ರಂಗಮಂದಿರಕ್ಕೆ ಅನುದಾನ: ಬಣಕಾರ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಡಿ. 30
ತಾಲೂಕಿನ ಯಲಿವಾಲ ಗ್ರಾಮದ ರಂಗಮಂದಿರ ನಿರ್ಮಾಣಕ್ಕೆ ರು. 3 ಲಕ್ಷ ಅನುದಾನ ನೀಡಲಾಗುವುದು. ಮಳಗಿ ಸೇತುವೆಯನ್ನು 5 ಅಡಿ ಎತ್ತರಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುವುದಾಗಿ ಶಾಸಕ ಯು.ಬಿ. ಬಣಕಾರ ತಿಳಿಸಿದರು.
ತಾಲೂಕಿನ ಯಲಿವಾಲದಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದ ಅವರು, ಸಾರ್ವಜನಿಕರು ದೂರವಾಣಿ ಕರೆ ಮಾಡಿ ಸಮಸ್ಯೆ ತಿಳಿಸಿದರೂ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಎಸ್ಸಿ-ಎಸ್ಟಿ ಯೋಜನೆಯಲ್ಲಿ ಗ್ರಾಮದ ಎಲ್ಲ ಕಚ್ಚಾ ರಸ್ತೆಗಳ ಕಾಂಕ್ರೀಟ್ ಹಾಗೂ ಬಸವಣ್ಣ ದೇವಸ್ಥಾನದ ಆವರಣವನ್ನು ಮಲೆನಾಡು ಅಭಿವೃದ್ಧಿ ಯೋಜನೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಕುಮದ್ವತಿ ನದಿಯ ದಡದಲ್ಲಿರುವ ಮಸೀದಿಗೆ ತಡೆಗೋಡೆ ನಿರ್ಮಿಸಲಾಗುವುದು. ಜಿಪಂ ಅನುದಾನದಲ್ಲಿ ಯಲಿವಾಲ ಕ್ರಾಸ್ನಿಂದ ಚಪ್ಪರದಳ್ಳಿ ವರೆಗೆ ಡಾಂಬರೀಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಅಂಜುಮನ್ ಕಮಿಟಿಯವರೂ ಶಾಸಕರನ್ನು ಸನ್ಮಾನಿಸಿದರು. ನಿವೃತ್ತ ಶಿಕ್ಷಕ ಶಶಿಧರಯ್ಯ ಚಪ್ಪರದಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಸುಜಾತಾ ಕೋಟಗಿಮನಿ, ತಾಪಂ ಸದಸ್ಯೆ ಸೋಮಣ್ಣ ಶಿದ್ಲಿಂಗಪ್ಪನವರ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರವೀಂದ್ರ ಮುದಿಯಪ್ಪವರ, ಮುಖಂಡ ದತ್ತಾತ್ರೇಯ ರಾಯ್ಕರ, ಪ್ರಥಮ ದರ್ಜೆ ಗುತ್ತಿಗೆದಾರ ವೀರನಗೌಡ ಮಕರಿ, ಮುಸ್ತಾಕ ದೊಡ್ಮನಿ, ಶಿಕ್ಷಕ ವಿಜಯ ಆಲದಕಟ್ಟಿ, ಎ.ಎ. ಪಾಟೀಲ, ಮರಿಯಪ್ಪ ಹರಿಜನ, ಜಯಪ್ರಕಾಶ, ಪಿ.ಎಸ್. ಚಪ್ಪರದಳ್ಳಿಮಠ, ಮಂಜುನಾಥ ಸೊರಟೂರ, ಸಿ.ಎಸ್. ಮೆಣಸಗಿ, ಹಾಲೇಶ ಚಪ್ಪರದಳ್ಳಿಮಠ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

