೆ ಒಳಗಾಗುವ ಪ್ರಸಂಗಗಳು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು. ಇವರ ಮಾತುಗಳಿಗೆ ದನಿಗೂಡಿಸಿದ ಇತರ ಪ್ರಯಾಣಿಕರು, ಈ ಪ್ರಾಂತ್ಯದಲ್ಲಿ ಹದಗೆಟ್ಟ ರಸ್ತೆಗಳೂ ಬಸ್‌ಗಳ ದುರವಸ್ಥೆಗೆ ತಮ್ಮದೇ ಆದ ದೇಣಿಗೆ ನೀಡುತ್ತಿವೆ ಎಂದು ಹೇಳಿದರು.
ಸಿಬ್ಬಂದಿ ಅಳಲು: ಪ್ರಯಾಣಿಕರ ಟೀಕೆಗಳನ್ನು ಒಪ್ಪಿಕೊಂಡ ಚಾಲಕ, ನಿರ್ವಾಹಕರೂ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಅದರಲ್ಲೂ ವಿಶೇಷವಾಗಿ, ರಾಮನಾಥಪುರ-ಅರಕಲಗೂಡು-ಹಾಸನ-ಕೇರಳಪುರ-ಕಟ್ಟೇಪುರ ಮುಂತಾದ ಮುಖ್ಯರಸ್ತೆಗಳು ಹಾಗೂ ಗ್ರಾಮೀಣ ಪ್ರದೇಶಗಳ ರಸ್ತೆಗಳಲ್ಲಿ ಗುಂಡಿ ಬಿದ್ದು ಬಸ್ಸುಗಳು ಅಥವಾ ಇತರೆ ವಾಹನಗಳು ರಸ್ತೆಗಿಳಿಯಲು ಸಾಧ್ಯವಾಗದಷ್ಟು ಮಟ್ಟಿಗೆ ಹದಗೆಟ್ಟಿವೆ. ಸಂಚಾರ ದುಸ್ತರವಾಗಿ ಪರಿಣಮಿಸಿದೆ. ಇದರಿಂದ ಬಸ್ಸುಗಳು ಪ್ರತಿನಿತ್ಯದಲ್ಲಿ ಒಂದಲ್ಲಾ ಒಂದು ರೀತಿಯ ತೊಂದರೆ ಅಗುತ್ತಿದೆ ಎಂಬುದು ಕೆಲವು ಡ್ರೈವರ್‌ಗಳ ಅಳಲು. ಈ ಭಾಗದ ರಸ್ತೆಗಳ ಗುಂಡಿಗಳನ್ನು ಮುಚ್ಚಿಸಿ, ಉತ್ತಮ ಡಾಂಬರೀಕರಣ ಮಾಡಿಸಿದರೆ  ಸಮಸ್ಯೆ ಪರಿಹರಿಸಿ ವಾಹನಗಳು ತಿರುಗಾಡಲು ಅನುವಾಗುತ್ತದೆ ಎನ್ನುವುದು ವಾಹನ ಚಾಲಕರ ಮನವಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.