ಹಾವೇರಿ

ಕೃಷಿಗೆ ಇಪ್ಕೋ ಸಹಕಾರಿ ಸಂಸ್ಥೆ ಒತ್ತು

Published On :

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜೂ. 7
ಇಪ್ಕೋ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ- ಆಪರೇಟಿವ್ ಸಂಸ್ಥೆಯ ಸಾಧನೆ ಭಾರತದ ಸಹಕಾರಿ ರಂಗದಲ್ಲಿ ಅದ್ವಿತೀಯವಾಗಿದೆ. 1967ರಲ್ಲಿ ಕೇವಲ 57 ಸಹಕಾರಿ ಸಂಘಗಳ ಸದಸ್ಯತ್ವದಿಂದ ಬರಿ 6 ಲಕ್ಷ ಶೇರು ಬಂಡವಾಳದೊಂದಿಗೆ ಅರಂಭಗೊಂಡು ಇದೀಗ 39,862 ಸಹಕಾರಿ ಸಂಘಗಳ ಸದಸ್ಯತ್ವ ಪಡೆದು ರು. 426 ಕೋಟಿ ಶೇರು ಬಂಡವಾಳ ಹೊಂದುವ ಮೂಲಕ ರೈತರ ಸೇವೆಗೆ ಬದ್ಧವಾಗಿದೆ ಎಂದು ಹುಬ್ಬಳ್ಳಿಯ ಇಪ್ಕೋ ಹಿರಿಯ ವಲಯ ವ್ಯವಸ್ಥಾಪಕ ಎಸ್.ಡಿ. ಮುಕರ್ತಿಹಾಳ ತಿಳಿಸಿದರು.
ಅವರು ಪಟ್ಟಣದ ತರಳಬಾಳು ಸಾಂಸ್ಕೃತಿಕ ಕೇಂದ್ರದಲ್ಲಿ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ- ಆಫರೇಟಿವ್ ಸಂಸ್ಥೆ ಮತ್ತು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾವೇರಿ ಇವರುಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಹಿರೇಕೆರೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವ್ಯವಸ್ಥಾಪಕರಿಗೆ ಸಹಕಾರ ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಕೃಷಿಗೆ ಒತ್ತು
ಇಪ್ಕೋ ಸಂಸ್ಥೆ ವಿಶ್ವದಲ್ಲಿಯೇ ಅತಿ ದೊಡ್ಡ ರಸಾಯನಿಕ ಗೊಬ್ಬರ ಉತ್ಪಾದನೆ ಮತ್ತು ವಿತರಣೆಯನ್ನು ಸಹಕಾರಿ ರಂಗದಲ್ಲಿ ಯಶಸ್ವಿಯಾಗಿ ನಡೆಸುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಐದು ರಾಸಾಯನಿಕ ಗೊಬ್ಬರ ತಯಾರಿಕಾ ಘಟಕಗಳನ್ನು ಆರಂಭಿಸಿದೆ. ಇದುವರೆಗೂ ರು. 25,599 ಕೋಟಿ ವಹಿವಾಟು ನಡೆಸಿ ರು. 772,18 ಕೋಟಿ ಲಾಭ ಮಾಡಿದೆ. ಕಳೆದ 11 ವರ್ಷಗಳಿಂದ ಬಂದ ಲಾಭಾಂಶದಲ್ಲಿ ಶೇ. 20ರಷ್ಟು ಡಿವಿಡೆಂಟ್ ಹಣವನ್ನು ಷೇರುದಾರರ ಸಹಕಾರಿ ಸಂಘಗಳಿಗೆ ಕೊಡುತ್ತಾ ಬಂದಿರುವುದು ಶ್ಲಾಘನೀಯ. ಬರಿ ಗೊಬ್ಬರ ಮಾರಾಟ ಮಾಡದೆ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳಾದ ಹಸಿರೆಲೆ ಗೊಬ್ಬರ ಪ್ರಾತ್ಯಕ್ಷಿಕೆ, ಯಾಂತ್ರಿಕೃತ ಬತ್ತದ ನಾಟಿ, ಕಾಂಪೋಸ್ಟ್ ತಯಾರಿಕೆ ಪ್ರಾತ್ಯಕ್ಷಿಕೆ, ಸೂರ್ಯಕಾಂತಿ ಬೆಳೆಯಲ್ಲಿ ಜೇನು ಸಾಕಣೆ ತಬ್ಬಿನಲ್ಲಿ ಸಮಗ್ರ ತರಗು ನಿರ್ವಹಣೆ, ಮೆತ್ತಿತರ ಕಾರ್ಯಕ್ರಮ ಆಯೋಜಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿದೆ ಎಂದು ಸಂಸ್ಥೆಯ ವಿವರ ನೀಡಿದರು.
