ಹಾಸನ

ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಖರೀದಿ

Published On :

ಬೇಲೂರು: ಮೇ ಮೊದಲ ವಾರ ಬಿದ್ದ ಉತ್ತಮ ಮಳೆಯಿಂದ ರೈತರು  ಬಿತ್ತನೆ ಬೀಜ  ಕೊಳ್ಳಲು ರೈತ ಸಂರ್ಪಕ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತು ಬಿತ್ತನೆ ಬೀಜ ಪಡೆಯುತ್ತಿದ್ದಾರೆ.
ಮುಂಗಾರು ಆರಂಭದಿಂದ ತಾಲೂಕಿನಾದ್ಯಂತ ಉತ್ತಮ ಮಳೆ ಬಿದ್ದಿರುವ ಹಿನ್ನಲೆಯಲ್ಲಿ ರೈತರು ತಮ್ಮ ಜಮೀನನ್ನು ಹದಗೊಳಿಸಿದ್ದು, ಬಿತ್ತನೆಗೆ ಉತ್ತಮ ವಾತಾವರಣವಿದ್ದು, ಕೃಷಿ ಚಟುವಟಿಕೆ ಭರದಿಂದ ಸಾಗಿದೆ.
ಈಗಾಗಲೇ ತಾಲೂಕಿನಲ್ಲಿರುವ ರೈತ ಸಂಪರ್ಕ ಕೇಂದ್ರಗಳೂ ರೈತರಿಗೆ ಅಗತ್ಯವಾದ ಬಿತ್ತನೆ ಬೀಜವನ್ನು ದಾಸ್ತಾನು ಮಾಡಿದ್ದು ರೈತರಿಗೆ ಯಾವುದೇ ತೊಂದರೆಯಾಗದಂತೆ ವಿತರಿಸಲು ಕ್ರಮ ಕೈಗೊಂಡಿದೆ.
ಈ ಸಂಬಂಧ ಕೃಷಿ ಅಧಿಕಾರಿ ಜಯರಾಂ ಸುದ್ದಿಗಾರರೊಂದಿಗೆ ಮಾತ ನಾಡಿ, ತಾಲೂಕಿನಲ್ಲಿ  ಉತ್ತಮ ಮಳೆಯಾಗಿದೆ. ರೈತರು ಮೆಕ್ಕೆಜೋಳ ಖರೀದಿಗೆ ಮುಂದಾಗಿದ್ದಾರೆ ಕಸಬಾ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ 8 ಟನ್ ಮಕ್ಕೆಜೋಳ ದಾಸ್ತಾನಿದ್ದು ಗಂಗಾ ಕಾವೇರಿ-3059, ಕಾವೇರಿ ಗೋಲ್ಡ್, ರಾಜಕುಮಾರ್,ಸಿ.ಪಿ.818,ಪೈನೇಗರ್ ಬಿ.07, ಎಂಬ  ಮೆಕ್ಕೆ ಜೋಳದ ತಳಿಗಳನ್ನು ವಿತರಿಸುತ್ತಿದ್ದು, ರೈತರಿಗೆ ಪ್ರತಿ ರು. 35 ಸಹಾಯಧನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ಪಟ್ಟಾ ಪುಸ್ತಕಕ್ಕೆ 1ಎಕರೆಗೆ 5 ಕೆ.ಜಿ.ಯಂತೆ 5 ಎಕರೆವರೆಗೆ ಮಾತ್ರ ರೈತರಿಗೆ ನೀಡುತ್ತಿದ್ದೇವೆ ಜೋಳದ ಜೊತೆಯಲ್ಲಿ ಜಿಂಕ್‌ಸಲ್ಫೇಟ್, ಲಘು ಪೋಷಕಾಂಶ ನೀಡುತ್ತಿದ್ದೇವೆ ಎಂದು ವಿವರಿಸಿದರು.
ಕಳೆದ ಸಾಲಿನಲ್ಲಿ ರೈತರು 4700 ಹೆಕ್ಟೇರ್ ಪ್ರದೇಶದಲ್ಲಿ ಮಕ್ಕೆ ಜೋಳವನ್ನು ಬಿತ್ತನೆ ಮಾಡಿದ್ದರೂ, ಈ ಬಾರಿ ಕೂಡ ಇನ್ನು ಹೆಚ್ಚಿಗೆ ಬಿತ್ತನೆ ಮಾಡಲು ರೈತರು ಮುಂದೆ ಬಂದಿದ್ದು, ಬಿತ್ತನೆ ಬೀಜಕ್ಕೆ ಯಾವುದೇ ತೊಂದರೆಯಾಗದಂತೆ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ ಎಂದರು.       
ಮಳೆ ವಿವರ: ಪ್ರಸಕ್ತ ಸಾಲಿನಲ್ಲಿ ತಾಲೂಕಿನಾದ್ಯಂತ 1106.1 ಮಿಮೀ ಮಳೆ ಬಿದ್ದಿದ್ದು, ಹೋಬಳಿವಾರು ಮಳೆ ವಿವರ ಇಂತಿದೆ. ಬೇಲೂರು-216.7, ಹಳೇಬೀಡು- 172.7, ಹಗರೆ 156.6,  ಅರೇಹಳ್ಳಿ 178, ಬಿಕ್ಕೋಡು 167.9 ಗೇಂಡೇಹಳ್ಳಿ 214.2 ಮಿಮೀ ಮಳೆ ಬಿದ್ದಿರುವ ವರದಿಯಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.