ಹಾವೇರಿ

ಕ್ರೀಡಾಂಗಣಕ್ಕಾಗಿ ಪ್ರತಿಭಟನೆ

Published On :

ಹಿರೇಕೆರೂರು: ತಾಲೂಕಿನ ರಟ್ಟಿಹಳ್ಳಿ ಗ್ರಾಮದ ಕುಮಾರೇಶ್ವರ ವಿದ್ಯಾಸಂಸ್ಥೆಯ ಆಟದ ಮೈದಾನದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರೈಸಿ ಕ್ರೀಡಾ ಚಟುವಟಿಕೆಗೆ ಅನುಕೂಲ ಕಲ್ಪಿಸಿಕೊಡುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಸ್ಥಳೀಯ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಹಾತ್ಮಾ ಗಾಂಧೀ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಳೆದ ವಾರವಷ್ಟೇ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಕೆಲವರು ಸೂಕ್ತ ದಾಖಲೆ ನೀಡಿದೆ ಅನವಶ್ಯಕವಾಗಿ ಕಾಮಗಾರಿ ಸ್ಥಗಿತಗೊಳಿಸಿದ್ದು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೈಗೊಂಡ ನಿರ್ಧಾರ ಸರಿಯಲ್ಲ. ಶಾಲಾ ಮೈದಾನ ವಿದ್ಯಾರ್ಥಿಗಳಿಗೆ ಸೇರಿದ್ದು, ಮಕ್ಕಳ ಹಕ್ಕು ಕಸಿದುಕೊಳ್ಳದಿರಿ. ಪ್ರಾಣ ಬಿಟ್ಟೇವು ಆಟದ ಮೈದಾನ ಬಿಡೆವು ಎಂಬಿತ್ಯಾದಿ ಘೋಷಣೆ ಕೂಗುತ್ತ  ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ತನಕ ಪ್ರತಿಭಟನೆ ನಡೆಸಿ, ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿದರು.
ಇದಕ್ಕೆ ಪೂರಕವಾಗಿ ಗ್ರಾಪಂ ಕಚೇರಿಯಲ್ಲಿ ಕಾಮಗಾರಿ ಆರಂಭಿಸುವ ಕುರಿತು ತುರ್ತು ಸಭೆ  ನಡೆಸಲಾಯಿತು. ಇದಕ್ಕಾಗಿ 20 ಗ್ರಾಮಸ್ಥರು ಹಾಗೂ ಗ್ರಾಂಪಂ ಸದಸ್ಯರ ಸಮಿತಿ ರಚಿಸಲಾಗಿದೆ. ಶನಿವಾರ ಕಾಮಗಾರಿ ಪುನಾರಂಭಿಸಲಾಗುವುದು. ಸಮಸ್ಯೆ ಎದುರಾದರೆ ಸಮಿತಿ ಗಮನಕ್ಕೆ ತರಬೇಕೆಂದು ತಿಳಿಸಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಶಂಕರ ಚೆನ್ನಗೌಡ್ರ, ಮಾಜಿ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಎಸ್.ಬಿ. ಪಾಟೀಲ, ಶಂಬಣ್ಣ ಗೂಳಪ್ಪನವರ, ಸೋಮಣ್ಣ ದ್ಯಾವಕ್ಕಳವರ, ರುದ್ರಪ್ಪ ಬೆನ್ನೂರ, ಗಣೇಶ ವೇಣಂಕರ, ಶ್ರೀಕಾಂತ ಕುಲಕರ್ಣಿ, ರಾಮಣ್ಣ ವಾಲ್ಮಿಕಿ, ಮೆಹಬೂಬಸಾಬ ಮುಲ್ಲಾ, ಮಹ್ಮದ್ ಜಾಫರ ಖಾಜಿ,  ಪಿಡಿಒ ಎನ್.ಎಂ. ಕೋಣಸಾಲಿ, ಕಂದಾಯ ನಿರೀಕ್ಷಕ ಎಸ್.ಬಿ. ಬಿದಿರಿ, ಪಿಎಸ್‌ಐ ವೈ. ಶಿಲ್ಪಾ ಇದ್ದರು.
ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ಮಾರ್ಕೇಡೇರ, ಮನೋಜ ಗೋಣಪ್ಪನವರ, ವಿಜಯ ಮುದಿಗೌಡ್ರ, ಮಧು ರವಿಶೆಟ್ಟರ, ಗಣೇಶ ಸೊಪ್ಪಿನವವರ, ಸುನೀಲ ಹೊಳೆಜೋಗಿ, ಮಾಲತೇಶ ಪಾಟೀಲ, ಪ್ರಶಾಂತ ದ್ಯಾವಕ್ಕಳವರ, ವಿನಾಯಕ ಶಿಗ್ಗಾಂವಕರ, ಬಾಲಾಜಿ ಭೀಮಪ್ಪನವರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.