ರು. 231 ಕೋಟಿಯಷ್ಟು ತಂಬಾಕು ವಹಿವಾಟು
ರಾಮನಾಥಪುರ: ಇಲ್ಲಿನ ಸುಬ್ರಹ್ಮಣ್ಯನಗರದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆಯ ಫ್ಲಾಟ್ ಫಾರಂ 7 ಹಾಗೂ 63ರ ಎರಡು ತಂಬಾಕು ಹರಾಜು ಮಾರುಕಟ್ಟೆಗಳಿಂದ ಸುಮಾರು 140 ದಿನಗಳಲ್ಲಿ ನಡೆದ ತಂಬಾಕು ವಹಿವಾಟಿನ ಮುಕ್ತಾಯದ ಹಂತ ತಲಪಿದ್ದು, ಈವರೆವಿಗೂ ರು. 231 ಕೋಟಿ ವಹಿವಾಟು ನಡೆದು, 18.1ಮಿಲಿಯನ್ಕೆ.ಜಿ. ತಂಬಾಕು ಮಾರಾಟವಾಗಿ ದಾಖಲೆ ನಿರ್ಮಿಸಿದೆ.
ಫ್ಲಾಟ್ ಫಾರಂ 63ರಲ್ಲಿ ರು. 101.80 ಕೋಟಿ ವಹಿವಾಟು ನಡೆದಿದ್ದು, ರು. 7.90 ಮಿಲಿಯನ್ ಕೆ.ಜಿ. ತಂಬಾಕು ಮಾರಾಟವಾಗಿದೆ. ಫ್ಲಾಟ್ ಫಾರಂ 7ರಲ್ಲಿ ರು. 128.40 ಕೋಟಿ ವಹಿವಾಟು ನಡೆದಿದ್ದು, 9.90 ಮಿಲಿಯನ್ ಕೆಜಿ ತಂಬಾಕು ಖರೀದಿಸಲಾಗಿದೆ. ರೈತರಿಗೆ ಪ್ರತಿ ಕೆ.ಜಿ. ತಂಬಾಕಿಗೆ ರು. 130 ಸಿಕ್ಕಿದೆ ಎಂದು ಹರಾಜು ಅಧೀಕ್ಷಕ ಮಂಜುನಾಥ್ ಹಾಗೂ ರಮೇಶ್ ತಿಳಿಸಿದರು.
ಆರೋಪ: ಹರಾಜು ಪ್ರಕ್ರಿಯೆ ಮುಗಿಯುವ ಹಂತ ತಲಪಿದರೂ ಉತ್ತಮ ಬೇಲೆ ನೀಡಲಿಲ್ಲ. ಪ್ರತಿ ವರ್ಷ ಪ್ರಾರಂಭದಲ್ಲಿ ಪ್ರಥಮ ದರ್ಜೆ ತಂಬಾಕು ಸೊಪ್ಪನ್ನು ಮಾತ್ರ ತಂಬಾಕು ಮಂಡಳಿಯವರು ರೈತರಲ್ಲಿ ಮಾರುಕಟ್ಟೆಗೆ ತಂದು ವಹಿವಾಟು ಮಾಡಿಸುತ್ತಾರೆ. ಕೆಳದರ್ಜೆಯ ಸೊಪ್ಪನ್ನು ಮಾರುಕಟ್ಟೆ ಮುಗಿಯುವ ವೇಳೆಗೆ ತರಿಸಿಕೊಂಡು ಬೇಕಾಬಿಟ್ಟಿ ಹರಾಜು ಮಾಡಿಕೊಂಡು ಮಾರುಕಟ್ಟೆಯಲ್ಲಿ ಇದರಿಂದ ರೈತರಿಗೆ ಭಾರಿ ಅನ್ಯಾಯವಾಗಿದೆ ಎಂದು ರೈತ ಮುಖಂಡರಾದ ಎಸ್.ಎಂ. ಮಲ್ಲೇಶ್ ಹಾಗೂ ಕೃಷ್ಣಗೌಡ ದೂರಿದರು.
ತಂಬಾಕಿನ ವ್ಯವಸಾಯಕ್ಕೆ ಮಾಡಿರುವ ಬ್ಯಾಂಕ್ ಹಾಗೂ ಕೈ ಸಾಲ ಹಾಗೂ ಮನೆಯಲ್ಲಿರುವ ವಡವೆ ವಸ್ತ್ರವನ್ನು ಅಡವಿಟ್ಟು ಮಾಡಿದ ಸಾಲದ ಹೊರೆ ಹೆಚ್ಚಾದಂತೆ ತಂಬಾಕು ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಬಂಧಪಟ್ಟ ಜನಪ್ರತಿಧಿಗಳು ಹಾಗೂ ತಂಬಾಕು ಮಂಡಳಿ ರೈತರ ಸಂಕಷ್ಟ ನಿವಾರಿಸಬೇಕು. ರೈತರು ಮಾಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ವಾಣಿಜ್ಯ ಬ್ಯಾಂಕ್, ಸಹಕಾರ ಬ್ಯಾಂಕ್ಗಳ ಸಾಲ ಮಾಡಬೇಕೆಂದು ಹೊಗೆಸೊಪ್ಪು ಬೆಳೆಗಾರರ ಒತ್ತಾಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

