ಬುದ್ಧ ಪ್ರಥಮ, ಬಸವಣ್ಣ ದ್ವಿತೀಯ
ಕ.ಪ್ರ.ವಾರ್ತೆ ಟಿ ಹಾಸನ ಟಿ ಮೇ 8
ಜಾಗತಿಕ ವಿಚಾರವಾದಿಗಳಲ್ಲಿ ಬುದ್ಧ ಮೊದಲನೆಯವರಾದರೆ, ಯುಗ ಪ್ರವರ್ತಕ ಬಸವಣ್ಣ ಎರಡನೇಯ ವಿಚಾರವಾದಿ ಎಂದು ಕವಯಿತ್ರಿ ಭಾರತಿ ಹಾದಿಗೆ ಅಭಿಪ್ರಾಯಪಟ್ಟರು.
ವಿವೇಕನಗರದ ಎಸ್.ಎನ್. ಯೋಗೀಶ್ ಅವರ ಮನೆಯಲ್ಲಿ ನಡೆದ 206ನೇ ಮನೆ ಮನೆ ಕವಿಗೋಷ್ಠಿಯಲ್ಲಿ ಬಸವ ಸಾಹಿತ್ಯದಲ್ಲಿ ವೈಚಾರಿಕತೆ ಎಂಬ ವಿಷಯದಡಿ ಉಪನ್ಯಾಸ ನೀಡಿದ ಅವರು, ಬಸವಣ್ಣನವರು ಅರ್ಥ ಶಾಸ್ತ್ರಜ್ಞರಾಗಿ, ವೈಚಾರಿಕ ಮೂಲಸೆಲೆಯಾಗಿ, ಸಮಾನತೆಯ ಹರಿಕಾರರಾಗಿ, ಅಗ್ರಗಣ್ಯ ವಚನಕಾರರಾಗಿ ವಿಶ್ವಮಾನವೀಯತೆಯ ಸಂದೇಶ ನೀಡಿದ ಮಹಾನುಭವ ಎಂದರು.
ಬಸವಣ್ಣ ಚಿಂತನೆ: ಅಕ್ಕನಿಗಿಲ್ಲದ ದೀಕ್ಷೆ, ಮುಂಜಿ- ವಿಧಾನಗಳು ತನಗ್ಯಾಕೆ? ಹೆಣ್ಣಿಗೊಂದು ಗಂಡಿಗೊಂದು ಎನ್ನುವ ಕಟ್ಟುಪಾಡುಗಳು ಅದ್ಯಾವ ಸಂಪ್ರದಾಯ ಎಂದು ಬಾಲಕನಾಗಿದ್ದಾಗಲೇ ಸಿಡಿದೆದ್ದು ವೈಚಾರಿಕ ಕ್ರಾಂತಿ ಮಾಡುವುದರ ಮೂಲಕ ಹೆಣ್ಣಿನ ಸಮಾನತೆ ಬಗ್ಗೆ ಬಸವಣ್ಣ ಚಿಂತಿಸಿದನು ಎಂದು ಅವರು ತಿಳಿಸಿದರು.
ಕಾಯಕವೇ ಕೈಲಾಸವೆಂಬ ಉದ್ಘೋಷ ಮೊಳಗಿಸಿ ಪ್ರತಿಯೊಬ್ಬರೂ ಜಾತ್ಯಾತೀತ, ಧರ್ಮಾತೀತವಾಗಿ ಕಾಯಕದಲ್ಲಿ ತೊಡಗಿ ಸಮಾಜಪರ ಕಾರ್ಯಗಳಲ್ಲಿ ತೊಡಗುವಂತೆ ಪ್ರೇರೇಪಿಸಿದರು.
