ರೇವಣಸಿದ್ದೇಶ್ವರ ಶ್ರೀಗಳಭಾವಚಿತ್ರ ಮೆರವಣಿಗೆ
ಹಿರೇಕೆರೂರು: ತಾಲೂಕಿನ ಕುಡಪಲಿ ಗ್ರಾಮದ ಶ್ರೀ ಅಬ್ಬಿಗೇರಿ ರೇವಣಸಿದ್ದೇಶ್ವರರ ಪುಣ್ಯಾರಾಧನೆ ಅಂಗವಾಗಿ ಗ್ರಾಮದಾದ್ಯಂತ ಭಾವಚಿತ್ರ ಮೆರವಣಿಗೆ ಜರುಗಿತು. ಶ್ರೀ ರೇಣುಕರ ಮೂರ್ತಿಗೆ ಬೆಳಗ್ಗೆಯಿಂದ ರುದ್ರಾಭಿಷೇಕ, ಬಿಲ್ವಾರ್ಚನೆ, ವಿಶೇಷ ಪೂಜೆ ನೆರವೇರಿಸಲಾಯಿತು. ಅನಂತರ ಅವರ ಭಾವಚಿತ್ರದೊಂದಿಗೆ ಗ್ರಾಮದಾದ್ಯಂತ ಮೆರವಣಿಗೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಭಕ್ತರಿಗೆ ಮಹಾಪ್ರಸಾದ ವಿನಿಯೋಗಿಸಲಾಯಿತು. ವಿರೂಪಾಕ್ಷಯ್ಯಮಠ, ಕರಬಸಪ್ಪ ರಾಮಗಿರಿ, ಮಹೇಶಪ್ಪ ನೆಶ್ವಿ, ಹನುಮಂತಪ್ಪ ಹೊಸಕುರುಬರ, ಸಿದ್ದನಗೌಡ ಕರೇಗೌಡ್ರ, ಷಡಕ್ಷರಯ್ಯ ಮಠದ, ಹೇಮಯ್ಯ ಬೆಲ್ಲದ, ತಿಪ್ಪೇಶ ರಾಮಗಿರಿ, ಶರಣಪ್ಪ ಮರಿಬಸಪ್ಪನವರ, ಕೋಟೇಶ ಚಲವಾದಿ, ಸಿದ್ದಲಿಂಗಸ್ವಾಮಿ ಹಿರೇಮಠ, ಮಹಾದೇವಪ್ಪ ಬೆನಕಣ್ಣನವರ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಸಂಗಟಿ ಸಾರಿನ ವಿಶೇಷ: ಮಹಾಪ್ರಸಾದ ವಿತರಣೆಯಲ್ಲಿ ಸಂಗಟಿ ಸಾರಿನ ವಿಶೇಷ ಕಂಡು ಬರುತ್ತದೆ. ಜೋಳದ ನುಚ್ಚನ್ನು ಬೇಯಿಸಿ ಅದಕ್ಕೆ ಸಾರನ್ನು ಸೇರಿಸಿಕೊಂಡಿ ಸೇವಿಸುವುದು ಇಲ್ಲಿನ ವಿಶೇಷತೆ. ಅಲ್ಲದೇ ಗೋದಿಹುಗ್ಗಿ, ಅನ್ನ ಸಾಂಬಾರ ಕೂಡ ವಿತರಿಸಲಾಯಿತು. ಶ್ರೀ ರೇಣುಕರ ಜೀವಿತಾವಧಿಯಲ್ಲೂ ಸಂಗಟಿ ಸಾರನ್ನು ವಿತರಿಸುವ ಪದ್ಧತಿ ನಡೆಸಿಕೊಂಡು ಬರಲಾಗಿತ್ತು ಎಂದು ಭಕ್ತರು ಹೇಳುತ್ತಾರೆ.
ಸಾಕ್ಷರತೆಯಿಂದ ದೇಶದ ಏಳ್ಗೆಗೆ ಭದ್ರ ಬುನಾದಿ
ಶಿಗ್ಗಾಂವಿ: ಶಿಗ್ಗಾಂವಿ ಸಾಕ್ಷರತೆ ದೇಶದ ಏಳ್ಗೆಗೆ ಭದ್ರ ಬುನಾದಿ ಸಾಕ್ಷರತೆಯಿಂದ ನಾಡಿನಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಲ್ಲ ಜನತೆ ಪ್ರಜ್ಞಾವಂತರಾಗಬೇಕೆಂಬುದೆ ಸಾಕ್ಷರತೆಯ ಮೂಲ ಉದ್ದೇಶ. ಅನಕ್ಷರತೆಯಿಂದ ಮೋಸ ದಬ್ಬಾಳಿಕೆಗೆ ಒಳಗಾಗುತ್ತಿದ್ದ ಜನ ಈಗ ಪ್ರಜ್ಞಾವಂತರಾಗಿದ್ದಾರೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಬಿ. ರೇವಣ್ಣ ಹೇಳಿದರು. ಅವರು ತಾಲೂಕು ಪಂಚಾಯಿತಿ ಆವರಣದಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವ ದಿನಾಚರಣೆ ನಿಮಿತ್ತ ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಾಕ್ಷರತಾ ಗೀತೆಯನ್ನು ರೇಣುಕಾ, ವೆಂಕಮ್ಮಾ ಹಾಡಿದರು. ಎಚ್ ಎನ್. ನದಾಫ ಜನಪದ ಗೀತೆ ಹಾಡಿದರು. ತಾಲೂಕು ಸಾಕ್ಷರತಾ ಸಂಯೋಜಕ ಎಸ್. ಜಿ. ಹೂಗಾರ ಸಾಕ್ಷರತಾ ಪ್ರತಿಜ್ಞಾವಿಧಿ ಬೋಧಿಸಿದರು. ತಾಲೂಕು ಸಾಕ್ಷರತಾ ಸಂಯೋಜಕ ಎಂ.ಜಿ. ಕಾಳೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಷಾ ಬಿಳೆಕುದರಿ ತಾಪಂ ಅಧ್ಯಕ್ಷರು, ಸುಗಂದಾಬಾಯಿ ಘೋಡಕೆ, ಫರೀದಾಬಾನು ಸೇತಸನದಿ, ನಿಂಗಣ್ಣ ಹರಿಜನ, ಉಮಾ ಡವಗಿ, ವಿ.ಎಂ. ಕಿವುಡನವರ, ಕೆ.ಆರ್. ರಿತ್ತಿ, ತಾಪಂನ ಎಲ್ಲ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