ಹಾವೇರಿ ಜಿಲ್ಲೆಯ ಹಿರೇಕೆರೂರಿನ ಟಿಎಪಿಸಿಎಂಎಸ್ ತನ್ನ ದಕ್ಷತೆ ಹಾಗೂ ಪ್ರಾಮಾಣಿಕತೆ ಮೂಲಕ ಸಕಾಲಕ್ಕೆ ಹಣ ನೀಡುವ ಮೂಲಕ ಗೊಬ್ಬರವನ್ನು ಪಡೆಯುವ ಮೂಲಕ ರೈತರ ಮನೆ ಬಾಗಿಲಿಗೆ ತೊಂದರೆ ಇಲ್ಲದೆ ಗೊಬ್ಬರ ವಿತರಿಸುವ ಮೂಲಕ ತಾಲೂಕಿನ ಜೀವನಾಡಿಯಾದ ಸಂಸ್ಥೆಯಾಗಿದೆ ಎಂದರು.
ಸಕಾಲಕ್ಕೆ ಸಾಲ ಮರು ಪಾವತಿಸಿ
ಕೆಸಿಸಿ ಬ್ಯಾಂಕ್ ಅಧ್ಯಕ್ಷ ಬಸವರಾಜ ಸಿಂಧೂರ ಮಾತನಾಡಿ, ಕೆಸಿಸಿ ಬ್ಯಾಂಕ್ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಹಿರೇಕೆರೂರು ತಾಲೂಕಿನ ರೈತರಿಗೆ ಸಹಕಾರಿ ಸಂಘಗಳ ಮೂಲಕ ಸಾಲ ವಿತರಿಸಿದೆ. ಆದರೆ, ಸಾಲ ಪಡೆದ ಸಾಲಗಾರರು ಸಕಾಲಕ್ಕೆ ಮರುಪಾವತಿಸಿ ಪುನಃ ಸಾಲ ಪಡೆಯಲು ಮುಂದಾಗಬೇಕೆಂದು ಮನವಿ ಮಾಡಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ ಪ್ರಾಸ್ತಾವಿಕ ಮಾತನಾಡಿ, 1957ರಲ್ಲಿ ಅರಂಭಗೊಂಡ ಟಿಎಪಿಸಿಎಂಎಸ್ ಇದೀಗ 50 ವರ್ಷಗಳನ್ನು ಪೂರೈಸುವ ಮಲಕ ಹಾವೇರಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಗೊಬ್ಬರ ವಿತರಿಸಿದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 16 ಸಾವಿರ ಟನ್ ಗೊಬ್ಬರ ಮಾರಾಟ ಮಾಡಿ ರಾಜ್ಯದಲ್ಲಿಯೋ ಮಂಚೂಣಿಯಲ್ಲಿದೆ. ಇದಕ್ಕೆ ಕಾರಣ ಬೃಹತ್ ಸಂಸ್ಥೆಯಾಗಿರುವ ಇಪ್ಕೋ ಸಹಕಾರ ನೀಡಿರುವುದನ್ನು ಶ್ಲಾಘಿಸಿದರು.
ಇದೇ ಸಂದರ್ಭ ತಾಲೂಕಿನಲ್ಲಿ ವಿವಿಧ ಸಹಕಾರಿ ಸಂಘಗಳ ನೂತನ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಮಾರಾಟ ವ್ಯವಸ್ಥಾಪಕ ಆಶೋಕ ದೇಶಪಾಂಡೆ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗಾರಜ ಚಪ್ಪರದಳ್ಳಿ,  ಎಸ್‌ಎಸ್. ಬಿರಾದಾರ, ಸಿಇಎಸ್ ಸಂಸ್ಥೆ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ, ವ್ಯವಸ್ಥಾಪಕ ಎಂ.ಎಸ್. ಕೋರಿಗೌಡ್ರ ಜೋತಿಭಾ ಜಾಧವ, ಎಚ್.ಎಸ್. ಸುಣಗಾರ, ಎನ್.ಬಿ. ಗೌರಕ್ಕನವರ, ಎಂ.ಆರ್. ಕೋಡೇರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.