ಅನಕ್ಷರತೆಯಿಂದ ಕಂದಾಚಾರ ಜೀವಂತ
ಬ್ಯಾಡಗಿ: ಶೈಕ್ಷಣಿಕ ಸೌಲಭ್ಯ ಕೊರತೆ ಹಿನ್ನೆಲೆಯಲ್ಲಿ ದೇಶದಲ್ಲಿ ಹೇರಳವಾಗಿರುವ ಮಾನವ ಸಂಪನ್ಮೂಲ ಸದ್ಬಳಕೆಯಾಗದೆ ಸಮಾಜದಲ್ಲಿ ಮೂಢನಂಬಿಕೆ ಹಾಗೂ ಕಂದಾಚಾರಗಳು ಇನ್ನೂ ಜೀವಂತವಾಗಿವೆ ಎಂದು ಜಿಲ್ಲಾ ಲೋಕ ಶಿಕ್ಷಣ ಶಿಕ್ಷಣ ಸಂಯೋಜಕ ನಾರಾಯಣ ಕರೆವ್ವನವರ ಖೇದಿಸಿದರು.
ಇಲ್ಲಿನ ಸುವರ್ಣಸೌಧದಲ್ಲಿ ಲೋಕಶಿಕ್ಷಣ ಕಾರ್ಯಕ್ರಮದ ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಕ್ಷರ ಮೌಲ್ಯಮಾಪನ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಪ್ರಗತಿ ಕುಂಠಿತಗೊಂಡರೆ ಅದು ಅನಾಗರಿಕತೆಯ ಸಂಕೇತ. ಸಾಕ್ಷರರ ಸಂಖ್ಯೆಯಿಂದಲೇ ದೇಶದ ಪ್ರಗತಿಯನ್ನು ಪರಿಗಣಿಸುವಂತಹ ಕಾಲ ಇದು. ಎಲ್ಲರೂ ವಿದ್ಯಾವಂತರಾಗುವ ಅಗತ್ಯವಿದೆ ಎಂದರು.
ಕಲಿಕಾ ಮಟ್ಟ ಹಾಗೂ ಮೂಲ ಸಾಕ್ಷರತೆಯ ಪ್ರಮಾಣ ಗುರುತಿಸಲು ನವಸಾಕ್ಷರ ಮೌಲ್ಯಮಾಪನ ಯೋಜನೆ ಸಹಕಾರಿಯಾಗಲಿದ್ದು, ತಾಲೂಕಿನ ಪ್ರತಿ ಗ್ರಾಪಂ ಮಟ್ಟದಲ್ಲಿರುವ ಎಲ್ಲ ಕೇಂದ್ರಗಳಲ್ಲಿ ಆ. 25ರಂದು ಮುಂಜಾನೆ 10ರಿಂದ ಸಂಜೆ 5 ಗಂಟೆ ವರೆಗೆ ಏಕಕಾಲಕ್ಕೆ ಪರೀಕ್ಷೆ ಜರುಗಲಿದೆ. ಪ್ರೇರಕರು ಪೂರ್ವಸಿದ್ಧತೆ ನಡೆಸುವಂತೆ ಸೂಚಿಸಿದರು.
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಪ್ರೇರಕರಿಗೆ ಸಂಪನ್ಮೂಲ ಶಿಕ್ಷಕ ಬಿ.ಸಿ. ಬಣಕಾರ ಮೌಲ್ಯಮಾಪಕರ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ತರಬೇತಿ ನೀಡಿದರು. ತಹಸೀಲ್ದಾರ್ ಸುಭಾಸ ಪುಲಾರೆ ಕಾರ್ಯಾಗಾರ ಉದ್ಘಾಟಿಸಿದರು. ವೇದಿಕೆಯಲ್ಲಿ ತಾಪಂ ಇಒ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಪ್ರಸನ್ನಕುಮಾರ, ಅಕ್ಷರ ದಾಸೋಹ ನಿರ್ದೇಶಕ ಪಿ.ಎಸ್. ಪೀರಜಾದೆ, ತಾಲೂಕು ಸಂಯೋಜಕ ಆರ್.ಎಂ. ಪಾಟೀಲ, ನಾಗರತ್ನಾ ಹುಲ್ಲತ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

