ರಾಜ್ಯ ಹಾಲು ಉತ್ಪಾದಕ ಸಂಸ್ಥೆ ದೇಶಕ್ಕೆ ಮಾದರಿ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜು. 5
ಕೆಎಂಎಫ್ ಅಭಿವೃದ್ಧಿಯಲ್ಲಿ ಅಧಿಕಾರಿಗಳು, ನೌಕರರ ಶ್ರಮದ ಜತೆಗೆ ಹಾಲು ಉತ್ಪಾದಕ ರೈತರು ಹಾಗೂ ಸಹಕಾರಿ ಸಂಘಗಳ ಸಿಬ್ಬಂದಿ ಶ್ರಮ ಅಪಾರವಾಗಿದೆ. ಅತ್ಯುತ್ತಮ ಸಹಕಾರಿ ವ್ಯವಸ್ಥೆಯಿಂದ ರಾಜ್ಯವು ಹಾಲು ಉತ್ಪಾದನೆಯಲ್ಲಿ ದೇಶದಲ್ಲಿಯೇ ಮಾದರಿಯಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಚಿಕ್ಕಬೂದಿಹಾಳ ಗ್ರಾಮದ ಉದ್ಭವ ಕಲ್ಯಾಣ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ ಧಾರವಾಡ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಬಿ.ಬಿ. ಸಣ್ಣಮನಿ ಮತ್ತು ಎಸ್.ಎಚ್. ಕೆರೂಡಿ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಯು.ಬಿ. ಬಣಕಾರ ಅವರನ್ನು ಸ್ಥಳೀಯ ಹಾಲು ಉತ್ಪಾದಕರ ಸಂಘದ ಆಶ್ರಯದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಶಾಸಕ ಯು.ಬಿ. ಬಣಕಾರ ಮಾತನಾಡಿ, ಜನತೆಯ ಸೇವೆ ಮಾಡುವ ಅವಕಾಶ ದೊರಕಿದ್ದೇ ದೊಡ್ಡ ಸನ್ಮಾನವಾಗಿದೆ. ನನ್ನನ್ನು ಚುನಾವಣೆಯಲ್ಲಿ ಆಶೀರ್ವದಿಸುವುದರೊಂದಿಗೆ ಸನ್ಮಾನಿಸಿ, ಗೌರವಿಸುತ್ತಿರುವುದು ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಹೊರಿಸಿದಂತಾಗಿದೆ ಎಂದರು.
ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಮಾತನಾಡಿ, ಸೇವೆಗೆ ಅವಕಾಶ ಸಿಕ್ಕಾಗ ಜನ ಗುರುತಿಸುವಂತಹ ಕೆಲಸ ಮಾಡಿ ಜನರ ಮನದಲ್ಲಿ ಉಳಿಯಬೇಕು. ನೂತನ ಶಾಸಕರು ಅತ್ಯುತ್ತಮ ಆಡಳಿತ ನೀಡಲಿದ್ದಾರೆ ಎಂದರು.
ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಾಮನಗೌಡ ಕೆಳಗಿನಮನಿ ಅಧ್ಯಕ್ಷತೆ ವಹಿಸಿದ್ದರು. ಕೆಎಂಎಫ್ ಅಧಿಕಾರಿಗಳಾದ ಡಾ. ಆರ್.ಎಸ್. ಹೆಗಡೆ, ವೈ.ಎಂ. ಬಾರಂಗಿ, ಪುರುಷೋತ್ತಮ ಶೆಟ್ರು, ಸಿ.ಬಿ. ಗಿಡ್ಡಪಾಲ, ಸಹಕಾರಿ ಸಂಘಗಳ ನೌಕರರ ಸಂಘದ ಅಧ್ಯಕ್ಷ ಬಸನಗೌಡ ಕವಳಿ, ಕಾರ್ಯದರ್ಶಿ ತೇಜಪ್ಪ ಮುಚಡಿ, ಶಿವಾನಂದ, ಸ್ಥಳೀಯ ಸಂಘದ ಸದಸ್ಯರಾದ ಹನುಮಂತಪ್ಪ ಸೊರಟೂರ, ಈರಯ್ಯ ತಿಮ್ಮೇನಹಳ್ಳಿ, ರಾಮನಗೌಡ ಪ್ಯಾಟಿ, ರಮೇಶ ಪೂಜಾರ, ಕುಬೇರಗೌಡ ಚಿನ್ನಿಕಟ್ಟಿ, ದುರಗಪ್ಪ ಶೆದಿಯಣ್ಣನವರ, ಈರವ್ವ ದೊಡಮನಿ, ಕಾರ್ಯದರ್ಶಿ ಸುಭಾಶ್ಚಂದ್ರ ಸಣ್ಣಮನಿ, ಪ್ರಭಾಕರ ಪ್ಯಾಟಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

