ಹಾಸನ

ಅರಣ್ಯ ರಕ್ಷಕನಿಂದ ಮಹಿಳೆ ಮೇಲೆ ಹಲ್ಲೆ

Published On :

ಅರಕಲಗೂಡು: ಅರಣ್ಯದಲ್ಲಿ ಪುಳ್ಳೆ ಆಯುತ್ತಿದ್ದ ಮಹಿಳೆಯೊಬ್ಬರ ಮೇಲೆ ಅರಣ್ಯ ರಕ್ಷಕರೊಬ್ಬರು ಕುಡುಗೋಲಿನಿಂದ ಹಲ್ಲೆ ನಡೆಸಿರುವ ಪ್ರಕರಣ ತಾಲೂಕಿನ ದೊಡ್ಡಮಗ್ಗೆ ಹೋಬಳಿಯ ಕಣಿವೆ ಕಾವಲು ನೀಲಗಿರಿ ಅರಣ್ಯದಲ್ಲಿ ನಡೆದಿದೆ.
  ತಾಲ್ಲೂಕಿನ ದೊಡ್ಡಮಗ್ಗೆ ಹೋಬಳಿಯ ಮಾದಿಹಳ್ಳಿ ದಲಿತ ಕಾಲೋನಿಯ ನಿವಾಸಿ ಗೌರಮ್ಮ ಗಾಯಗೊಂಡಿರುವ ಮಹಿಳೆ. ಅರಣ್ಯ ರಕ್ಷಕ ಕೇಶವಮೂರ್ತಿಯಿಂದ ಕುಡಗೋಲಿನಿಂದ ಹಲ್ಲೆಗೊಂಡ ಪರಿಣಾಮ ಗೌರಮ್ಮಳ ಎಡಗೈ ಮೂರು ಬೆರಳುಗಳಿಗೆ  ಗಾಯಗಳಾಗಿವೆ.
ಒಂದು ಬೆರಳಿಗೆ ನಾಲ್ಕು ಹೊಲಿಗೆ, ಇನ್ನುಳಿದ ಎರಡು ಬೆರಳುಗಳಿಗೆ ತಲಾ ಎರಡು ಹೊಲಿಗೆ ಹಾಕಲಾಗಿದೆ.  
ಘಟನೆ ವಿವರ: ಮಾದಿಹಳ್ಳಿ ಕಾಲೋನಿಯ ನಿವಾಸಿ ಗೌರಮ್ಮ ಮತ್ತು ಅದೇ ಗ್ರಾಮದ 10 ಮಹಿಳೆಯರೊಂದಿಗೆ ಬೆಳಗ್ಗೆ ನೀಲಗಿರಿ ಅರಣ್ಯಕ್ಕೆ ತೆರಳಿ ಅಡುಗೆಗೆ ಬಳಸಲು ನೀಲಗಿರಿ ಗಿಡದ ಕಡ್ಡಿಗಳನ್ನು ತರಲು ತೆರಳಿದಾಗ ಬೆಳಗ್ಗೆ 10 ಗಂಟೆ ಸಮಯದಲ್ಲಿ ಅಲ್ಲಿಯ ಅರಣ್ಯ ರಕ್ಷಕ ಕೇಶವಮೂರ್ತಿ ಸೌದೆಗೆ ತೆರಳಿದ ಮಹಿಳೆಯರನ್ನು ತಡೆದಿದ್ದಾರೆ.
ಸೌದೆ ಕಡಿಯದಂತೆ ಒತ್ತಾಯಿಸಿದ ಅವರು, ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಲ್ಲಿದ್ದ ಕುಡಗೋಲನ್ನು ಕಿತ್ತುಕೊಂಡು ಹಲ್ಲೆ ಮಾಡಿದ್ದಾರೆ ಎಂದು  ಗೌರಮ್ಮ ಘಟನೆ ವಿವರಿಸಿದ್ದಾರೆ. ರಾತ್ರಿ ಸಮಯದಲ್ಲಿ ಅರಣ್ಯದ ಮರಗಳನ್ನೇ ಕದ್ದು ಒಯ್ಯುತ್ತಿದ್ದರೂ, ಅದನ್ನು ತಡೆಯದೆ ನಾವು ಮನೆಗೆ ಬಳಸಲು ಒಣಗಿದ ಪುಳ್ಳೆಗಳನ್ನು ತೆಗೆದುಕೊಂಡು ಹೋಗುವುದನ್ನು ಪ್ರಶ್ನಿಸುತ್ತಾರೆ ಎಂದು ಮಹಿಳೆಯರು ಅರಣ್ಯ ಸಿಬ್ಬಂದಿ ವಿರುದ್ಧ ದೂರಿದ್ದಾರೆ.
ಗಾಯಗೊಂಡ ಗೌರಮ್ಮ ಅರಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣವನ್ನ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.