ವೈಚಾರಿಕತೆಯಿಂದ ಸಮಾಜ ನಿರ್ಮಾಣ: ಅನುಭವ ಮಂಟಪದಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರಿಗೆ ದಾಸೋಹ ಕಾರ್ಯವನ್ನು ಇತರ ಶರಣರ ಸಹಯೋಗದಲ್ಲಿ ಮಾಡುತಿದ್ದರು. ಜಾತಿ, ಮತ, ಧರ್ಮ ಮೀರಿದ ಮಹಾಮನೆ ಅದಾಗಿತ್ತು. ಇವನಾರವ ಇವನಾರವ ಎಂದೆನ್ನದೆ ಇವನಮ್ಮವ ಇವನಮ್ಮವ ಎಂದು ಎಲ್ಲರನ್ನೂ ಕೈ ಬೀಸಿ ಕರೆವ ಪುಣ್ಯ ಕ್ಷೇತ್ರ ಅದಾಗಿತ್ತು. ವೇದ, ಶಾಸ್ತ್ರ, ಮೌಢ್ಯ-ಕಂದಾಚಾರಗಳನ್ನು ದಿಕ್ಕರಿಸಿ ವೈಚಾರಿಕ ನೆಲೆಗಟ್ಟಿನಲ್ಲಿ ಸಮಾಜವನ್ನು ನಿರ್ಮಿಸಿದರು ಎಂದರು.
ಪೌರೋಹಿತ್ಯ ಜನಾಂಗದಲ್ಲಿ ಜನಿಸಿ, ಜನಿವಾರ ಕಿತ್ತೆಸೆದು ವೀರಶೈವ ಧರ್ಮವನ್ನು ಸ್ವೀಕರಿಸಿ ಮೂರ್ತಿ ಪೂಜೆ ಖಂಡಿಸಿ ಬ್ರಂಹಾಂಡವನ್ನೇ ದೇಗುಲವಾಗಿಸಿ ಮಾನವೀಯ ಮೌಲ್ಯಗಳನ್ನು ಭಿತ್ತಿದ ಯುಗ ಪ್ರವರ್ತಕ ಬಸವಣ್ಣನವರು ಎಂದರು.
ನಂತರ ನಾ ಮೆಚ್ಚಿದ ಕವಿತೆ ಎಂಬ ವಿಷಯದಡಿ ಕವಯತ್ರಿ ಸುಶೀಲ ಸೋಮಶೇಖರ್ ಅಕ್ಕ ಮಹಾದೇವಿಯ ವಚನ ಓದಿ ವಿಶ್ಲೇಷಣೆ ಮಾಡಿದರು.
ಸಂಚಾಲಕ ಕೊಟ್ರೇಶ್ ಎಸ್.ಉಪ್ಪಾರ್, ಚಂದ್ರಕಾಂತ ಪಡೆಸೂರ, ಜಯದೇವಪ್ಪ, ಡಾ. ಜಯಚಂದ್ರಗುಪ್ತ, ಶಾಂತ ಅತ್ನಿ, ನವಾಬ್ ಬೇಲೂರು, ಸಮುದ್ರವಳ್ಳಿ ವಾಸು, ಚೂಡಾಮಣಿ, ಭವ್ಯಶ್ರೀ, ಪವನ್ ಆಲೂರು, ಬಿ. ವೇದಾವತಿ, ರಾಜೇಶ್ವರಿ ಹುಲ್ಲೇನಹಳ್ಳಿ, ಮುಂತಾದವರು ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಪ್ರಾಯೋಜಕರಾದ ಎಸ್.ಎನ್.ಯೋಗೀಶ್, ಪ್ರೊ. ನಾರಾಯಣ ಪ್ರಸಾದ್, ಲಕ್ಷಣ್ ಬೀಳೂಟಗಿ, ಶೇಷ ಶೆಟ್ಟಿ, ವರ್ಷಿಣಿ, ರೋಹನ್, ಅರ್ಜುನ್, ಪ್ರಜ್ವಲ್, ಶ್ರೀದೇವಿ ಇತರರು ಇದ್ದರು. ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

