ಪಶುಪಾಲನೆಯಿಂದ ದೇಶದ ಪ್ರಗತಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಫೆ.24
ಪಶುಪಾಲನೆಯಿಂದ ದೇಶದ ಪ್ರಗತಿ ಸಾಧ್ಯ. ನಮ್ಮ ಪೂರ್ವಜರು ಪಶುಗಳನ್ನು ಕುಟುಂಬ ಸದಸ್ಯರಂತೆ ರಕ್ಷಣೆ ಮಾಡಿ ಅವುಗಳಿಂದ ತಮ್ಮ ಆದಾಯ ವೃದ್ಧಿಸಿಕೊಳ್ಳುತ್ತಿದ್ದರು. ಆದರೆ, ಇಂದಿನ ಜನರು ಪಶುಗಳು ಮನೆಗೆ ಹೊರೆ ಎಂಬ ನಕಾರಾತ್ಮಕ ಧೋರಣೆ ತೊಡೆದು ಹಾಕಬೇಕೆಂದು ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಎನ್.ಎಫ್. ಕಮ್ಮಾರ ಕರೆ ನೀಡಿದರು.
ತಾಲೂಕಿನ ಕುಂಟನಹೊಸಳ್ಳಿ ಗ್ರಾಮದಲ್ಲಿ ಜರುಗಿದ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಎನ್ಎಸ್ಎಸ್ ವಿಶೇಷ ಶಿಬಿರದಲ್ಲಿ ಬರಡು ದನಗಳ ಚಿಕಿತ್ಸಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.
ಪಶುಸಂಗೋಪನೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಆದಾಯ ಅಭಿವೃದ್ಧಿ ಮಾಡಿಕೊಳ್ಳಬೇಕೆಂದರು. ಬರಡು ದನಗಳ ಚಿಕಿತ್ಸಾ ಕಾರ್ಯಕ್ರಮದಲ್ಲಿ 174 ಜಾನುವಾರುಗಳಿಗೆ ಚಿಕಿತ್ಸೆ ನೀಡಿದರು. ಅವುಗಳಲ್ಲಿ 31 ಆಕಳು, 83 ಎತ್ತು, 60 ಎಮ್ಮೆಗಳಿದ್ದವು.
ಅತಿಥಿ ಡಾ. ವೈ.ವೈ. ಜಾನಕರ ಮಾತನಾಡಿ, ನಮ್ಮ ನೆಲ, ಜಲ, ಭಾಷೆ ರಕ್ಷಿಸಿದರೆ ಪರಿಸರ ರಕ್ಷಣೆಯಾದಂತೆ. ಅದುವೇ ಸ್ವಾವಲಂಬನೆಯ ಬದುಕು ಎಂದರು. ಕೃಷಿ ಪಂಡಿತ ಪ್ರಶಸ್ತಿ ವಿಜೇತ ಮುತ್ತಣ್ಣ ಪೂಜಾರ ಮಾತನಾಡಿ, ರಾಸಾಯನಿಕ ಗೊಬ್ಬರ ಭೂಮಿಯನ್ನು ಬರಡು ಮಾಡುತ್ತದೆ. ಸಾವಯವ ಗೊಬ್ಬರ ಭೂಮಿಯನ್ನು ಸಮೃದ್ಧಗೊಳಿಸುತ್ತದೆ. ಕೃಷಿಕರು ಸಾವಯವದತ್ತ ಗಮನಹರಿಸಬೇಕೆಂದು ಮನವಿ ಮಾಡಿದರು.
ಎಪಿಎಂಸಿ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ.ಪ್ರಕಾಶ ಹೊಳೇರ ಉಪಸ್ಥಿತರಿದ್ದರು. ಜ್ಯೋತಿ ಭಂಡಾರಿ ಪ್ರಾರ್ಥಿಸಿದರು.
ಅಕ್ಷತಾ ಮಹಾರಾಜಪೇಟ ಹಾಗೂ ಸಂಗಡಿಗರು ಎನ್ಎಸ್ಎಸ್ ಗೀತೆ ಹಾಡಿದರು. ವಿಜಯೇಂದ್ರ ತುಪ್ಪದ ಸ್ವಾಗತಿಸಿದರು. ಬಸವರಾಜ ಹುಬ್ಬಳ್ಳಿ ನಿರ್ವಹಿಸಿದರು. ಮಂಜನಾಥ ಲಮಾಣಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

