ಅನಕ್ಷರತೆ ನೀಗಿಸಿ, ಸಾಕ್ಷರತೆ ಮಹತ್ವ ತಿಳಿಸಿ
ರಾಣಿಬೆನ್ನೂರು: ವಿಶ್ವೇಶ್ವರಯ್ಯ ಮೈಸೂರು ದಿವಾನರಾಗಿದ್ದಾಗ ಅನಕ್ಷರತೆ ನಿವಾರಣೆಗಾಗಿ 7 ಸಾವಿರ ರಾತ್ರಿ ಶಾಲೆ ಆರಂಭಿಸಿದರು. ಸಾಕ್ಷರತೆ ಮಹತ್ವವನ್ನು ಜನರಿಗೆ ತಿಳಿಸಲು ಪ್ರೇರಕರು ಶ್ರಮಿಸಬೇಕು ಎಂದು ತಾಪಂ ಉಪಾಧ್ಯಕ್ಷ ಗಣೇಶಪ್ಪ ಬಿಲ್ಲಾಳ ಕರೆ ನೀಡಿದರು. ತಾಪಂ, ಲೋಕ ಶಿಕ್ಷಣ ಸಮಿತಿ ಆಶ್ರಯದಲ್ಲಿ ಮೇಡ್ಲೆರಿ ಗ್ರಾಪಂ ವ್ಯಾಪ್ತಿ 51 ಸಾಕ್ಷರತಾ ಸ್ವಯಂ ಸೇವಕರಿಗಾಗಿ ಏರ್ಪಡಿಸಿದ್ದ 4 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಲೋಕ ಶಿಕ್ಷಣ ಸಮಿತಿ ಸಂಯೋಜಕ ಆರ್.ಡಿ. ಹೊಂಬರಡಿ, ಮಾಜಿ ಸಂಯೋಜಕ ಎಚ್.ಎಚ್. ದೊಡ್ಮನಿ, ಸಂಪನ್ಮೂಲ ವ್ಯಕ್ತಿ ಎಲ್.ಟಿ. ಮಿನಕಪ್ಪಳವರ, ಎಸ್ಡಿಎಂಸಿ ಅಧ್ಯಕ್ಷ ದಿಳ್ಳೆಪ್ಪ, ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ಪ್ರಧಾನಗುರು ವಿ.ವಿ. ಮಣ್ಣಬಸಣ್ಣನವರ, ಸಿ.ಎಚ್. ಕುಸನೂರು, ಜಿಲ್ಲಾ ಸಂಯೋಜಕ ಎಲ್.ವಿ. ನಾಯ್ಕರ, ಮುಖಂಡ ನಾಗಪ್ಪ, ಗ್ರಾಪಂ ಅಧ್ಯಕ್ಷ ಚನ್ನಮ್ಮ ಬಂಗೇರ, ಪ್ರೇರಕರಾದ ಹಂಸಾ ಅಣ್ಣೇರ, ಭರಮಲಿಂಗಪ್ಪ ಗ್ಯಾರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

