ಭಾಗ್ಯಲಕ್ಷ್ಮಿ, ಪಡಿತರ ಸಮಸ್ಯೆ ನೀಗಿಸಲು ಜನತೆ ಒತ್ತಾಯ
ಶಿಗ್ಗಾಂವಿ: ಭಾಗ್ಯಲಕ್ಷ್ಮಿ ಯೋಜನೆಯಡಿ ಅನುದಾನ ಪಡೆಯುವ ಹೆಣ್ಣು ಮಗುವಿನ ಕುಟುಂಬಗಳಿಗೆ ತೀವ್ರ ತೊಂದರೆಯಾಗುವುದನ್ನು ಹಾಗೂ ಹೊಸ ಪಡಿತರ ಚೀಟಿ ವಿತರಣೆಯಲ್ಲಿ ಆಗುವ ತೊಂದರೆ ತಪ್ಪಿಸುವಂತೆ ಮುಖ್ಯಮಂತ್ರಿಗೆ ತಹಸೀಲ್ದಾರ್ ಮೂಲಕ ರಾಜ್ಯ ಕಾರ್ಮಿಕರ ಹಿತರಕ್ಷಣೆ ಜಾಗೃತ ವೇದಿಕೆ ಪದಾಧಿಕಾರಿಗಳು ಮನವಿ ಸಲ್ಲಿಸಿ ಆಗ್ರಹಿಸಿದರು.
ಶಿಗ್ಗಾಂವಿ ಪಟ್ಟಣದಲ್ಲಿ ಹಾಗೂ ಗ್ರಾಮೀಣ ಪ್ರದೇಶದ ಭಾಗ್ಯಲಕ್ಷ್ಮಿ ಯೋಜನೆ ಬಾಂಡ್ಗಳನ್ನು ವಿತರಿಸುವುದು ಹೆಣ್ಣು ಮಗುವಿನ ಜನನದಿಂದ ಒಂದು ವರ್ಷದೊಳಗಾಗಿ ಅವಕಾಶವಿದ್ದು, ಆದರೆ ಅದಕ್ಕೆ ಬೇಕಾಗುವ ಬಿಪಿಎಲ್ ಕಾರ್ಡ್ ಲಗತ್ತು ಕಡ್ಡಾಯವಿದ್ದು, ಪಡಿತರ ಚೀಟಿ ಕಳೆದ ಎಂಟು ತಿಂಗಳು ಗತಿಸಿದರೂ ಇಲ್ಲಿಯವರೆಗೆ ಯಾರಿಗೂ ಪಡಿತರ ಕಾರ್ಡ್ಗಳು ವಿತರಣೆಯಾಗಿರುವದಿಲ್ಲ. ಇದರಿಂದ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ಗಳನ್ನು ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರದ ಮಹತ್ತರವಾದ ಯೋಜನೆಯನ್ನು ಪಡೆಯಲಾಗದೆ ದೂರುಳಿಯುವಂತಾಗಿದೆ. ತಕ್ಷಣ ಕಾರ್ಡ್ ವಿತರಣೆ ಆಗಬೇಕು. ಇಲ್ಲದಿದ್ದರೆ ತಹಸೀಲ್ದಾರ್ ಕಚೇರಿ ಎದುರು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಶಿಗ್ಗಾಂವಿ ನಗರದ ರೇಶನ್ ಕಾರ್ಡ್ ಪಡೆಯಲು ಬಯೋವುಟ್ರಿಕ್ ಕಡ್ಡಾಯವಾಗಿದ್ದರಿಂದ ಬಯೋವುಟ್ರಿಕ್ ಪಡೆಯಲು ಹೋದರೆ ಪ್ರಾಂಚೈಸಿಗಳು ಸರ್ಕಾರದ ನಿಗದಿತ ದರ ರು. 50ಗಳಿದ್ದರೆ ನೂರಕ್ಕೂ ಹೆಚ್ಚಿಗೆ ಹಣ ವಸೂಲಿ ಮಾಡುತ್ತಿದ್ದಾರೆ.
ತಾಲೂಕು ತಹಸೀಲ್ದಾರ್ಗೆ ಸಾಕಷ್ಟು ಸಲ ಮನವಿ ಸಲ್ಲಿಸಿದರೂ ಯಾವುದೆ ಪ್ರಯೋಜನವಾಗಿರುವುದಿಲ್ಲ. ಇದರಿಂದ ಬಡ ಜನತೆ, ರೈತರು, ಕಾರ್ಮಿಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಜನತೆಗೆ ಆಗುವ ತೊಂದರೆ ನಿವಾರಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಮತ್ತು ಜಾಗೃತಿ ಸಂಘದ ರಾಜ್ಯಾಧ್ಯಕ್ಷ ಫಕ್ಕಿರೇಶ ಆರ್. ಶಿಗ್ಗಾಂವಿ, ತಾಲೂಕು ಅಧ್ಯಕ್ಷ ಜೈಲಾನಿ ಜಂಗ್ಲಿ, ಎನ್.ಡಿ. ಮರಿಗೌಡ ನೂರಾರು ಮಹಿಳೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

