ರಾಣಿಬೆನ್ನೂರು: ಪಕ್ಷೇತರ ಅಭ್ಯರ್ಥಿ ಆರ್. ಶಂಕರ್ ಮತಯಾಚನೆ
ರಾಣಿಬೆನ್ನೂರು: ಕಳೆದ ಒಂದುವರೆ ವರ್ಷದಿಂದ ನಾನು ತಾಲೂಕಿನ ಜನತೆಗೆ ಸಲ್ಲಿಸುತ್ತಿರುವ ಸೇವೆಯನ್ನು ಗಮನಿಸಿರುವ ಮತದಾರರು ನನ್ನನ್ನು ಆಯ್ಕೆ ಮಾಡುತ್ತಾರೆಂದು ಪಕ್ಷೇತರ ಅಭ್ಯರ್ಥಿ ಆರ್. ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು. ಭಾನುವಾರ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮತಯಾಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಬಡವರ ದೀನ ದಲಿತರ ನೋವುಗಳ ಮಾಹಿತಿ ಸಂಗ್ರಹಿಸಿರುವೆ. ಬಡವರ, ವಿಧವೆಯರ, ಅಂಗವಿಕಲರ ಕಲ್ಯಾಣಕ್ಕಾಗಿ ಶ್ರಮಿಸುವುದಾಗಿ ತಿಳಿಸಿದರು. ಮಂಜುನಾಥ ಕಂಬಳಿ, ಅತ್ತಾವುಲ್ಲಾ ಡೂಗ್ಗಳ್ಳಿ, ರಾಜು ಅಡಿವೇಪ್ಪನವರ, ಜಬ್ಬಾರಖಾನ್ ಸೌದಾಗರ್, ಅನ್ವರಸಾಬ ಮೂಮಿನ್, ಅಲ್ಲಾಭಕ್ಷ ಕ್ಯಾಲಕೂಂಡ, ಮೆಡ್ಲೇರಿ ಗ್ರಾಪಂ ಮಾಜಿ ಅಧ್ಯಕ್ಷ ದುರುಗಪ್ಪ ಪೂಜಾರ ಇದ್ದರು.
ಕಾಂಗ್ರೆಸ್ ಅಭ್ಯರ್ಥಿ ಗೆಲವಿಗೆ ಶ್ರಮಿಸುವೆ
ಹಾನಗಲ್ಲ: ಹಾನಗಲ್ಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತ ಬೊಮ್ಮನಹಳ್ಳಿ ಗ್ರಾಮದ ಯಾಶೀರಖಾನ್ ಪಠಾಣ ಅವರು, ರಾಜ್ಯ ಹಾಗೂ ರಾಷ್ಟ್ರ ನಾಯಕರ ಆದೇಶದಂತೆ ಪಕ್ಷದ ಅಭ್ಯರ್ಥಿಯ ಗೆಲವಿಗಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ದಶಕಗಳ ನಂತರ ಅಲ್ಪಸಂಖ್ಯಾತ ಸಮುದಾಯಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ತಮ್ಮನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಯೋಚಿಸಿತ್ತು. ಆದರೆ, ಹಲವು ದೃಷ್ಟಿಕೋನಗಳಿಂದ ಬದಲಾದ ಸನ್ನಿವೇಶಗಳಿಂದ ಮನೋಹರ ತಹಶೀಲ್ದಾರಗೆ ಟಿಕೆಟ್ ನೀಡಲು ಪಕ್ಷದ ಹಿರಿಯರು ನಿರ್ಧರಿಸಿದರು. ಅಸಮಾಧಾನಗೊಂಡಿದ್ದ ತಾವು ತಟಸ್ಥವಾಗಿರುವುದಾಗಿ ಈ ಹಿಂದೆ ಪತ್ರಿಕಾ ಹೇಳಿಕೆ ನೀಡಿದ್ದಾಗಿ ತಿಳಿಸಿದ ಅವರು, ಅಲ್ಪಸಂಖ್ಯಾತ ಸಮುದಾಯದ ಹಿತದೃಷ್ಟಿಯಿಂದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರದಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದರು.
ಬಿಎಸ್ಪಿ ಅಭ್ಯರ್ಥಿ ಉಮೇಶ ಗುರುಲಿಂಗಪ್ಪಗೌಡ್ರ ಪ್ರಚಾರ
ರಾಣಿಬೆನ್ನೂರು: ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ಉಮೇಶ ಗುರುಲಿಂಗಪ್ಪಗೌಡ್ರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾಗೂ ನಗರದಲ್ಲಿ ಮನೆ-ಮನೆಗಳಿಗೆ ತೆರಳಿ ಮತಯಾಚಿಸಿದರು. ತಾಲೂಕಿನ ಮೇಣಸಿನಹಾಳ, ತುಮ್ಮಿನಕಟ್ಟಿ, ಪತ್ತೆಪುರ, ಕೂಸಗಟ್ಟಿ, ಮಾಳನಾಯಕನಹಳ್ಳಿ,ಬಿಲ್ಲಹಳ್ಳಿ, ದಂಡಗಿಹಳ್ಳಿ, ಹಾರೂಗೂಪ್ಪ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಮತಯಾಚಿಸಿದರು. ಧರ್ಮಪ್ಪ ಗುಡ್ಡಪ್ಪನವರ, ಇಮ್ರಾನ್ ಹಲಗೇರಿ, ರವಿ ಮಡಿವಾಳರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

