ಕೊಮ್ಮಾರಘಟ್ಟದಲ್ಲಿ ಭೂಚೇತನ ಯೋಜನೆಯಡಿ ತರಬೇತಿ
ಬಾಣಾವರ (ಅರಸೀಕೆರೆ ತಾ.): ಬಾಣಾವರ ಹೋಬಳಿಯ ಕೊಮ್ಮಾರಘಟ್ಟ ಗ್ರಾಮದಲ್ಲಿ ಪ್ರಸಕ್ತ ಸಾಲಿನ ಭೂಚೇತನ ಯೋಜನೆ ೆಗುಚ್ಚ ಗ್ರಾಮ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಹಿರಿಯ ಮುಖಂಡ ತಿಮ್ಮೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಸಹಾಯಕ ಕೃಷಿ ನಿರ್ದೇಶಕ ಡಾ. ಕೆಂಪಚೌಡಪ್ಪ ಮಾತನಾಡಿ, ರೈತರು ಆಧುನಿಕ ಕೃಷಿ ಪದ್ಧತಿಯಲ್ಲಿ ಲಘು ಪೋಷಕಾಂಶ ಬಳಕೆ ಮತ್ತು ತಾಂತ್ರಿಕ ವಿಷಯ ನೈಪುಣ್ಯತೆಯಿಂದ ರೈತರು ಉತ್ತಮ ಇಳುವರಿ ಪಡೆಯಬಹುದು ಹಾಗೂ ತಮ್ಮ ಜಮೀನುಗಳ ಮಣ್ಣು ಪರೀಕ್ಷೆಯ ಮೂಲಕ ಬೆಳೆಗಳಿಗೆ ಪೋಷಕಾಂಶ ಬಳಸುವಂತೆ ಮಾಹಿತಿ ನೀಡಿದರು.
ಬಾಣಾವರ ಸಹಾಯಕ ಕೃಷಿ ಅಧಿಕಾರಿ ಮಿಥುನ್ ಮಾತನಾಡಿ, ರೈತರಿಗೆ ತಿಳಿವಳಿಕೆ ಬಹಳ ಮುಖ್ಯ. ರೈತರಿಗೆ ಇಲಾಖೆಯಿಂದ ದೊರೆಯುವ ಪರಿಕರಗಳು, ಕೃಷಿ ಉಪಕರಣಗಳು ಹಾಗೂ ಭೂಚೇತನ ಯೋಜನೆಯ ಮಹತ್ವ, ಮಣ್ಣಿನ ಸಂರಕ್ಷಣೆಯ ಬಗ್ಗೆ ಮಾಹಿತಿ ಅಗತ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ರೈತ ಅನುವುಗಾರ ತೇಜಪಾಲ್, ಸತ್ಯನಾರಾಯಣ, ಶಶಿಧರ್, ಪ್ರಕಾಶ್, ಸಿದ್ದನಾಯ್ಕ, ಮೋಹನ್‌ರಾಜ್, ವಿಶ್ವನಾಥ್ ಇದ್ದರು.
ಪೋಲೀಸ್ ಕಾನಸ್ಟೇಬಲ್ ಹುದ್ದೆಗೆ ತರಬೇತಿ
ಹಾಸನ: ನಗರದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠದ ವತಿಯಿಂದ ನಡೆಯುತ್ತಿರುವ ಬಿಜಿಎಸ್ ಸ್ಟಡಿ ಸೆಂಟರ್‌ನಲ್ಲಿ ಪೋಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ತರಬೇತಿ ನೀಡಲಾಗುವುದು ಆಸಕ್ತರು ಬಿಜಿಎಸ್‌ಸ್ಟಡಿ ಸೆಂಟರ್, ಶ್ರೀ ಆದಿಚುಂಚನಗಿರಿ ಇಂಗ್ಲಿಷ್ ಶಾಲೆ, ರವೀಂದ್ರನಗರ, ಹಾಸನ, ಮೊ.9738334784, 8050839482 ಸಂಪರ್ಕಿಸಬಹುದು.
ಐ.ಟಿ.ಐಗೆ ಅರ್ಜಿ ಆಹ್ವಾನ
ಚನ್ನರಾಯಪಟ್ಟಣ: ಪಟ್ಟಣದ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು, ಎಲೆಕ್ಟ್ರಾನಿಕ್-32 ಕೋಪಾ-20 ಸೀಟುಗಳಿವೆ. 10ನೇ ತರಗತಿಯಲ್ಲಿ ತೇರ್ಗಡೆಯಾದ ಅರ್ಹ ಅಭ್ಯರ್ಥಿಗಳು ಮೇ 21 ರಿಂದ ಜೂನ್ 5 ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಪ್ರಾಚಾರ್ಯರು, ಸರ್ಕಾರಿ ಮಹಿಳಾ ಕೈಗಾರಿಕೆ ತರಬೇತಿ ಸಂಸ್ಥೆ, ಚನ್ನರಾಯಪಟ್ಟಣ, ಹಾಸನ ಜಿಲ್ಲೆ 573116 (ದೂರವಾಣಿ ಸಂಖ್ಯೆ 08176-253087, ) ಇವರನ್ನು ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

