ಹಾವೇರಿ

ಸಂಕ್ಷಿಪ್ತ ಸುದ್ದಿ

Published On :

ಪ್ರತಿಭಾ ಕಾರಂಜಿ: ಜಿಲ್ಲಾ ಮಟ್ಟಕ್ಕೆ ಆಯ್ಕೆ
ಹನುಮಸಾಗರ: 2013-14ನೇ ಸಾಲಿನ ಕುಷ್ಟಗಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಹನುಮಸಾಗರದ ಸರ್ವೋದಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಜಯಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಿರಿಯರ ವೈಯಕ್ತಿಕ ವಿಭಾಗದ ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ ವೈಭವ ಕೊರ್ತಿ, ಸಂಸ್ಕೃತ ಕಂಠಪಾಠ ಸ್ಪರ್ಧೆಯಲ್ಲಿ ಗೋಪಾಲ ಪ್ಯಾಟಿ, ಧಾರ್ಮಿಕ ಪಠಣದಲ್ಲಿ ರಘೋತ್ತಮ ಪುರೋಹಿತ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಹಿಂದಿ ಕಂಠಪಾಠದಲ್ಲಿ ಶಿವರಾಜ ಘೋರ್ಪಡೆ ದ್ವಿತೀಯ, ಸಾಮೂಹಿಕ ವಿಭಾಗದ ದೇಶಭಕ್ತಿಗೀತೆಯಲ್ಲಿ ಕಾಂಚನಾ ಪಾಟೀಲ, ಪಲ್ಲವಿ ಹಡಪದ, ಭವಾನಿ ಕುಂಬಾರ, ತಬಸುಮ ಪತ್ಲಾ, ಅನ್ನಪೂರ್ಣಾ ಬಸ್ವಾ, ನಮೃತಾ ಪಾಟೀಲ ವಿದ್ಯಾರ್ಥಿಗಳ ತಂಡ ತೃತೀಯ ಬಹುಮಾನ ಪಡೆದಿದ್ದಾರೆ. ಹಿರಿಯರ ವೈಯಕ್ತಿಕ ವಿಭಾಗದಲ್ಲಿ ಸಂಸ್ಕೃತ ಕಂಠಪಾಠ ಸ್ಪರ್ಧೆಯಲ್ಲಿ ಶ್ರೀಹರಿ ಪ್ಯಾಟಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಂಸ್ಕೃತ ಧಾರ್ಮಿಕ ಪಠಣದಲ್ಲಿ ವಿಷ್ಣುತೀರ್ಥ ಪುರೋಹಿತ ದ್ವಿತೀಯ, ಲಘು ಸಂಗೀತದಲ್ಲಿ ಪ್ರೀತಿಕಾ ಬಸ್ವಾ ತೃತೀಯ ಸ್ಥಾನ ಪಡೆದಿದ್ದು, ಜಾನಪದ ನೃತ್ಯದಲ್ಲಿ ಪ್ರೀತಿಕಾ ಬಸ್ವಾ, ಅಕ್ಷತಾ ಗುಡಿಕೋಟಿ, ಆಯಿಷಾ ಬಾಗವಾನ್, ಪ್ರಮೋದಿನಿ ಆಶ್ರಿತ, ದೇವಿ ದೇವಳೆ, ಭೂಮಿಕಾ ಬಿಲಕಾರ ಅವರ ತಂಡ ತೃತೀಯ ಬಹುಮಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳಿಗೆ ಸಂಸ್ಥೆ ಅಧ್ಯಕ್ಷ ಸುಭಾಷ ನಾಗೂರ, ಕಾರ್ಯದರ್ಶಿ ಡಾ. ಮಾರುತಿ ರಂಗ್ರೇಜ, ಗೌರವಾಧ್ಯಕ್ಷ ಶ್ರೀನಿವಾಸ ಜಹಗೀರದಾರ ಹಾಗೂ ಶಾಲೆ ಮುಖ್ಯ ಶಿಕ್ಷಕ ರಮೇಶ ಅಂಬಿಗ, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.