ಟ್ರ್ಯಾಕ್ಟರ್ ಪಲ್ಟಿ: ಇಬ್ಬರು ಕಾರ್ಮಿಕರ ಸಾವು
ಚನ್ನರಾಯಪಟ್ಟಣ: ವಿದ್ಯುತ್ ಕಂಬಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದಾಗಿ ಟ್ರೈಲರ್ ರಸ್ತೆಗೆ ಪಲ್ಟಿಯಾಗಿ ಬಿದ್ದ ಪರಿಣಾಮ ಟ್ರ್ಯಾಕ್ಟರ್ನಲ್ಲಿದ್ದ ಕೂಲಿ ಕಾರ್ಮಿಕರಲ್ಲಿ ಇಬ್ಬರು ಮೃತಪಟ್ಟು 7ಮಂದಿ ಗಾಯಗೊಂಡಿರುವ ಘಟನೆ ಚನ್ನರಾಯಪಟ್ಟಣ ಅರಸೀಕೆರೆ ರಸ್ತೆಯ ಮೂಡನಹಳ್ಳಿ ಬಳಿ ಸಂಭವಿಸಿದೆ.
ತಾಲೂಕಿನ ಬಾಗೂರು ಗ್ರಾಮದ ರಾಮಾಚಾರಿ(45) ಹಾಗೂ ತುಮಕೂರು ಜಿಲ್ಲೆ ತಿಪಟೂರು ತಾಲೂಕು ತಡಸೂರು ಗ್ರಾಮದ ಮೂಡಲಗಿರಿ(28) ಸ್ಥಳದಲ್ಲಿಯೇ ಮೃತಪಟ್ಟ ದುರ್ದೈವಿಗಳು.
ತಾಲೂಕಿನ ಓಬಳಾಪುರ ಗ್ರಾಮದವರಾದ ಚಂದ್ರೇಗೌಡ, ರಾಮೇಗೌಡ, ಭಕ್ತರಹಳ್ಳಿ ಗ್ರಾಮದ ಶಿವಯ್ಯ, ಪ್ರವೀಣ್, ತಡಸೂರು ಗ್ರಾಮದ ಪ್ರದೀಪ್, ಹೊನ್ನಾಚಾರ್, ಓಬಳಾಪುರ ಗ್ರಾಮದ ರಾಮೇಗೌಡ ಹಾಗೂ ಚಾಲಕ ದಿನೇಶ್ ಗಾಯಗೊಂಡಿದ್ದಾರೆ.
ತಾಲೂಕಿನ ಕೆ.ಮಲ್ಲೇನಹಳ್ಳಿ ಗ್ರಾಮದ ರೈತರ ಪಂಪ್ಸೆಟ್ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಚನ್ನರಾಯಪಟ್ಟಣದಿಂದ ಕೆ.ಮಲ್ಲೇನಹಳ್ಳಿಗೆ ಟ್ರ್ಯಾಕ್ಟರ್ನಲ್ಲಿ ವಿದ್ಯುತ್ ಕಂಬಗಳನ್ನು ತುಂಬಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮೂಡನಹಳ್ಳಿ ಬಳಿಯಿರುವ ಇಳಿಜಾರಿನಲ್ಲಿ ಚಾಲಕನ ಅಜಾಗರೂಕತೆಯಿಂ ಟ್ರ್ಯಾಕ್ಟರ್ ಮತ್ತು ಟ್ರೈಲರ್ ರಸ್ತೆಯಲ್ಲಿಯೇ ಪಲ್ಟಿಯಾದ ಪರಿಣಾಮ ವಿದ್ಯುತ್ಕ್ಂಬಗಳು ಕಾರ್ಮಿಕರ ಮೇಲೆ ಬಿದ್ದ ಪರಿಣಾಮ ಅವಘಡ ಸಂಭವಿಸಿದೆ.
ಚನ್ನರಾಯಪಟ್ಟಣ ಗ್ರಾಮಾಂತರ ಪೋಲಿಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ಗೆ ಮೈಮುನ ಆಯ್ಕೆ
ಹಾಸನ: ಜಿಲ್ಲಾ ಸಮತ ಸಂಚಾಲಕ ಸಮಿತಿ ಸದಸ್ಯೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ, ಆಲೂರು ತಾಲೂಕು ಸಹ ಕಾರ್ಯದರ್ಶಿ ಹಾಗೂ ಆಲೂರು ತಾಲೂಕು ಕಾರಿಗನಹಳ್ಳಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಮೈಮುನ,ಅಂತಾರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಗೆ ಆಯ್ಕೆಯಾಗಿದ್ದಾರೆ.
ಹಿರಿಯರ ಕ್ರೀಡಾಕೂಟದಲ್ಲಿ 34 ವರ್ಷ ಮೇಲ್ಪಟ್ಟವರ ಮಹಿಳೆಯರ ಹ್ಯಾಮರ್ ಥ್ರೋ ಹಾಗೂ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ ಪಡೆದು ಭಾರತವನ್ನು ಪ್ರತಿನಿಧಿಸಿ ಮಲೇಷ್ಯಾದ ಕೌಲಾಲಂಪುರದಲ್ಲಿ ಜೂನ್ 4 ರವರೆಗೆ ನಡೆಯಲಿರುವ ಹಿರಿಯರ ಅಥ್ಲೆಟಿಕ್ಸ್ ನಲ್ಲಿ ಭಾರತದ ಪರವಾಗಿ ಭಾಗವಹಿಸಲಿದ್ದಾರೆ.
ಅವರಿಗೆ ಭಾರತ ಜ್ಞಾನ ವಿಜ್ಞಾನ ಸಮಿತಿ ಶುಭ ಹಾರೈಸಿದೆ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಜಿಲ್ಲೆಯ ಹಾಗೂ ರಾಷ್ಟ್ರದ ಗೌರವವನ್ನು ಎತ್ತರಕ್ಕೇರಿಸಲಿ ಎಂದು ಆಶಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

