ಪರಂಪರೆ ತಿಳಿಯಲು ಜಾನಪದ ಅಗತ್ಯ
ಶಿಗ್ಗಾವಿ: ನಿಜ ಇತಿಹಾಸ ಮತ್ತು ಪರಂಪರೆಯನ್ನು ತಿಳಿಯಲು ಜಾನಪದ ಅತ್ಯಂತ ಮಹತ್ವದ ಆಕರವಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಅಂಬಳಿಕೆ ಹಿರಿಯಣ್ಣ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ವಿವಿಯಲ್ಲಿ ಬುಧವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಿತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇತಿಹಾಸ ಮತ್ತು ಪರಂಪರೆ ಒಂದು ನಾಣ್ಯದ ಎರಡು ಮುಖಗಳಂತಿದ್ದು, ನಿಜವಾದ ಇತಿಹಾಸ ಮತ್ತು ಪರಂಪರೆಯನ್ನು ತಿಳಿದು, ಅದನ್ನು ಪುನರ್‌ರಚಿಸಿಕೊಳ್ಳಲು ಸಾಧ್ಯವಾಗುವುದು ಜಾನಪದದಿಂದ ಮಾತ್ರ ಎಂದರು.
ಸರ್ಕಾರಕ್ಕೆ ಪ್ರಸ್ತಾವಣೆ: ಜಾನಪದದಲ್ಲಿರುವ ಪಾರಂಪರಿಕ ಜ್ಞಾನ, ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ತಿಳಿದುಕೊಳ್ಳುವ ಉದ್ದೇಶದಿಂದ ಶಾಲಾ ಪಠ್ಯಕ್ರಮಗಳಲ್ಲಿ ಜಾನಪದ ವಿಷಯವನ್ನು ಅಳವಡಿಸುವ ಸಂಬಂಧ ಪ್ರಸ್ತಾವವೊಂದನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದ್ದು, ಜಾನಪದ ಕ್ರೀಡಾ ಕೋಶವನ್ನು ರೂಪಿಸುವ ಉದ್ದೇಶದಿಂದ ತಯಾರಿಸಲಾದ ಕ್ರಿಯಾಯೋಜನೆ ಈಗಾಗಲೇ ಸರ್ಕಾರದ ಮುಂದೆ ಇದೆ ಎಂದು ಕುಲಪತಿಯವರು ಳಿಸಿದರು.
ಸಾಂಸ್ಕೃತಿಕ ಚಟುವಟಿಕೆ ಅಳವಡಿಸಿಕೊಳ್ಳಿ: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಸಾಂಸ್ಕೃತಿಕ ಚಟುವಟಿಕೆಗಳು ಅತ್ಯವಶ್ಯಕ ಎಂದು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ ಸಿ.ಎ. ಸೋಮಶೇಖರಪ್ಪ ಹೇಳಿದರು. ಮೌಲ್ಯಮಾಪನ ಕುಲಸಚಿವರಾದ ಪ್ರೊ ಸ.ಚಿ. ರಮೇಶ, ಹಿರಿಯ ಸಂಶೋಧನಾ ಅಧಿಕಾರಿ ಡಾ ಕೆ. ಪ್ರೇಮಕುಮಾರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಎನ್. ಮೋಹನಕುಮಾರ್ ಪ್ರಾರ್ಥಿಸಿದರು. ಕುಮಾರ ಜಿ.ಎಸ್. ಸಣ್ಣಯ್ಯ ಸ್ವಾಗತಿಸಿದರು. ಎಚ್. ಅಭಿನಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರುತಿ ಕರ್ಜಗಿ ವಂದಿಸಿದರು.
ನಾಡಿನ ಖ್ಯಾತ ಜಾನಪದ ವಿದ್ವಾಂಸರಾದ ಕ್ಯಾತನಹಳ್ಳಿ ರಾಮಣ್ಣ, ಸಂದರ್ಶಕ ಪ್ರಾಧ್ಯಾಪಕ ಡಾ ಕೆ. ಕಮಲಾಕ್ಷ, ಡಾ ಶ್ರೀಶೈಲ ಹುದ್ದಾರ, ಡಾ ರಾಮು ಮೂಲಗಿ, ಕಲಾವಿದರಾದ ಬಸವರಾಜ ಶಿಗ್ಗಾಂವಿ, ವೀರೇಶ ಬಡಿಗೇರ, ಹಜರೇಸಾಬ್ ನದಾಫ್ ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಜರಿದ್ದರು. ಬಳಿಕ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಿತಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಿತಿ ಅಸ್ತಿತ್ವಕ್ಕೆ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಿತಿ ರಚಿಸಲಾಗಿದೆ. ಸಮಿತಿ ಅಧ್ಯಕ್ಷರಾಗಿ ಅಭಿನಯ ಎಚ್. ಕಾರ್ಯದರ್ಶಿಯಾಗಿ ಕುಮಾರ ಸಣ್ಣಯ್ಯ ಜಿ.ಎಸ್, ಖಜಾಂಚಿಯಾಗಿ ಕುಮಾರ ರಾಮು ವಾಲ್ಮೀಕಿ ಆಯ್ಕೆಯಾಗಿದ್ದಾರೆ. ಕುಮಾರ ಗಣೇಶ ಭಜಂತ್ರಿ, ಮಹಾಂತೇಶ ಕಳ್ಳಿಗುಡ್ಡ, ಸಂತೋಷ ಸುಬೇದಾರ, ಮಾರುತಿ ಕರ್ಜಗಿ, ಗಣೇಶ ಘಂಟಿ, ಗಣೇಶ ಚವ್ಹಾಣ, ಪರಸನಗೌಡ ಪಾಟೀಲ, ಸತೀಶ ತಿಮ್ಮಣ್ಣವರ, ಸಾವಿತ್ರಿ ಮೋದಿ, ಅಕ್ಕಮಹಾದೇವಿ ಹಿರೇಮಠ, ಸಲ್ಮಾ ಬೇಗಂ ನದಾಫ್, ಪ್ರಜಾ ಹಿರೇಮಠ, ರಜಿಯಾ ನದಾಫ್, ನಿರ್ಮಲಾ ಎಸ್, ಶಿಲ್ಪಾ ಚಂದನಗೌಡ ಇವರು ಸಮಿತಿ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

