ಎತ್ತಿನಹೊಳೆ ಸಮೀಪ ಅಪರಿಚಿತ ವ್ಯಕ್ತಿ ಶವ ಪತ್ತೆ
ಹಾಸನ: ತಾಲೂಕಿನ ಭೀಮೇಶ್ವರ ಗುಡಿಯ ಸಮೀಪದ ರೈಲ್ವೆ ಸೇತುವೆ ಬಳಿಯ ಎತ್ತಿನಹೊಳೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಸುಮಾರು 35 ವಯಸ್ಸಿನ ಯುವಕನ ವೃತದೇಹವಾಗಿದ್ದು, ಅವರ ಜೇಬಿನಲ್ಲಿ ದಿನಾಂಕ 26ರ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ರೈಲು ಟಿಕೆಟ್ ದೊರಕಿದೆ. ಇದರಿಂದಾಗಿ ರೈಲಿನಿಂದ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಪಫಾತ: ಬೈಕ್ ಸವಾರ ಸಾವು
ಅರಸೀಕೆರೆ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ಸ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಗಂಡಸಿಯ ಸೇಂಟ್ ಜಾನ್ ಸ್ಕೂಲ್ ಮುಂಭಾಗ ಮಂಗಳವಾರ ನಡೆದಿದೆ.
ಗಂಡಸಿ ಹೋಬಳಿಯ ಹಲಗೇನಹಳ್ಳಿಯ ಟ್ರ್ಯಾಕ್ಟರ್ ಚಾಲಕ ರಘು(21) ಮೃತರು.ವಿಕ್ಟರ್ ಬೈಕ್ನಲ್ಲಿ ರಘು, ಗಂಡಸಿ ಹೋಗಿದ್ದು, ಅರಸೀಕೆರೆ-ಚನ್ನರಾಯಪಟ್ಟಣ ರಸ್ತೆ, ಗಂಡಸಿಯ ಸೆಂಟ್ ಜಾನ್ ಸ್ಕೂಲ್ ಮುಂಭಾಗ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರ ಗಾಯಗೊಂಡ ರಘು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ: 3 ಜನರ ಬಂಧನ
ಅರಸೀಕೆರೆ: ಪಟ್ಟಣದ ಗಣಪತಿ ಪೆಂಡಾಲ್ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಆಡುತ್ತಿದ್ದ ಮೂವರನ್ನು ಬಂಧಿಸಿರುವ ಪೊಲೀಸರು 21,450 ರು. ಅನ್ನು ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಪಟ್ಟಣದ ಸುಭಾಷ್ನಗರದ ದಿನೇಶ್(33), ಸಂತೆಪೇಟೆಯ ಜವತ್ರಾಜ್(44), ಗೌತಮ್(40) ಎಂಬವರೇ ಬಂಧಿತ ಆರೋಪಿಗಳು. ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿ ಜೊತೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಗಾಂಜಾ ಮಾರಾಟ: ಮೂವರ ಬಂಧನ
ಹಾಸನ: ಮನೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 16,800 ರು. ನಗದು ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ನಗರದ ಶ್ರೀನಗರದಲ್ಲಿ ನಡೆದಿದೆ.
ಶ್ರೀನಗರದ ಮುಬೀನಾ(45), ಶಬ್ಬೀರ್ ಅಹಮ್ಮದ್(49), ರೋಹಿಲ್(26) ಬಂಧಿತ ಆರೋಪಿಗಳು.
ಈ ಆರೋಪಿಗಳು ಮನೆಯಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗಿ ಇಲ್ಲದೆ ಗಾಂಜಾ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. 16,800 ರು. ಮೌಲ್ಯದ, 1680 ಗ್ರಾಂ ತೂಕದ ಗಾಂಜವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
9 ಜೂಜುಕೋರರ ಬಂಧನ
ಹೊಳೆನರಸೀಪುರ: ತಾಲೂಕಿನ ದೇವರಮುದ್ದನಹಳ್ಳಿ ಗ್ರಾಮದ ಅಣ್ಣಪ್ಪ ಅವರ ತೆಂಗಿನ ತೋಟದಲ್ಲಿ ಅಂದರ್ ್ಡಬಾಹರ್ ಆಟವಾಡುತ್ತಿದ್ದ 9 ಮಂದಿಯನ್ನು ಪೊಲೀಸರು ಬಂಧಿಸಿ, 10,110 ರು. ನಗದನ್ನು ವಶಪಡಿಸಿಕೊಂಡಿದ್ದಾರೆ.
ಸುನೀಲ್, ಧನರಾಜ್, ಕೃಷ್ಣೇಗೌಡ, ರಾಜಶೆಟ್ಟಿ, ಸ್ವಾಮಿ, ಬೋರೇಗೌಡ, ಗಿರೀಶ್, ಸೋಮ, ರಮೇಶ್ ಬಂಧಿತರು. ಇವರೆಲ್ಲರೂ ಹೊಳೆನರಸೀಪುರ ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮದವರ ಎನ್ನಲಾಗಿದೆ.
ಅಪರಿಚತ ವ್ಯಕ್ತಿ ಶವ ಪತ್ತೆ
ಸಕಲೇಶಪುರ: ಹಾನುಬಾಳು ಹೋಬಳಿ ಭೀಮೇಶ್ವರ ಎಸ್ಟೇಟ್ನ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ನೀಲಿ ಮತ್ತು ಕೆಂಪು ಬಣ್ಣದ ಅರ್ಧ ತೋಳಿನ ಟಿ ಶರ್ಟ್ ಧರಿಸಿದ್ದಾರೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ರೈಲು ಟಿಕೆಟ್ ಜೇಬಿನಲ್ಲಿ ಇದೆ. ದುಷ್ಕರ್ಮಿಗಳು ಯಾವುದೋ ದ್ವೇಷದಿಂದ ಕೊಲೆ ಮಾಡಿರುವುದನ್ನು ಮಾರೆ ಮಾಚುವ ಉದ್ದೇಶದಿಂದ ತಂದು ಬಿಸಾಕಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಲಾಗಿದ್ದು. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

